ETV Bharat / entertainment

ಗಣೇಶ್ ಜೊತೆ ನಟಿಸುವ ಅವಕಾಶಗಳು ಮತ್ತಷ್ಟು ಸಿಗಲಿ: ನಟ ಅನಂತ್​ ನಾಗ್ - sandalwood actor Anantnag

ನನ್ನದು ಹಾಗೂ ಗಣೇಶ್ ಅವರ ಸ್ಟೈಲ್ ಆಫ್‌ ಆ್ಯಕ್ಟಿಂಗ್‌ ಒಂದೇ ರೀತಿ ಇದೆ. ಗಣೇಶ್, ದಿಗಂತ್, ಪವನ್ ಕುಮಾರ್ ಜೊತೆ ನಟಿಸುವ ಅವಕಾಶಗಳು ಮತ್ತಷ್ಟು ಸಿಗಲಿ ಎಂದು ನಟ ಅನಂತ್​ ನಾಗ್ ಆಶಿಸಿದರು.

sandalwood actor Anant nag compliments on Ganesh
ನಟ ಅನಂತ್​ ನಾಗ್, ಗಣೇಶ್
author img

By

Published : Aug 19, 2022, 4:28 PM IST

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ 2 ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಖಾಸಗಿ ಹೋಟೆಲ್​​ನಲ್ಲಿ ಸೇರಿ ಅನುಭವ ಹಂಚಿಕೊಂಡಿತ್ತು. ಈ ವೇಳೆ ಮಾತನಾಡಿದ ಹಿರಿಯ ನಟ ಅನಂತ್​ ನಾಗ್, ನಟ ಗಣೇಶ್​ ಗುಣಗಾನ ಮಾಡಿದರು.

"ನನ್ನದು ಹಾಗೂ ಗಣೇಶ್ ಅವರ ಸ್ಟೈಲ್ ಆಫ್ ಆ್ಯಕ್ಟಿಂಗ್ ಒಂದೇ ರೀತಿ ಇದೆ. ಗಣೇಶ್ ಎದುರಿಗಿದ್ದರೆ ನನ್ನ ಅಭಿನಯ ಮತ್ತಷ್ಟು ಚೆನ್ನಾಗಿ ಆಗುತ್ತದೆ" ಎಂದರು. ಈ ಸಂದರ್ಭದಲ್ಲಿ ಗಣೇಶ್ ಕೂಡ ಅನಂತ್​ನಾಗ್ ಮಾತುಗಳಿಗೆ ಮನಸೋತು ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ನಟ ಅನಂತ್​ ನಾಗ್

ಮಾತು ಮುಂದುವರಿಸಿದ ಅನಂತ್ ನಾಗ್‌, "ಗಣೇಶ್, ದಿಗಂತ್, ಪವನ್ ಕುಮಾರ್ ಜೊತೆ ನಟಿಸುವ ಅವಕಾಶಗಳು ಮತ್ತಷ್ಟು ಸಿಗಲಿ. ನಿರ್ದೇಶಕ ಯೋಗರಾಜ್ ಭಟ್​ಗೆ ಇರುವ ಎಜುಕೇಷನ್ ಸಿಸ್ಟಮ್ ಈ ಚಿತ್ರದಲ್ಲಿ ಬಹಳ ಸೂಕ್ಷ್ಮವಾಗಿ ಗೊತ್ತಾಗುತ್ತದೆ. ಅದು ಯೋಗರಾಜ್​ ಭಟ್ ಅವರಿಗಿರುವ ವಿಶೇಷ ಕಲೆ" ಎಂದರು.

ಇದನ್ನೂ ಓದಿ: ಭಟ್ರೇ, ನೀವು ನನಗಾಗಿ ಬರೆಯುವ ಸ್ಕ್ರಿಪ್ಟ್​ಗೆ ಸದಾ ಋಣಿ: ನಟ ಗಣೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.