ETV Bharat / entertainment

'ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ': ವಿವಾದ ಸೃಷ್ಟಿಸಿದವರಿಗೆ ಡಾಲಿ ಟಾಂಗ್ - dolly dhananjay

ಹೆಡ್ ಬುಷ್ ಸಿನಿಮಾ ವಿವಾದಕ್ಕೊಳಗಾದ ನಟ ಡಾಲಿ ಧನಂಜಯ್​ ಕನಕದಾಸರ ಕೀರ್ತನೆ ಹಂಚಿಕೊಂಡು ತಮ್ಮನ್ನು ದ್ವೇಷಿಸುವವರಿಗೆ ಟಾಂಗ್​ ನೀಡಿದ್ದಾರೆ.

dolly dhananjay tweet on Kanakadasa Jayanti
ಕನಕದಾಸರ ಕೀರ್ತನೆ ಸ್ಮರಿಸಿದ ನಟ ಡಾಲಿ ಧನಂಜಯ್
author img

By

Published : Nov 11, 2022, 3:35 PM IST

ಕನ್ನಡದ ಪ್ರಸಿದ್ಧ ಕೀರ್ತನಕಾರರು, ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರು, ಸಂತ, ಕವಿ, ಸಂಗೀತಗಾರರು, ದಾಸಶ್ರೇಷ್ಠ ಕನಕದಾಸರ ಜಯಂತಿ ಹಿನ್ನೆಲೆ ಹಲವಾರು ನಾಯಕರು ಶುಭ ಕೋರಿ ಕನಕದಾಸರನ್ನು ಸ್ಮರಿಸಿದ್ದಾರೆ. ಹೆಡ್ ಬುಷ್ ಸಿನಿಮಾ ವಿವಾದಕ್ಕೊಳಗಾದ ನಟ ಡಾಲಿ ಧನಂಜಯ್​ ಕೂಡ ಕನಕದಾಸರ ಕೀರ್ತನೆ ಹಂಚಿಕೊಂಡು ತಮ್ಮನ್ನು ದ್ವೇಷಿಸುವವರಿಗೆ ಟಾಂಗ್​ ನೀಡಿದ್ದಾರೆ.

ಹೆಡ್ ಬುಷ್ ಸಿನಿಮಾ ವಿವಾದದ ಬಳಿಕ ಹೊಯ್ಸಳ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್, ತಮ್ಮ ಜೀವನದ ಕೆಲ ಘಟನೆಗಳನ್ನು ಮತ್ತು ಕನಕದಾಸರ ಪದಕ್ಕೂ ಹೋಲಿಕೆ ಮಾಡಿಕೊಂಡು ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದು ಕನಕದಾಸರ ರಚನೆಯಾದರೂ, ಧನಂಜಯ್ ತಮ್ಮ ವೈರಿಗಳಿಗೆ ಈ ಮೂಲಕ ಟಾಂಗ್ ಕೊಟ್ಟಿದ್ದಾರೆ.

''ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ, ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ. ಜನರೊಳಗೆ ಮಾನಭಂಗ ಮಾಡಿದವರಿಗೆ, ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ, ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ, ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ - ಕನಕದಾಸರು''.

  • ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ
    ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ
    ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ
    ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ

    ಜನರೊಳಗೆ ಮಾನಭಂಗ ಮಾಡಿದವರಿಗೆ
    ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ
    ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ
    ಮಹಾನುಭಾವ ಮುಕ್ತಿಯ ಕೊಡುವ
    ನೆಲೆಯಾದಿಕೇಶವ - ಕನಕದಾಸರು

    — Dhananjaya (@Dhananjayaka) November 11, 2022 " class="align-text-top noRightClick twitterSection" data=" ">

''ಕನ್ನಡ ದೀವಿಗೆ ಕನಕದಾಸರ ಜಯಂತಿಯ ಶುಭಾಶಯಗಳು, ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು, ಜ್ಞಾನಭಕ್ತಿ ಕೊಡು ಯಮಗೆ ಇದೊಂದೇ ದೊಡ್ಡದು, ಒಂದು ನೆವದಿಂದ ಎನ್ನ ಕಾಡಿದವರಿಗೆ ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ, ಕಂದಿ ಕುಂದಿ ಯನ್ನ ಬಾಧೆ ಪಡಿಸಿದವರಿಗೆ ಕನ್ಯದಾನದ ಫಲ ಬಂದು ತಟ್ಟಲಿ ಅವರಿಗೆ'' ಎಂಬ ಕನಕದಾಸರ ಕೀರ್ತನೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಟಿ ರಾಧಿಕಾ ಜನ್ಮದಿನ: ಸ್ಯಾಂಡಲ್​ವುಡ್ ಬ್ಯೂಟಿಗೆ ಶುಭಾಶಯಗಳ ಮಹಾಪೂರ

ಪ್ರಗತಿಪರ ವಿಚಾರಧಾರೆಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಧನಂಜಯ್, ಮನುಷ್ಯತ್ವದ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು. ಇದೇ ಅವರಿಗೆ ಮುಳುವಾಗಿತ್ತು. ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಮಾಡಿದ್ದಾರೆ ಎಂದು ವಿವಾದ ಸೃಷ್ಟಿ ಮಾಡಲಾಯಿತು. ಕರಗದ ವಿಚಾರದಲ್ಲೂ ಕಿರಿಕಿಕಿ ಉಂಟಾಯಿತು. ಬಡವರ ಮಕ್ಳು ಬೆಳೆಯಬೇಕು ಎನ್ನುವ ಅವರ ಮಾತನ್ನು ಭಾರೀ ಟ್ರೋಲ್ ಮಾಡಲಾಯಿತು. ಹೀಗೆ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಎಲ್ಲರಿಗೂ ಒಳ್ಳೆಯದೇ ಆಗಲಿ ಎಂದು ಈ ಕನಕದಾಸರ ರಚನೆಯ ಮೂಲಕ ಉತ್ತರಿಸಿದ್ದಾರೆ ಡಾಲಿ ಧನಂಜಯ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.