ETV Bharat / entertainment

ಸ್ಯಾಂಡಲ್​ವುಡ್​ನಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಿವು.. - kannada top news

ಪ್ರಥಮ್​ ಅಭಿನಯದ ‘ನಟ ಭಯಂಕರ’, ನೈಜ ಕಥೆಯನ್ನಾಧರಿಸಿದ ‘ತನುಜಾ’, ಹೊಸಬರ ‘ಸ್ಮರಾಮಿ’ ಚಿತ್ರಗಳು ಈ ವಾರ ತೆರೆಗೆ ಬರ್ತಿವೆ.

films-releasing-this-week-in-sandalwood
ಸ್ಯಾಂಡಲ್​ವುಡ್​ನಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳು
author img

By

Published : Feb 2, 2023, 10:58 PM IST

2023ನೇ ವರ್ಷ ಕನ್ನಡ ಚಿತ್ರರಂಗಕ್ಕೆ ಅಂದುಕೊಂಡಂತೆ ಶುಭಾರಂಭ ನೀಡಿಲ್ಲ. ಯಾಕೆಂದರೆ ಹೊಸ ವರ್ಷದ ಜನವರಿ ತಿಂಗಳಲ್ಲಿ 17 ಸಿನಿಮಾಗಳು ಬಿಡುಗಡೆಯಾಗಿ, ಸೈಲೆಂಟ್ ಆಗಿ ಸೈಡಿಗೆ ಸರಿದಿವೆ. ಈಗ ಫೆಬ್ರವರಿ ಮೊದಲ ವಾರದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಯಾವುದೇ ಸ್ಟಾರ್ ನಟರ ಚಿತ್ರಗಳಿಲ್ಲದೇ ಮೂರು ಚಿತ್ರಗಳು ಬಿಡುಗಡೆ ಆಗುತ್ತಿವೆ. ಬಿಗ್‌ಬಾಸ್ ಪ್ರಥಮ್ ಅಭಿನಯದ ನಟ ಭಯಂಕರ, ಹೊಸ ಪ್ರತಿಭೆಗಳು ನಟಿಸಿರೋ ತನುಜಾ ಹಾಗು ಸ್ಮರಾಮಿ ಚಿತ್ರಗಳು ಪ್ರೇಕ್ಷಕರ ಮುಂದೆ ಬರ್ತಿವೆ.

ಪ್ರಥಮ್ ಅಭಿನಯಿಸಿ ನಿರ್ದೇಶನ ಮಾಡಿರುವ ‘ನಟ ಭಯಂಕರ’ ಚಿತ್ರ ನಾಳೆ ಬಿಡುಗಡೆ ಆಗುತ್ತಿದೆ. ಪೋಸ್ಟರ್‌ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದ ಪ್ರಚಾರವನ್ನು ಪ್ರಥಮ್ ರಾಜಕಾರಣಿಗಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್​ಗಳ ಕೈಯಲ್ಲಿ ಮಾಡಿಸಿದ್ದಾರೆ. ಚಿತ್ರದ ವಿಭಿನ್ನ ಪೋಸ್ಟರ್‌ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿ, ಪೋಸ್ಟರ್ ತುಂಬಾ ಚೆನ್ನಾಗಿದೆ. ನೀವು ಪ್ರಚಾರ ಮಾಡುವ ರೀತಿಯು ವಿಭಿನ್ನ ಎಂದಿದ್ದರು.

ಚಿತ್ರಕ್ಕಾಗಿ ಉಪೇಂದ್ರ ಹಾಡಿರುವ ಹಾಡು, ಧ್ರುವ ಸರ್ಜಾ ನೀಡಿರುವ ಧ್ವನಿಗೆ ಸಾಕಷ್ಟು ಪ್ರಶಂಸೆ ಸಿಕ್ಕಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಪ್ರಥಮ್ ಜೊತೆಗೆ ನಿಹಾರಿಕಾ ಶೆಣೈ, ಸುಷ್ಮಿತಾ ಜೋಶಿ ಇಬ್ಬರು ನಾಯಕಿಯರು ಜೋಡಿಯಾಗಿದ್ದಾರೆ. ಇದರ ಜೊತೆಗೆ ಹಿರಿಯ ನಟ ಸಾಯಿಕುಮಾರ್, ಓಂಪ್ರಕಾಶ್ ರಾವ್, ಶೋಭಾರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮಾ, ಬಿರಾದಾರ್, ಎಂ.ಎಸ್ ಉಮೇಶ್ ಹೀಗೆ ದೊಡ್ಡ ತಾರಬಳಗ ಚಿತ್ರದಲ್ಲಿದೆ. ಉದಯ್ ಕೆ ಮೆಹ್ತಾ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಪ್ರಥಮ್ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ.

ನಟ ಭಯಂಕರ ಸಿನಿಮಾ ಜೊತೆಗೆ ‘ತನುಜಾ’ ಎಂಬ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಶೀರ್ಷಿಕೆಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಗಮನ‌‌ ಸೆಳೆಯುತ್ತಿರೋ ‘ತನುಜಾ’ ಚಿತ್ರ ಶಿವಮೊಗ್ಗದ ಹುಡುಗಿಯೊಬ್ಬಳ ನೈಜ ಕಥೆಯನ್ನು ಚಿತ್ರ ಒಳಗೊಂಡಿದೆ. ಇಡೀ ದೇಶವೇ ಕೊರೊನಾ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಮಯದಲ್ಲಿ ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆಯುತ್ತಾರೆ. ಕೊರೊನಾ ಸಮಯದಲ್ಲಿ ಈಕೆ ಪರೀಕ್ಷೆ ಬರೆಯಲು ಹೇಗೆ ಸಾಧ್ಯವಾಯಿತು ಅನ್ನೋದು ಚಿತ್ರದ ಕಥೆ. ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇನ್ನು ‘ತನುಜಾ’ ಪಾತ್ರದಲ್ಲಿ ಸಪ್ತ ಪಾವೂರ್ ಎಂಬ ಕಲಾವಿದೆ ಅಭಿನಯಿಸಿದ್ದಾರೆ. ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಟ ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ ಅಭಿನಯಿಸಿದ್ದಾರೆ. ಚಿತ್ರವು ಶಿವಮೊಗ್ಗ ಸುತ್ತಮತ್ತ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. ರಘುನಂದನ್ ಎಸ್ ಕೆ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್.ಟಿ ಛಾಯಾಗ್ರಹಣವಿದೆ. ಉಮೇಶ್ ಆರ್.ಬಿ. ಸಂಕಲನವಿದ್ದು, ಆರ್.ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ.ಪ್ರಹ್ಲಾದ್ ಸಂಭಾಷಣೆ ಬರೆದಿದ್ದಾರೆ. ಬಿಯಾಂಡ್​ ವಿಷನ್​ ಸಿನಿಮಾಸ್​ ಅಡಿ ಸಿನಿಮಾಗೆ ಬಂಡವಾಳ ಹೂಡಿದೆ.

ಈ ಎರಡು ಚಿತ್ರಗಳ ಮಧ್ಯೆ ಹೊಸ ಪ್ರತಿಭೆಗಳಾದ ‘ಸ್ಮರಾಮಿ’ ಚಿತ್ರ ಕೂಡ ರಿಲೀಸ್ ಆಗುತ್ತಿದೆ. ಯುವ ಪ್ರತಿಭೆ ಶಿವರಾಮಕೃಷ್ಣ ಸಿನಿಮಾವನ್ನು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿ ಅಭಿನಯಿಸಿದ್ದಾರೆ. ಭಿನ್ನ ಕಥೆ ಹೊಂದಿರುವ ಸಿನಿಮಾದಲ್ಲಿ ಬಹುತೇಕ ಹೊಸ ಮುಖಗಳೇ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ತಾಜಾ ಕಥೆ ಜೊತೆಗೆ ಒಂದಿಷ್ಟು ಕಮರ್ಷಿಯಲ್ ಅಂಶಗಳಿವೆ. ಶಿವರಾಮಕೃಷ್ಣ ಜೋಡಿಯಾಗಿ ನಂದಿನಿ ನಟರಾಜ್ ನಟಿಸಿದ್ದಾರೆ. ಇವರ ಜೊತೆಗೆ ಗಿರೀಶ್ ಜತ್ತಿ, ಚಿತ್ಕಲಾ ಬಿರಾದಾರ್, ಎಂ.ಕೆ.ಮಠ. ಪಿ.ಡಿ.ಪ್ರೇಮ್ ತಾರಾಗಣವಿದೆ. ಎಸ್ಆರ್​ಆರ್ ಇಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ರವಿಕುಮಾರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: 'ಕಬ್ಜ' ಚಿತ್ರದ ತೆಲುಗು ವಿತರಣಾ ಹಕ್ಕುಗಳು ನಟ ನಿತಿನ್ ಪಾಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.