ETV Bharat / entertainment

ಬಣ್ಣದ ಲೋಕದಲ್ಲಿ ಮತ್ತೆ ಮಿಂಚಲು ರೆಡಿಯಾದ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ - Geeta Basra next movie

ಸೂಪರ್‌ಹಿಟ್ ಭೈಯಾಜಿ, ಸೆಕೆಂಡ್ ಹ್ಯಾಂಡ್ ಹಸ್ಬೆಂಡ್‌ನಂತಹ ಚಿತ್ರಗಳಲ್ಲಿ ನಟಿಸಿದ್ದ ನಟಿ ಗೀತಾ ಬಸ್ರಾ ಇದೀಗ ನೋಟರಿ ಸಿನಿಮಾ ಮೂಲಕ ಮತ್ತೆ ಮಿಂಚಲಿದ್ದಾರೆ.

cricketer Harbhajan Singh wife Geeta Basra
ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ
author img

By

Published : Sep 15, 2022, 4:35 PM IST

ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ, ನಟಿ ಗೀತಾ ಬಸ್ರಾ ಆರು ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸೂಪರ್‌ಹಿಟ್ ಭೈಯಾಜಿ, ಸೆಕೆಂಡ್ ಹ್ಯಾಂಡ್ ಹಸ್ಬೆಂಡ್‌ನಂತಹ ಚಿತ್ರಗಳಲ್ಲಿ ನಟಿಸಿದ್ದ ಗೀತಾ ಬಸ್ರಾ ಇದೀಗ ನೋಟರಿ ಸಿನಿಮಾ (Notary) ಮೂಲಕ ಮತ್ತೆ ಮಿಂಚಲಿದ್ದಾರೆ.

ನಟಿ ಗೀತಾ ಬಸ್ರಾ ಅವರು ಬಂಗಾಳಿ ನಟ ಪರಂಬ್ರತ ಚಟರ್ಜಿಯವರೊಂದಿಗೆ ನಟಿಸಲಿದ್ದಾರೆ. ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಲಿದ್ದು, ಅಕ್ಟೋಬರ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಮಾಹಿತಿಯಿದೆ.

ಕ್ರಿಕೆಟಿಗ ಹರ್ಭಜನ್ ಸಿಂಗ್ ಬಾಲಿವುಡ್ ನಟಿ ಗೀತಾ ಬಸ್ರಾ ಅವರನ್ನು ಅಕ್ಟೋಬರ್ ​29, 2015ರಲ್ಲಿ ಪಂಜಾಬ್​​ನ ಜಲಂದರ್​ನಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ 2016ರ ಜುಲೈ 28ರಂದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ಹಿನಾಯಾ ಹೀರ್ ಪ್ಲಾಹಾ ಎಂದು ನಾಮಕರಣ ಮಾಡಿದ್ದಾರೆ.

2021ರ ಜುಲೈನಲ್ಲಿ ಮಗವಿಗೆ ಜನ್ಮ ನೀಡಿದ್ದು, ಈವರೆಗೆ ಮಗುವಿನ ಆರೈಕೆಯಲ್ಲಿ ತೊಡಗಿದ್ದರು. ಇದೀಗ Notary ಸಿನಿಮಾ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಇದನ್ನೂ ಓದಿ: ಬಾಹುಬಲಿಯ ಶಿವಗಾಮಿ ರಮ್ಯಾ ಕೃಷ್ಣನ್​​ ಹುಟ್ಟುಹಬ್ಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.