ಹಿಂದಿ ಬಿಗ್ ಬಾಸ್ ಒಟಿಟಿ 2ರ ವಿಜೇತ ಎಲ್ವಿಶ್ ಯಾದವ್ (Elvish Yadav) ಅವರು ಇತ್ತೀಚೆಗೆ ತಾವು ಗೆದ್ದಿರುವ ಟ್ರೋಫಿಯನ್ನು ಹಿಂದಿರುಗಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ, ಬಿಗ್ ಬಾಸ್ ಟ್ರೋಫಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ. ಟ್ರೋಫಿ ಅಥವಾ ತಮ್ಮ ಗೆಲುವೇ, ಸಮಸ್ಯೆಗಳ ಮೂಲವಾಗಬಹುದು ಎಂದು ಭಾವಿಸಿ ಯೂಟ್ಯೂಬರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಎಲ್ವಿಶ್ - ಅಭಿಷೇಕ್ ಟ್ರೋಲ್: ಎಲ್ವಿಶ್ ಯಾದವ್ ಬಿಗ್ ಬಾಸ್ ಒಟಿಟಿ 2ರಲ್ಲಿ ಗೆದ್ದಾಗಿನಿಂದ ಜನಮನದಲ್ಲಿ ಉಳಿದುಕೊಂಡಿದ್ದಾರೆ. ಈ ಗೆಲುವು ಎಲ್ವಿಶ್ ಅವರ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿದೆ. ಅಲ್ಲದೇ, ಟೀಕೆಗಳಿಗೂ ಅವರು ಗುರಿಯಾಗಿದ್ದಾರೆ. ಪ್ರಸ್ತುತ, ಎಲ್ವಿಶ್ ಯಾದವ್ ಮತ್ತು ಅವರ ಸಹ-ಸ್ಪರ್ಧಿ ಅಭಿಷೇಕ್ ಮಲ್ಹಾನ್ (Abhishek Malhan) ಅವರು ಟ್ರೋಲ್ಗೆ ಸಿಲುಕಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಈ ಸ್ಪರ್ಧಿಗಳನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡುತ್ತಿವೆ. ಆನ್ಲೈನ್ನಲ್ಲಿ ಇವರ ಬಗ್ಗೆ ಟೀಕೆಗಳು ತುಂಬಿ ತುಳುಕುತ್ತಿವೆ. ಅವರ ಹೇಳಿಕೆಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ಇವರ ಅಭಿಮಾನಿ ಗುಂಪುಗಳಲ್ಲೂ ಮನಸ್ತಾಪಗಳು ಉಂಟಾಗುತ್ತಿವೆ.
- " class="align-text-top noRightClick twitterSection" data="">
ಎಲ್ವಿಶ್ ಯಾದವ್ ವಿಡಿಯೋದಲ್ಲೇನಿದೆ....? ಬಿಗ್ ಬಾಸ್ ವಿಜೇತ ಎಲ್ವಿಶ್ ಲೇಟೆಸ್ಟ್ ಆಗಿ ಶೇರ್ ಮಾಡಿರುವ ವಿಡಿಯೋ ಪ್ರಕಾರ, ಅವರು ಹಲವು ತಿಂಗಳ ನಂತರ ಮನೆಗೆ ಮರಳಿದರು. ತಾಯಿಯೊಂದಿಗೆ ಉತ್ತಮ ಸಮಯ ಕಳೆದರು. ಇದ್ದಕ್ಕಿದ್ದಂತೆ, ಅವರು "ಮುಖ್ಯ ವಸ್ತು" ಎಲ್ಲಿದೆ ಎಂದು ವಿಚಾರಿಸಿದರು. ಮನೆಯಲ್ಲಿ ಹುಡುಕಾಟ ನಡೆಸಿದರು. ಬಳಿಕ ಬಿಗ್ ಬಾಸ್ ಟ್ರೋಫಿಯನ್ನು ಕೈಗೆತ್ತಿಕೊಂಡರು. ವಿಡಿಯೋದಲ್ಲಿ, ಎಲ್ವಿಶ್ ಅವರು ಹಾಸ್ಯಮಯವಾಗಿ ಟ್ರೋಫಿಯನ್ನು ತಮ್ಮ ತಾಯಿಗೆ ಹಸ್ತಾಂತರಿಸಿದರು. ನಂತರ, "ಇದನ್ನು ತೆಗೆದುಕೊಳ್ಳಿ, ನಾನು ಟ್ವಿಟರ್‌ನಲ್ಲಿನ ಎಲ್ಲಾ ಪೋಸ್ಟ್‌ಗಳನ್ನು ನೋಡಿದ್ದೇನೆ" ಎಂದು ಹೇಳಿದರು. "ಈ ಟ್ರೋಫಿಯನ್ನು ಕೊರಿಯರ್ ಮಾಡಿ ಮತ್ತು ನನ್ನನ್ನು ಉಳಿಸಿ'' ಎಂದು ಹೇಳಿದ್ದಾರೆ. ನಾನು ನಿಮ್ಮೆಲ್ಲರ ಬಳಿ ಮನವಿ ಮಾಡುತ್ತಿದ್ದೇನೆ. ನನ್ನನ್ನು ಕಾಪಾಡಿ. ಇದು ನಮ್ಮ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ" ಎಂದು ಎಲ್ವಿಶ್ ವಿಡಿಯೋದಲ್ಲಿ ಶೇರ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಸಿಕ್ಕಿರುವ ಶೋ ಪೀಸ್ ಬ್ಲ್ಯಾಕ್ ಹಾರ್ಸ್ ಹೆಡ್ ಅನ್ನೂ ತೋರಿಸಿ, ತಾಯಿ ಬಳಿ ಇದನ್ನೂ ಹಿಂತಿರುಗಿಸುವಂತೆ ಸೂಚಿಸಿದರು. ಆದ್ರೆ ಇದು ಉಡುಗೊರೆ ಎಂದು ಎಲ್ವಿಶ್ ಅವರ ತಾಯಿ ತಿಳಿಸಿದರು. ಎಲ್ವಿಶ್ ಮಾತ್ರ ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ. ಬಿಗ್ ಬಾಸ್‌ಗೆ ಸಂಬಂಧಿಸಿದ ಯಾವುದೇ ವಸ್ತು ಅಥವಾ ಆಸ್ತಿಯನ್ನು ಬಯಸುವುದಿಲ್ಲ ಎಂದು ತಿಳಿಸಿದರು. ತಮ್ಮ ಹಿಂದಿನ ಜೀವನ ನೆನಪಿಸಿಕೊಳ್ಳುತ್ತಾ, ಶಾಂತಿ ಮತ್ತು ಪ್ರೀತಿಯ ಜೀವನ ಹೊಂದಲು ಬಯಸುವುದಾಗಿ ತಿಳಿಸಿದರು.
ಇದನ್ನೂ ಓದಿ: ಗೋಲ್ಡನ್ ಗೌನ್ನಲ್ಲಿ ಗೋಲ್ಡನ್ ಗರ್ಲ್: ಆಕರ್ಷಣೀಯ ನೋಟದಲ್ಲಿ ಅಂದಗಾತಿ ಐಶ್ವರ್ಯಾ ರೈ
ವಿಡಿಯೋದಲ್ಲಿ, ಎಲ್ವಿಶ್ ಯಾದವ್ ಟ್ರೋಫಿ ಮೇಲಿದ್ದ ಬರಹವನ್ನೂ ಸಹ ಓದಿದರು. ಅದಲ್ಲಿ ಎಲ್ವಿಶ್ ಯಾದವ್ ಬಿಗ್ ಬಾಸ್ ಒಟಿಟಿ 2ರ ವಿಜೇತ ಎಂದು ಬರೆಯಲಾಗಿತ್ತು. ಟ್ರೋಲಿಂಗ್ಗೆ ಫುಲ್ ಸ್ಟಾಪ್ ಇಡುವ ನಿಟ್ಟಿನಲ್ಲಿ, ಟ್ರೋಫಿ ತೆಗೆದುಕೊಳ್ಳಲು ಇಚ್ಛಿಸುವ ಯಾರಿಗಾದರೂ ಅದನ್ನು ಕೊಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಅ. 8ರಿಂದ ಬಿಗ್ ಬಾಸ್ ಆಟ ಶುರು; 'ಚಾರ್ಲಿ' ಜೊತೆ 17 ಸ್ವರ್ಧಿಗಳು ದೊಡ್ಮನೆಗೆ ಎಂಟ್ರಿ
ಎಲ್ವಿಶ್ ಅವರು ಕೆಲ ದಿನಗಳ ಹಿಂದೆ, ಸಹೋದರ ಎಂದು ಪರಿಗಣಿಸಿರುವ ವ್ಯಕ್ತಿ ತನ್ನ ವಿರುದ್ಧ ನಕಾರಾತ್ಮಕ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಅದಾದ ಬಳಿಕ ಫ್ಯಾನ್ ವಾರ್ ಪ್ರಾರಂಭವಾಯಿತು. ಎಲ್ವಿಶ್ ಅವರು ಅಭಿಷೇಕ್ ಮಲ್ಹಾನ್ ಅವರನ್ನೇ ಉಲ್ಲೇಖಿಸಿದ್ದು ಎಂದು ನಂಬಲಾಗಿದೆ. ಈ ಸ್ಟೇಟ್ಮೆಂಟ್ ಬಳಿಕ ಇಬ್ಬರ ಅಭಿಮಾನಿಗಳ ಗುಂಪಿನ ನಡುವೆ ವಾದ ವಿವಾದ ಶುರುವಾಗಿದೆ.