ಹೈದರಾಬಾದ್: ನಟಿ ಹನ್ಸಿಕಾ ಮೋಟ್ವಾನಿ ಗಂಡನ ಮನೆಗೆ ಪ್ರವೇಶ ಮಾಡಿದ್ದಾರೆ. ಬಲಗಾಲಿಟ್ಟು ಮೊದಲ ಬಾರಿ ಗೃಹ ಪ್ರವೇಶ ಮಾಡಿದ ತಾರೆ ಹನ್ಸಿಕಾ, ನೇರ ಅಡುಗೆ ಮನೆಗೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲದೇ ಪ್ರೀತಿಯಿಂದ ಪತಿ ಪತಿ ಸೊಹೈಲ್ ಕಥುರಿಯಾ ಹಾಗೂ ಅವರ ತಾಯಿಗೆ (ಅತ್ತೆ) ಹಲ್ವಾ ಮತ್ತು ಬಿಸಿ ಕಡುಬು ತಯಾರಿಸಿ ತಿನ್ನಿಸಿದರು.
- " class="align-text-top noRightClick twitterSection" data="
">
ಮದುವೆ ಬಳಿಕ ಮೊದಲ ಬಾರಿ ಅಡುಗೆಮನೆ ಪ್ರವೇಶ ಮಾಡಿದ ಅವರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೈಗೆ ಹಚ್ಚಿಕೊಂಡಿದ್ದ ಗೋರಂಟಿ ಇನ್ನೂ ಹಾಗೆ ಇದೆ. ಅಲ್ಲದೇ ಝೆಲ್ ಝೆಲ್ ಎಂದು ಸುದ್ದು ಮಾಡುತ್ತಿರುವ ಬಳೆ, ಆಕಾಶ ನೀಲಿ ಧಿರಿಸು ನಟಿಯನ್ನು ನವವಿವಾಹಿತೆಯಾಗಿ ಇನ್ನೂ ಕಂಗೊಳಿಸುವಂತೆ ಮಾಡಿದೆ. ಡಿಸೆಂಬರ್ 4 ರಂದು ರಾಜಸ್ಥಾನದ 450 ವರ್ಷಗಳಷ್ಟು ಹಳೆಯದಾದ ರಾಜಮನೆತನದ ಕೋಟೆಯಲ್ಲಿ ಉದ್ಯಮಿ ಸೊಹೈಲ್ ಕಥುರಿಯಾ ಅವರ ಜೊತೆ ಹಸೆಮಣೆ ಏರುವ ಮೂಲಕ ಹನ್ಸಿಕಾ ದಾಪಂತ್ಯ ಜೀವನಕ್ಕೆ ಕಾಲಿಟ್ಟರು.
ಮದುವೆಗೆ ಮುನ್ನ ಮೆಹಂದಿ, ಸಂಗೀತ, ಹಳದಿ ಸೇರಿದಂತೆ ಬಗೆ ಬಗೆಯ ಶಾಸ್ತ್ರಗಳ ಫೋಟೋ, ವಿಡಿಯೋಗಳನ್ನು ಹನ್ಸಿಕಾ ಹಂಚಿಕೊಂಡಿದ್ದರು. ಮೆಹಂದಿ ದಿನದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದವು. ವಿವಾಹ ಮಹೋತ್ಸವದ ನಂತರ ಸ್ಟಾರ್ ದಂಪತಿ ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ರಿಸೆಪ್ಶನ್ ಆಯೋಜಿಸಲಿದ್ದಾರೆ ಎನ್ನಲಾಗುತ್ತಿದೆ.
ಜೈಪುರದ ಮಂಡೋಟಾ ಕೋಟೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ ತಾರಾ ಜೋಡಿಯ ಈ ಮದುವೆಗೆ ಆತ್ಮೀಯರು, ಚಿತ್ರರಂಗದವರು ಸಾಕ್ಷಿಯಾಗಿದ್ದರು. ಮುಂದಿನ ಜೀವನ ಸುಖಕರವಾಗಿರಲಿ ಎಂದು ಸಾವಿರಾರು ಅಭಿಮಾನಿಗಳು ಹಾಗೂ ಸಿನಿಮಾ ರಂಗದವರು ಫೋಟೋ ಹಂಚಿಕೊಳ್ಳುವ ಮೂಲಕ ಈ ನವಜೋಡಿಗೆ ಹಾರೈಸಿದ್ದಾರೆ.
ಇದನ್ನೂ ಓದಿ: 'ಖಾಕಿ'ಗೆ ಸ್ಫೂರ್ತಿಯಾಗಿದ್ದ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅಮಾನತು!