ETV Bharat / entertainment

'ನಾನು ಸೀತೆಯ ಪಾತ್ರ ಮಾಡಿದಾಗ ಸೀತೆಯಂತೆ ಬದುಕಿದ್ದೆ, ಇಂದಿನ ಕಲಾವಿದರಿಗೆ ಅದು ಕೇವಲ ಪಾತ್ರ': ದೀಪಿಕಾ ಚಿಖ್ಲಿಯಾ - ಸೀತೆ ಪಾತ್ರ

ತಿರುಪತಿಯಲ್ಲಿ ನಿರ್ದೇಶಕ ಓಂ ರಾವುತ್ ನಟಿ ಕೃತಿ ಸನೋನ್​ಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ದೀಪಿಕಾ ಚಿಖ್ಲಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೀಪಿಕಾ ಚಿಖ್ಲಿಯಾ 'ರಾಮಾಯಣ'ದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದರು.

Dipika Chikhlia
ದೀಪಿಕಾ ಚಿಖ್ಲಿಯಾ
author img

By

Published : Jun 9, 2023, 3:53 PM IST

ಈ ಸಾಲಿನ ಬಹುನಿರೀಕ್ಷಿತ ಸಿನಿಮಾ 'ಆದಿಪುರುಷ್' ಪ್ರೀ ರಿಲೀಸ್​ ಈವೆಂಟ್​​ ಸಂದರ್ಭದಲ್ಲಿ ನಿರ್ದೇಶಕ ಓಂ ರಾವುತ್ ನಟಿ ಕೃತಿ ಸನೋನ್ ಕೆನ್ನೆಗೆ ಮುತ್ತಿಟ್ಟು ವಿವಾದಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚುಂಬನದ ದೃಶ್ಯ ವೈರಲ್​ ಆಗಿದ್ದು, ನಿರ್ದೇಶಕರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಈ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರಮಾನಂದ್ ಸಾಗರ್ ಅವರ 'ರಾಮಾಯಣ'ದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದ ನಟಿ ದೀಪಿಕಾ ಚಿಖ್ಲಿಯಾ ( Dipika Chikhlia) ಅವರೀಗ ವಿವಾದದ ಬಗ್ಗೆ ಮಾತನಾಡಿದ್ದಾರೆ. ಘಟನೆ ಕುರಿತು ದೀಪಿಕಾ ಅಸಮಧಾನ ವ್ಯಕ್ತಪಡಿಸಿದ್ದಾರೆ. 'ಕೃತಿ ಸನೋನ್​​ ತಮ್ಮನ್ನು ಸೀತೆ ಎಂದು ಭಾವಿಸಿರಲಿಲ್ಲ' ಎಂದು ಹೇಳಿದ್ದಾರೆ. ಆದಿಪುರುಷ್ ಚಿತ್ರದಲ್ಲಿ ಕೃತಿ ಸನೋನ್​​ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಘಟನೆಯ ಕುರಿತು ಮಾತನಾಡಿದ ದೀಪಿಕಾ ಚಿಖ್ಲಿಯಾ, "ಕೃತಿ ಇಂದಿನ ಪೀಳಿಗೆಯ ನಟಿ. ಚುಂಬನ ಮತ್ತು ಅಪ್ಪುಗೆ ಈಗ ಉತ್ತಮವಾಗೇ ಕಂಡುಬರುತ್ತದೆ. ಅವರು ತಮ್ಮನ್ನು ಸೀತೆ ಎಂದು ಪರಿಗಣಿಸಲೇಬಾರದು, ಏಕೆಂದರೆ ಅದು ಭಾವನಾತ್ಮಕ ವಿಷಯವಾಗಿ ಬದಲಾಗುತ್ತದೆ. ನಾನು ಸೀತೆಯ ಪಾತ್ರ ನಿರ್ವಹಿಸುತ್ತಿದ್ದ ವೇಳೆ ಸೀತೆಯಾಗಿಯೇ ಬದುಕಿದ್ದೆ. ಆದರೆ ಇಂದಿನ ಕಲಾವಿದರು ಅದನ್ನು ಕೇವಲ ಪಾತ್ರ ಎಂದು ಭಾವಿಸುತ್ತಾರೆ. ಸಿನಿಮಾ ಮುಗಿದ ನಂತರ ಅವರು ತಲೆಕೆಡಿಸಿಕೊಳ್ಳುವುದಿಲ್ಲ'' ಎಂದು ಹೇಳಿದರು.

"1980ರ ದಶಕದಲ್ಲಿ ರಾಮಾಯಣ ಪ್ರಸಾರವಾದಾಗ, ಯಾರೂ ನಟರನ್ನು ಅವರ ಹೆಸರಿನಿಂದ ಉಲ್ಲೇಖಿಸುತ್ತಿರಲಿಲ್ಲ. ನಾವು ಸೆಟ್‌ನಲ್ಲಿ ಕೆಲಸ ಮಾಡುವಾಗ ಜನರು ಬಂದು ನಮ್ಮ ಪಾದಗಳನ್ನು ಮುಟ್ಟುತ್ತಿದ್ದರು. ಅದು ವಿಭಿನ್ನ ಸಮಯ. ಆ ಸಮಯದಲ್ಲಿ ನಮ್ಮನ್ನು ನಟರಂತೆ ಕಾಣಲಿಲ್ಲ, ಸಾರ್ವಜನಿಕರ ದೃಷ್ಟಿಯಲ್ಲಿ ನಾವು ದೇವರಂತೆ ಕಾಣುತ್ತಿದ್ದೆವು. ಈ ಹಿನ್ನೆಲೆಯಲ್ಲಿ ನಾವು ಯಾರನ್ನೂ ಅಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ, ಚುಂಬನವು ಸಂಪೂರ್ಣವಾಗಿ ಪ್ರಶ್ನೆಯಿಂದ ಹೊರಗಿತ್ತು. ಆದ್ರೆ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿರುವ ಆದಿಪುರುಷ್​ ಚಿತ್ರದ ನಟರು ಅವರ ಸಿನಿಮಾ ಬಿಡುಗಡೆಯಾದ ನಂತರ ತಮ್ಮ ಮುಂದಿನ ಯೋಜನೆಯಲ್ಲಿ ನಿರತರಾಗುತ್ತಾರೆ. ಅವರ ಪಾತ್ರಗಳನ್ನು ಮರೆತುಬಿಡುತ್ತಾರೆ. ಆದರೆ ಇದು ನಮ್ಮೊಂದಿಗೆ ಎಂದಿಗೂ ಸಂಭವಿಸಲಿಲ್ಲ. ಜನರು ಈ ಜಗತ್ತಿನಲ್ಲಿ ವಾಸಿಸಲು ಬಂದ ದೇವರುಗಳಂತೆ ನಮ್ಮನ್ನು ನಡೆಸಿಕೊಂಡರು. ಹಾಗಾಗಿಯೇ ನಾವು ಯಾರ ಭಾವನೆಗಳಿಗೂ ಧಕ್ಕೆ ತರುವಂತಹ ಕೆಲಸಗಳನ್ನು ಎಂದಿಗೂ ಮಾಡಲಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ: ತಿರುಪತಿಯಲ್ಲಿ ಕೃತಿ ಸನೋನ್ ಕೆನ್ನೆಗೆ ಮುತ್ತಿಟ್ಟ ನಿರ್ದೇಶಕ: ಟ್ರೋಲ್ ಬಗ್ಗೆ ನಟಿ ಹೇಳಿದ್ದಿಷ್ಟು

ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್, ಸನ್ನಿಸಿಂಗ್​ ಮುಖ್ಯ ಭೂಮಿಕೆಯಲ್ಲಿರುವ ಆದಿಪುರುಷ್​​ ಸಿನಿಮಾ ಇದೇ ಜೂನ್ 16ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಲಿರುವ ಈ ಚಿತ್ರ ರಾಮಾಯಣ ಆಧರಿಸಿದ್ದು, ಆಧುನಿಕ ಸ್ಪರ್ಶ ನೀಡಲಾಗಿದೆ. ಮಂಗಳವಾರ ಚಿತ್ರದ ಪ್ರೀ ರಿಲೀಸ್​ ಈವೆಂಟ್​ ಅದ್ಧೂರಿಯಾಗಿ ತಿರುಪತಿಯಲ್ಲಿ ನಡೆಯಿತು. ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಕೃತಿ ಸನೋನ್​ ಅವರನ್ನು ಬೀಳ್ಕೊಡುವ ವೇಳೆ ನಿರ್ದೇಶಕ ಓಂ ರಾವುತ್ ನಟಿಗೆ ಹಗ್​, ಕಿಸ್​ ಮಾಡಿದ್ದರು. ಈ ವಿಡಿಯೋ ಕಳೆದ ಮೂರು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ದೇವಸ್ಥಾನದ ಬಳಿ ಕಿಸ್​ ಮಾಡಿದ ವಿಚಾರ ಪರ- ವಿರೋಧ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ ಪೋಸ್ಟ್​ಗಳನ್ನೆಲ್ಲ ಡಿಲೀಟ್​ ಮಾಡಿದ ಕಾಜೋಲ್​: ಬ್ರೇಕ್​​ ಬೇಕೆಂದ ನಟಿ, ಅಭಿಮಾನಿಗಳಲ್ಲಿ ಆತಂಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.