ETV Bharat / entertainment

Watch: ಮಕ್ಕಳ ಜೊತೆ 'ಗೆಳತಿ'ಯನ್ನು ಡಿನ್ನರ್​ಗೆ ಕರೆದೊಯ್ದ ನಟ ಹೃತಿಕ್​ ರೋಷನ್​ - ಈಟಿವಿ ಭಾರತ ಕನ್ನಡ

Hrithik Roshan and Saba Azad: ಮಕ್ಕಳಾದ ಹ್ರೇಹಾನ್​ ರೋಷನ್​ ಮತ್ತು ಹೃದಾನ್​ ರೋಷನ್ ಜೊತೆ ಗೆಳತಿ ಸಬಾ ಅಜಾದ್​ ಅನ್ನು ನಟ ಹೃತಿಕ್​ ರೋಷನ್​ ಡಿನ್ನರ್​ಗೆ ಕರೆದೊಯ್ದಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

Hrithik Roshan and Saba Azad
Watch: ಮಕ್ಕಳ ಜೊತೆ 'ಗೆಳತಿ'ಯನ್ನು ಡಿನ್ನರ್​ಗೆ ಕರೆದೊಯ್ದ ನಟ ಹೃತಿಕ್​ ರೋಷನ್​
author img

By ETV Bharat Karnataka Team

Published : Sep 2, 2023, 5:51 PM IST

ಬಾಲಿವುಡ್​ ನಟ ಹೃತಿಕ್ ರೋಷನ್​ ಮತ್ತು ಸಬಾ ಆಜಾದ್​ ಡೇಟಿಂಗ್​ನಲ್ಲಿದ್ದಾರೆ. ಕಳೆದ ವರ್ಷ ಡಿನ್ನರ್​ ಡೇಟ್​ನಲ್ಲಿ ಕಾಣಿಸಿಕೊಂಡ ಬಳಿಕ ಈ ಜೋಡಿ ಕುರಿತ ಅಂತೆಕಂತೆಗಳು ಹರಿದಾಡಲು ಪ್ರಾರಂಭವಾದವು. ಡಿನ್ನರ್​ ಡೇಟ್​ ಬಳಿಕ ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್​ ಜೋಹರ್​ ಅವರ 50ನೇ ವರ್ಷದ ಬರ್ತ್​ಡೇ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ನಂತರ ಇಬ್ಬರೂ ಹಲವು ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡು ಸದ್ದು ಮಾಡಿದರು.

ಹೃತಿಕ್​ ಮಕ್ಕಳೊಂದಿಗೆ ಸಜಾ ಅಜಾದ್​: ಶುಕ್ರವಾರ ರಾತ್ರಿ ಮುಂಬೈನಲ್ಲಿ ಹೃತಿಕ್​ ರೋಷನ್​ ಜೊತೆ ಸಬಾ ಅಜಾದ್​ ಕಾಣಿಸಿಕೊಂಡರು. ಈ ವದಂತಿ ಜೋಡಿ ಜೊತೆ ಹೃತಿಕ್​ ರೋಷನ್​ ಮಕ್ಕಳಾದ ಹ್ರೇಹಾನ್​ ರೋಷನ್​ ಮತ್ತು ಹೃದಾನ್​ ರೋಷನ್​ ಸೇರಿಕೊಂಡರು. ಈ ನಾಲ್ವರು ಜೊತೆಯಾಗಿ ಸಂತೋಷಕರ ಸಂಜೆಯನ್ನು ಎಂಜಾಯ್​ ಮಾಡಿದರು. ಈ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಪಾಪರಾಜಿಗಳು ಹಂಚಿಕೊಂಡಿದ್ದಾರೆ. ಹೃತಿಕ್​ ರೋಷನ್​ ಮಕ್ಕಳೊಂದಿಗೆ ಸಬಾ ಅಜಾದ್​ ಕಾಣಿಸಿಕೊಂಡಿರುವುದು ಸದ್ಯ ವೈರಲ್​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲೇನಿದೆ?: ಹೃತಿಕ್​ ರೋಷನ್​ ತಮ್ಮ ಮಕ್ಕಳು ಮತ್ತು ಗೆಳತಿ ಸಬಾ ಆಜಾದ್​ ಅವರನ್ನು ಮುಂಬೈನ ಬಿಗ್​ ರೆಸ್ಟೋರೆಂಟ್​ಗೆ ಕರೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ಈ ನಾಲ್ವರ ಬ್ಯೂಟಿಫುಲ್​ ಮೂಮೆಂಟ್​ ಅನ್ನು ಕ್ಯಾಪ್ಚರ್​ ಮಾಡಲು ಪಾಪರಾಜಿಗಳು ತಮ್ಮ ಕ್ಯಾಮರಾಗಳೊಂದಿಗೆ ಅಲ್ಲಿ ಸಿದ್ಧರಿದ್ದರು. ಸಬಾ ಅಜಾದ್​, ಹೃತಿಕ್​ ರೋಷನ್​ ಮತ್ತು ಹ್ರೇಹಾನ್​ ರೋಷನ್​ ಹಾಗೂ ಹೃದಾನ್​ ರೋಷನ್ ಕಾರಿನಿಂದ ಇಳಿದು ಜೊತೆಯಾಗಿ ರೆಸ್ಟೋರೆಂಟ್​ಗೆ ತೆರಳುತ್ತಿರುವುದನ್ನು ಕಾಣಬಹುದು.

ಈ ಸುಂದರ ಸಂಜೆಗಾಗಿ ಹೃತಿಕ್​ ರೋಷನ್​ ಬಿಳಿ ಟೀ ಶರ್ಟ್​ ಮತ್ತು ಖಾಕಿ ಪ್ಯಾಂಟ್​ನಲ್ಲಿ ಸ್ಟೈಲಿಶ್​ ಆಗಿ ಕಾಣಿಸಿಕೊಂಡರು. ಮತ್ತೊಂದೆಡೆ ಸಬಾ ಅಜಾದ್​ ಚಿಕ್​ ನೀಲಿ ಬಾಡಿಕಾನ್​ ಡ್ರೆಸ್​ನಲ್ಲಿ ಬ್ಯೂಟಿಫುಲ್​ ಆಗಿ ಕಂಡರು. ಹೃತಿಕ್​ ರೋಷನ್​ ಮಕ್ಕಳಾದ ಹೃದಾನ್ ರೋಷನ್​​ ಬಿಳಿ ಟೀ ಶರ್ಟ್​ ಮತ್ತು ಬೂದು ಬಣ್ಣದ ಪ್ಯಾಂಟ್​ ಅನ್ನು ಆಯ್ದುಕೊಂಡರು. ಹ್ರೇಹಾನ್​ ರೋಷನ್ ಕಪ್ಪು ಟೀ ಶರ್ಟ್​ ಮತ್ತು ಇದ್ದಿಲು ಬಣ್ಣದ ಪ್ಯಾಂಟ್​ ಧರಿಸಿದ್ದರು. ಈ ನಾಲ್ವರು ಬಿಳಿ ಬಣ್ಣದ ಸ್ನೀಕರ್​ಗಳೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ: ಸಿನಿಮಾ ಹೊರತಾಗಿ ಯಾವುದೂ ಕೂಡ ಯಾರ ವ್ಯವಹಾರವೂ ಅಲ್ಲ: ಡೇಟಿಂಗ್​ ವದಂತಿಗೆ ಹೃತಿಕ್​ ರೋಷನ್ ಗೆಳತಿಯ ಪ್ರತಿಕ್ರಿಯೆ

ಹೃತಿಕ್​ ರೋಷನ್​ ಹಾಗೂ ಸಬಾ ಆಜಾದ್​ ಕಳೆದ ಒಂದು ವರ್ಷದಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಹೃತಿಕ್​ ರೋಷನ್​ ಅವರು ಅವರ ಮೊದಲ ಪತ್ನಿ ಸುಸ್ಸಾನ್ನೆ ಖಾನ್​ ಅವರಿಗೆ ವಿಚ್ಛೇದನ ನೀಡಿದ ಕೆಲವು ವರ್ಷಗಳ ನಂತರ ಹೃತಿಕ್​ ರೋಷನ್​ ಹಾಗೂ ಸಬಾ ಅವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಮೊದಲ ಪತ್ನಿಗೆ ಹೃತಿಕ್​ ವಿಚ್ಛೇದನ ನೀಡಿದ್ದರೂ ಇಂದಿಗೂ ಇಬ್ಬರೂ ಸ್ನೇಹಿತರಾಗಿಯೇ ಇದ್ದಾರೆ. ತಮ್ಮ ಇಬ್ಬರು ಪುತ್ರರಾದ ಹ್ರೇಹಾನ್​ ಹಾಗೂ ಹೃದಾನ್​ ಅವರಿಗೆ ಪೋಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಸ್ಸಾನ್ನೆ ಖಾನ್​ ಅವರು ಸದ್ಯ ಅಲಿ ಖಾನ್​ ಅವರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ. ಸುಸ್ಸಾನ್ನೆ ಸಬಾ ಆಜಾದ್​ ಜೊತೆಗೂ ಉತ್ತಮ ಗೆಳೆತನ ಹೊಂದಿದ್ದಾರೆ.

ಹೃತಿಕ್​ ರೋಷನ್​ ಸಿನಿಮಾಗಳು: ಮುಂದಿನ ವರ್ಷ ಜನವರಿ 25ರಂದು ಬಿಡುಗಡೆಯಾಗಲಿರುವ ಸಿದ್ಧಾರ್ಥ್ ಆನಂದ್ ಅವರ ಫೈಟರ್ ಚಿತ್ರದಲ್ಲಿ ಹೃತಿಕ್​ ರೋಷನ್​ ಅವರು ದೀಪಿಕಾ ಪಡುಕೋಣೆ ಜೊತೆ ತೆರೆ ಹಂಚಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನಿಂದ ತಯಾರಾಗುತ್ತಿರುವ ವಾರ್ 2 ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ RRR ಸ್ಟಾರ್ ಜೂನಿಯರ್ NTR ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಬಾ ಆಜಾದ್ ಪ್ರತಿಭಾನ್ವಿತ ಕಲಾವಿದೆ. ನಟಿ ಸಬಾ ಆಗಾಗ್ಗೆ ತಮ್ಮ Instagram ನಲ್ಲಿ ತನ್ನ ಗಿಗ್‌ಗಳ ಗ್ಲಿಂಪ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಟಿರಾಗಿಯೂ ಸಕ್ರಿಯರಾಗಿದ್ದಾರೆ. ಅವರ ಮುಂಬರುವ ಚಲನಚಿತ್ರ ಸಾಂಗ್ಸ್​ ಆಫ್​ ಪ್ಯಾರಡೈಸ್​ನಲ್ಲಿ ಸೋನಿ ರಜ್ದಾನ್​ ಅವರೊಂದಿಗೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: Fighter: ವಾಯುಪಡೆ ಅಧಿಕಾರಿಗಳ ಪಾತ್ರದಲ್ಲಿ ಹೃತಿಕ್​, ದೀಪಿಕಾ, ಅನಿಲ್​ ಕಪೂರ್: ಫೈಟರ್ ಮೋಷನ್​ ಪೋಸ್ಟರ್ ರಿಲೀಸ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.