ಬಾಲಿವುಡ್ ನಟಿ ಹಿನಾ ಖಾನ್ ಅವರ ಇತ್ತೀಚಿನ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿತ್ತು. ದ್ರೋಹ (betrayal) ಎಂದು ಸೂಚಿಸಿದ್ದ ಆ ಪೋಸ್ಟ್ನಿಂದಾಗಿ ಹಿನಾ ಖಾನ್ ಲವ್ ಲೈಫ್ ಸರಿಯಿಲ್ಲ ಎಂದು ವರದಿ ಆಗಿತ್ತು. ಹಿನಾ ಮತ್ತು ಗೆಳೆಯ ರಾಕಿ ಜೈಸ್ವಾಲ್ ಅವರ 13 ವರ್ಷಗಳ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಆಗಿತ್ತು. ಇದೀಗ ಹಿನಾ ಖಾನ್ ಹೊಸ ಪೋಸ್ಟ್ ಆ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದೆ.
- " class="align-text-top noRightClick twitterSection" data="
">
'ಷಡ್ಯಂತ್ರ' (Shadyantra) ಚಿತ್ರದ ಟೀಸರ್ ಅನ್ನು ಹಿನಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ನಾನು ಸುಳ್ಳು, ಮೋಸದ ಜಾಲದಲ್ಲಿ ಸಿಕ್ಕಿಬಿದ್ದಿದ್ದೇನೆ. ಈ ಷಡ್ಯಂತ್ರವನ್ನು ಯಾರು ರಚಿಸಿದರು?" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ ನೋಡುತ್ತಿದ್ದರೆ, ನಟಿ ಈ ಮೊದಲು ಹಂಚಿಕೊಂಡಿದ್ದ ದ್ರೋಹ (betrayal) ಪೋಸ್ಟ್ ಈ 'ಷಡ್ಯಂತ್ರ' ಚಿತ್ರಕ್ಕೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗುತ್ತಿದೆ.
![Hina Khan Rocky Jaiswal lovelife](https://etvbharatimages.akamaized.net/etvbharat/prod-images/17136774_thumbnai.jpg)
ವದಂತಿಗಳಿಗೆ ಬ್ರೇಕ್ ಹಾಕಲು ಗೆಳೆಯ ರಾಕಿ ಜೈಸ್ವಾಲ್ ಕೂಡ ಇನ್ಸ್ಟಾಗ್ರಾಮ್ನಲ್ಲಿ ಷಡ್ಯಂತ್ರ ಟೀಸರ್ ಅನ್ನು ಹಂಚಿಕೊಂಡು "ಕ್ವೀನ್ ಮತ್ತೆ ಬಂದಿದ್ದಾರೆ" ಎಂದು ಬರೆದುಕೊಡಿದ್ದಾರೆ. ಈ ಜೋಡಿ ಪ್ರೀತಿಯಲ್ಲಿರುವುದನ್ನು ಅರಿತ ಹಿನಾ ಖಾನ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಸಂತಸಗೊಂಡಿದ್ದಾರೆ.
ಇದನ್ನೂ ಓದಿ: ಸಾರಾ ಅಲಿ ಖಾನ್ ಹೊಸ ಸಿನಿಮಾ ಯಾವುದು? ಖುಷಿ ಸುದ್ದಿ ಹಂಚಿದ ಬಾಲಿವುಡ್ ಬೆಡಗಿ
ಹಿನಾ ಮತ್ತು ರಾಕಿ ಬೇರೆಯಾಗುತ್ತಾರೆ ಎಂಬ ವದಂತಿಗಳು ವೈರಲ್ ಆಗಿದ್ದು, ಇದೇ ಮೊದಲೇನು ಅಲ್ಲ. 2021ರಲ್ಲಿಯೂ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಜೋಡಿ ಮಾತ್ರ ವರ್ಷ ಕಳೆದಂತೆಲ್ಲ ತಮ್ಮ ಪ್ರೀತಿಯನ್ನು ಗಟ್ಟಿಗೊಳಿಸುತ್ತಾ ಮುಂದೆ ಸಾಗುತ್ತಿದ್ದಾರೆ.