ETV Bharat / entertainment

ನಟಿ ಶಿವಲೀಕಾ ಒಬೆರಾಯ್ ಕೈ ಹಿಡಿದ ದೃಶ್ಯಂ 2 ನಿರ್ದೇಶಕ ಅಭಿಷೇಕ್ ಪಾಠಕ್ - ಶಿವಲೀಕಾ ಒಬೆರಾಯ್ ಮದುವೆ

ನಿರ್ದೇಶಕ ಅಭಿಷೇಕ್ ಪಾಠಕ್ ಮತ್ತು ನಟಿ ಶಿವಲೀಕಾ ಒಬೆರಾಯ್ ಗುರುವಾರದಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ.

Abhishek Pathak Shivaleeka Oberoi married
ಅಭಿಷೇಕ್ ಪಾಠಕ್ ಮತ್ತು ನಟಿ ಶಿವಲೀಕಾ ಒಬೆರಾಯ್
author img

By

Published : Feb 10, 2023, 2:16 PM IST

Updated : Feb 10, 2023, 2:45 PM IST

ಸೂಪರ್​ ಹಿಟ್​ ಸಿನಿಮಾ ದೃಶ್ಯಂ 2 ನಿರ್ದೇಶಕ ಅಭಿಷೇಕ್ ಪಾಠಕ್ (Abhishek Pathak) ಅವರು ತಮ್ಮ ಬಹುಕಾಲದ ಗೆಳತಿ, ನಟಿ ಶಿವಲೀಕಾ ಒಬೆರಾಯ್ (Shivaleeka Oberoi) ಅವರೊಂದಿಗೆ ಹಸೆಮಣೆ ಏರಿದ್ದಾರೆ. ಗೋವಾದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಚಿತ್ರರಂಗದ ಆಪ್ತರು ಭಾಗವಹಿಸಿದ್ದರು. ಇಂದು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಮದುವೆಯ ಫೋಟೋ ಹಂಚಿಕೊಂಡಿದ್ದಾರೆ ನವದಂಪತಿ.

ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಗೆ: ಅಭಿಷೇಕ್ ಮತ್ತು ಶಿವಾಲಿಕಾ ಫೆಬ್ರವರಿ 9, 2023ರಂದು ಗೋವಾದಲ್ಲಿ ವಿವಾಹವಾದರು. ಬಾಲಿವುಡ್‌ನ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಗೆಯಲ್ಲಿ ನವ ದಂಪತಿ ಬಹಳ ಸುಂದರವಾಗಿ ಕಾಣಿಸುತ್ತಿದ್ದರು. ನಟಿ ಶಿವಲೀಕಾ ಒಬೆರಾಯ್ ಕೆಂಪು ಲೆಹೆಂಗಾ ಧರಿಸಿ ಕಂಗೊಳಿಸಿದರೆ, ಅಭಿಷೇಕ್ ಪಾಠಕ್ ಬಿಳಿ ಬಣ್ಣದ ಶೇರ್ವಾನಿಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಮದುವೆಗೆ ಅಜಯ್ ದೇವಗನ್, ಕಾರ್ತಿಕ್ ಆರ್ಯನ್, ನುಸ್ರತ್ ಭರುಚಾ, ವಿದ್ಯುತ್ ಜಮ್ವಾಲ್, ಸನ್ನಿ ಸಿಂಗ್, ಭೂಷಣ್ ಕುಮಾರ್, ನಿರ್ದೇಶಕ ಲವ್ ರಂಜನ್, ಇಶಿತಾ ರಾಜ್ ಶರ್ಮಾ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಭಾಗವಹಿಸಿದ್ದರು.

ಅಭಿಷೇಕ್ ಪಾಠಕ್ ಶಿವಲೀಕಾ ಒಬೆರಾಯ್ ನಿಶ್ಚಿತಾರ್ಥ: ಇದಕ್ಕೂ ಮೊದಲು ಅಭಿಷೇಕ್ ಪಾಠಕ್ ಅವರು ಶಿವಾಲಿಕಾ ಒಬೆರಾಯ್ ಅವರೊಂದಿಗೆ ಟರ್ಕಿಯಲ್ಲಿ ಬಹಳ ರೊಮ್ಯಾಂಟಿಕ್ ಶೈಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದರು. ನಿಶ್ಚಿತಾರ್ಥದ ಬಳಿಕ ಈ ಜೋಡಿಯ ಮದುವೆಗೆ ಕಾದು ಕುಳಿತಿದ್ದ ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದ್ದಾರೆ ನಿರ್ದೇಶಕ ಅಭಿಷೇಕ್ ಪಾಠಕ್ ಮತ್ತು ನಟಿ ಶಿವಲೀಕಾ ಒಬೆರಾಯ್.

ಇದನ್ನೂ ಓದಿ: ಶಾರುಖ್​ ಅಭಿಮಾನಿಗಳಿಗೆ ಪ್ರೇಮಿಗಳ ದಿನಕ್ಕೆ ಭರ್ಜರಿ ಗಿಫ್ಟ್​​; ಮರು ಬಿಡುಗಡೆಗೆ ಸಜ್ಜಾಗಿದೆ ಡಿಡಿಎಲ್​ಜೆ

ಅಭಿಷೇಕ್ ಪಾಠಕ್ ಮತ್ತು ಶಿವಲೀಕಾ ಒಬೆರಾಯ್​ ಅವರು ವಿದ್ಯುತ್ ಜಮ್ವಾಲ್ (Vidyut Jammwal) ಅಭಿನಯದ 'ಖುದಾ ಹಫೀಜ್' ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿ ಅದರು. ಅಭಿಷೇಕ್ ಪಾಠಕ್​ ಅವರೇ ನಿರ್ಮಿಸಿರುವ ಈ ಚಿತ್ರದಲ್ಲಿ ಶಿವಲೀಕಾ ಒಬೆರಾಯ್ ಮುಖ್ಯ ಪಾತ್ರ ವಹಿಸಿದ್ದರು. ಬಳಿಕ ಕೆಲ ಸಮಯ ಪ್ರೀತಿಸಿ ಇದೀಗ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಸದ್ಯ 35ರ ಅಭಿಷೇಕ್ ಪಾಠಕ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಅವರ ವಯಸ್ಸು ಕೇವಲ 17 ವರ್ಷ. ಅಭಿಷೇಕ್ ನ್ಯೂಯಾರ್ಕ್‌ನಲ್ಲಿ ಚಲನಚಿತ್ರ ನಿರ್ದೇಶನವನ್ನು ಅಧ್ಯಯನ ಮಾಡಿದ್ದಾರೆ. ನಂತರ 'ಬೂಂದ್' (Boond) ಎಂಬ ಕಿರುಚಿತ್ರವನ್ನು ಮಾಡಿದರು. ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆಯಿತು. ಅದೇ ವೇಳೆ, ಅಭಿಷೇಕ್ ಅವರು ತಮ್ಮ ಮೊದಲ ಬಾಲಿವುಡ್ ಚಿತ್ರ 'ದೃಶ್ಯಂ-2' ಅನ್ನು ನಿರ್ದೇಶಿಸಿದರು. ಇದು 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಅಭಿಷೇಕ್ ನಿರ್ದೇಶಕ ಮಾತ್ರವಲ್ಲದೇ ನಿರ್ಮಾಪಕರೂ ಆಗಿದ್ದು, ‘ಪ್ಯಾರ್ ಕಾ ಪಂಚ್​​ನಾಮಾ’ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಮಹೇಶ್​ ಬಾಬು ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಪತ್ನಿ ನಮ್ರತಾ ಶಿರೋಡ್ಕರ್

ಇನ್ನೂ 27ರ ಶಿವಲೀಕಾ ಒಬೆರಾಯ್ ಓರ್ವ ಉತ್ತಮ ನಟಿಯಾಗಿದ್ದು, ಚೊಚ್ಚಲ ಚಿತ್ರವಾದ ಖುದಾ ಹಫೀಜ್ ಸಿನಿಮಾ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿತು. ಇವರೂ ಕೂಡ ಕೇವಲ ನಟಿಯಾಗಿ ಗುರುತಿಸಿಕೊಳ್ಳದೇ, ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಕಿಕ್ ಮತ್ತು ಹೌಸ್‌ಫುಲ್ 3 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

Last Updated : Feb 10, 2023, 2:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.