ETV Bharat / entertainment

ಓಂ ಪ್ರಕಾಶ್​ ರಾವ್​ ನಿರ್ದೇಶನದ 'ಫೀನಿಕ್ಸ್' ಚಿತ್ರಕ್ಕೆ ಮೂವರು ನಾಯಕಿಯರು - ಈಟಿವಿ ಭಾರತ ಕನ್ನಡ

ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು 'ಫೀನಿಕ್ಸ್' ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್​ ಬ್ಯಾಕ್​ ಆಗಿದ್ದಾರೆ.

phoenix movie
ಓಂ ಪ್ರಕಾಶ್​ ರಾವ್​
author img

By

Published : Jul 31, 2023, 5:52 PM IST

'ಲಾಕಪ್​ ಡೆತ್​', 'ಸಿಂಹದ ಮರಿ ಎ.ಕೆ 47', 'ಕಲಾಸಿಪಾಳ್ಯ'ದಂತಹ ಸೂಪರ್​ ಹಿಟ್​ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ನಿರ್ದೇಶಕ ಓಂ ಪ್ರಕಾಶ್​ ರಾವ್​. ಇತ್ತೀಚೆಗೆ ಇವರ ಚಿತ್ರಗಳು ಯಾವುದೂ ಬಂದಿಲ್ಲ, ಯಾವ ಸಿನಿಮಾವನ್ನು ಮಾಡುತ್ತಿಲ್ಲ ಎಂಬ ನಿರಾಸೆ ಅವರ ಅಭಿಮಾನಿ ವಲಯದಲ್ಲಿತ್ತು. ಗಾಂಧಿನಗರದಿಂದ ಬಹಳ ವರ್ಷಗಳ ಕಾಲ ದೂರವೇ ಉಳಿದಿದ್ದರು. ಇದೀಗ ಮತ್ತೆ ನಿರ್ದೇಶಕ ಓಂ ಪ್ರಕಾಶ್ ರಾವ್ 'ಫೀನಿಕ್ಸ್' ಎಂಬ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುವ ಮೂಲಕ ಮತ್ತೆ ಕಮ್​ ಬ್ಯಾಕ್​ ಆಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಓಂ ಪ್ರಕಾಶ್​ ರಾವ್​, "ನನ್ನ ನಿರ್ದೇಶನದ 49 ನೇ ಚಿತ್ರ 'ಫೀನಿಕ್ಸ್'. ನಮ್ಮ ಸಂಸ್ಥೆಯಿಂದ ನಿರ್ಮಾಣದ 4ನೇ‌ ಸಿನಿಮಾ ಇದಾಗಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಮರ್ಷಿಯಲ್ ಚಿತ್ರವೊಂದಕ್ಕೆ ಬೇಕಾದ ಎಲ್ಲಾ ಅಂಶಗಳು ಇದರಲ್ಲಿವೆ. ನಿಮಿಕಾ ರತ್ನಾಕರ್​, ಶಿಲ್ಪಾ ಶೆಟ್ಟಿ ಮತ್ತು ಕೃತಿಕಾ ಲೋಬೋ ಮೂವರು ನಾಯಕಿಯರಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗದೀಶ್, ಭಾಸ್ಕರ್ ಶೆಟ್ಟಿ ಮತ್ತು ಪ್ರತಾಪ್ ನಾಯಕರಾಗಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: Jaggesh: ರಜನಿ 'ಜೈಲರ್​' ಜೊತೆ ಜಗ್ಗೇಶ್​ 'ತೋತಾಪುರಿ 2' ಸಿನಿಮಾ ಬಿಡುಗಡೆ; ಯಾವಾಗ ಗೊತ್ತೇ?

ಆಗಸ್ಟ್​ನಲ್ಲಿ ಶೂಟಿಂಗ್​ ಪ್ರಾರಂಭ: ಮುಂದುವರೆದು ಹೇಳಿರುವ ಅವರು, "ಸಿನಿಮಾದಲ್ಲಿ ಕಿನ್ನಿ ವಿನೋದ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ‌. ಪ್ರದೀಪ್ ರಾಹುತ್ ಮುಖ್ಯ ಖಳ ನಟನಾಗಿ ನಟಿಸುತ್ತಿದ್ದಾರೆ. ಸ್ವಸ್ತಿಕ್ ಶಂಕರ್, ಅನಿಲ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆಗಸ್ಟ್​ನಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಜರ್ಮನ್ ಹಾಗೂ ಆಸ್ಟ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ" ಎಂದು ತಿಳಿಸಿದ್ದಾರೆ.

ಚಿತ್ರತಂಡ ಹೀಗಿದೆ.. ಸುಬ್ರಹ್ಮಣಿ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿರ್ದೇಶಕ ಓಂ ಪ್ರಕಾಶ್​ ರಾವ್​ ಅವರು ಚಿತ್ರಕಥೆ ಬರೆದಿದ್ದಾರೆ. ಸಿನಿಮಾಗೆ ಸಾಧು ಕೋಕಿಲ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ರವಿಕುಮಾರ್​ ಅವರು ಕ್ಯಾಮರಾ ಕೆಲಸ ಮಾಡಲಿದ್ದಾರೆ. ಲಕ್ಷ್ಮಣ್​ ರೆಡ್ಡಿ ಸಂಕಲನ ಮತ್ತು ಸಾಹಸ ನಿರ್ದೇಶಕರಾಗಿ ವಿಜಯನ್​ ಅವರು ಕೆಲಸ ಮಾಡಲಿದ್ದಾರೆ. ಎಂ ಎಸ್​ ರಮೇಶ್​ ಸಂಭಾಷಣೆ ಚಿತ್ರಕ್ಕಿದೆ. ಇತ್ತೀಚೆಗೆ ಓಂ ಪ್ರಕಾಶ್​ ರಾವ್​ ಅವರ ಜನ್ಮದಿನದಂದು 'ಫೀನಿಕ್ಸ್' ಚಿತ್ರದ ಪೋಸ್ಟರ್​ ಕೂಡ ಬಿಡುಗಡೆಯಾಗಿದೆ. ಶ್ರೀ ಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್​ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: Vamana: 'ವಾ..ವಾ..ವಾಮನ' ಅಂತ ಮಾಸ್​ ಎಂಟ್ರಿ ಕೊಟ್ಟ ಶೋಕ್ದಾರ್ ಧನ್ವೀರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.