ವಿಜಯ್ ಕಿರಗಂದೂರು ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ.ಜಿ ರಾಜ್ ನಿರ್ಮಿಸುತ್ತಿರುವ ಉತ್ತರಕಾಂಡ ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ.
ಈ ಹಿಂದೆ ಕೆಆರ್ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ 'ರತ್ನನ ಪ್ರಪಂಚ' ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು. ಇದೇ ಕಾಂಬಿನೇಶನ್ನಲ್ಲಿ 'ಹೊಯ್ಸಳ' ಚಿತ್ರ ಸಹ ಬರುತ್ತಿದೆ. 3ನೇ ಚಿತ್ರವಾಗಿ 'ಉತ್ತರಕಾಂಡ' ನಿರ್ಮಾಣವಾಗಲಿದೆ.
ದಯವಿಟ್ಟು ಗಮನಿಸಿ, ರತ್ನನ ಪ್ರಪಂಚದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಆದರೆ, ನಾಯಕ ಯಾರು ? ಎಂಬ ಕುತೂಹಲವಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಧನಂಜಯ ಅವರ ಹುಟ್ಟುಹಬ್ಬದ ದಿನದಂದೇ ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಈ ಸುದ್ದಿಯನ್ನು ಹಂಚಿಕೊಂಡು, ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಉತ್ತರ ಕಾಂಡ ಸಿನಿಮಾ ಉತ್ತರ ಕರ್ನಾಟಕದ ಗ್ಯಾಂಗ್ ಸ್ಟರ್ ಕಥೆ ಆಧರಿಸಿದೆ. ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತದೆ. ಹೊಯ್ಸಳ ಚಿತ್ರದ ನಂತರ, ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುತ್ತದೆ ಎಂದು ನಿರ್ದೇಶಕ ರೋಹಿತ್ ತಿಳಿಸಿದ್ದಾರೆ. ಚರಣ್ ರಾಜ್ ಉತ್ತರ ಕಾಂಡ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸ್ವಾಮಿ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಸಂಕಲನ ಹಾಗೂ ವಿಶ್ವಾಸ್ ಅವರ ಕಲಾ ನಿರ್ದೇಶನವಿರುತ್ತದೆ.
ಇದನ್ನೂ ಓದಿ: ಸಾಂಸ್ಕೃತಿಕ ನಗರಿಯಲ್ಲಿ ಹೊಯ್ಸಳ ಚಿತ್ರೀಕರಣ.. ಆ್ಯಕ್ಷನ್ ಮೂಡ್ನಲ್ಲಿ ಡಾಲಿ