'ಕ್ರ್ಯಾಕ್‌ಡೌನ್' (Crackdown) ಎರಡನೇ ಸೀಸನ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ವಾಲುಶ್ಚಾ ಡಿಸೋಸಾ (Waluscha De Sousa) ಅವರು, ನಕಾರಾತ್ಮಕ ಪಾತ್ರವನ್ನು ನಿರ್ವಹಿಸುವುದರಿಂದ ಪ್ರೇಕ್ಷಕರಿಂದ ಇಷ್ಟೊಂದು ಪ್ರೀತಿ ಮತ್ತು ಮೆಚ್ಚುಗೆ ಗಳಿಸಬಹುದೆಂದು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಕ್ರ್ಯಾಕ್‌ಡೌನ್ ವೆಬ್ ಸೀರಿಸ್ ಸೀಸನ್ 2ನಲ್ಲಿ ಅವರು ಗರಿಮಾ ಕಲ್ರಾ ಪಾತ್ರವನ್ನು ನಿರ್ವಹಿಸಿದ್ದಾರೆ. ನಟಿಯ ಪಾತ್ರವು ಸೀರಿಸ್ನಲ್ಲಿ ಕೆಲ ಉತ್ತಮ ಸಾಹಸ ದೃಶ್ಯಗಳನ್ನು ಹೊಂದಿದೆ.
ಎರಡನೇ ಸೀಸನ್‌ನ ತಮ್ಮ ಪಾತ್ರದ ಬಗ್ಗೆ ನಟಿ ವಾಲುಶ್ಚಾ ಡಿಸೋಸಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿದರು. ''ಸೀಸನ್ 1 ರ ಅಂತ್ಯದ ವೇಳೆಗೆ ಸೀರಿಸ್ನಲ್ಲಿ ಟ್ವಿಸ್ಟ್‌ಗಳು ಬಂದವು. ಎರಡನೇ ಸೀಸನ್‌ನಲ್ಲಿ ನಾನು ಸಂಪೂರ್ಣ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡೆ. ನಕಾರಾತ್ಮಕ ಪಾತ್ರ ಕೂಡ ಪ್ರೇಕ್ಷಕರಿಂದ ಇಷ್ಟೊಂದು ಪ್ರೀತಿಯನ್ನು ಪಡೆಯುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಎಲ್ಲಿಗೆ ಹೋದರೂ ಜನರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ, ಗುರುತಿಸುತ್ತಾರೆ. ಶೋನಲ್ಲಿ ನನ್ನ ಕೋಪ, ಸೇಡನ್ನು, ನನ್ನ ನಟನೆಯನ್ನು ಇಷ್ಟ ಪಟ್ಟಿದ್ದಾರೆ. ನಾನು ಮೂರನೇ ಸೀಸನ್‌ನಲ್ಲಿ ಇರುತ್ತೇನೋ, ಇಲ್ಲವೋ ಎಂದು ಕೇಳುತ್ತಿದ್ದಾರೆ'' ಎಂದು ತಿಳಿಸಿದರು.
ಪಾತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡಿಕೊಂಡಿದ್ರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನನಗೆ ಸೀಸನ್ 1 ಬಹಳ ಬೋರ್ ಎನಿಸಿತ್ತು. ಏಕೆಂದರೆ ಅದರಲ್ಲಿ ನನ್ನ ಪಾತ್ರ ಹೆಚ್ಚೇನೂ ಇರಲಿಲ್ಲ. ಸೀಸನ್ 2ನ ನನ್ನ ಪಾತ್ರ ಹೊಸ ಟ್ವಿಸ್ಟ್ಗಳನ್ನು ಪಡೆದುಕೊಂಡಿತು. ಓರ್ವ ನಟಿಯಾಗಿ ನನ್ನನ್ನು ನಾನು ಸಾಬೀತು ಪಡಿಸಬಲ್ಲೆ. ನಾನು ಇದನ್ನು ಸವಾಲಾಗಿ ತೆಗೆದುಕೊಂಡೆ. ಅದೃಷ್ಟವಶಾತ್, ಅದು ಕ್ಲಿಕ್ ಆಯಿತು. ಪ್ರೇಕ್ಷಕರು ನನ್ನ ಪಾತ್ರವನ್ನು ಇಷ್ಟಪಟ್ಟರು. ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ಸರಿಯಾದ ಸಂಯೋಜನೆಯ ಅಗತ್ಯವಿದೆ. ಇದು ಬಹುಮಟ್ಟಿಗೆ ನೃತ್ಯದಂತಿದೆ. ನಾನು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದ್ದರಿಂದ ಅದು ನನಗೆ ಸಹಾಯ ಮಾಡಿದೆ" ಎಂದು ತಮ್ಮ ಅನುಭವ ಹಂಚಿಕೊಂಡರು.
ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ, "ನಾನು ಪ್ರಸ್ತುತ ರುಚಿ ನರೇನ್ (Ruchi Narain) ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಆ ಪ್ರಾಜೆಕ್ಟ್ ನಲ್ಲಿ ನಾನು ಸಂಪೂರ್ಣವಾಗಿ ವಿಭಿನ್ನ ಪಾತ್ರವನ್ನು ಹೊಂದಿದ್ದೇನೆ ಎಂದರು. ಇನ್ನೂ ನಾನು ರಜತ್ ಕಪೂರ್ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ನನ್ನ ಕನಸು ನನಸು ಮಾಡಿಕೊಂಡೆ'' ಎಂದು ತಿಳಿಸಿದರು.
ಇದನ್ನೂ ಓದಿ: ಅಭಿಮಾನಿ ಕೈ ಮೇಲೆ 'ತಮನ್ನಾ ಟ್ಯಾಟೂ'....ಫ್ಯಾನ್ಸ್ ಪ್ರೀತಿಗೆ ಬಹುಬೇಡಿಕೆ ನಟಿ ಭಾವುಕ
'ಕ್ರ್ಯಾಕ್‌ಡೌನ್' ಸೀಸನ್ 2 ಅನ್ನು ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ. ಇದು ಸೀಸನ್ 1ರ ಕೊನೆಯ ದೃಶ್ಯದಿಂದ ಪ್ರಾರಂಭವಾಗುತ್ತದೆ. ಸಾಕಿಬ್ ಸಲೀಂ, ಇಕ್ಬಾಲ್ ಖಾನ್, ಶ್ರಿಯಾ ಪಿಲ್ಗಾಂವ್ಕರ್, ಸೋನಾಲಿ ಕುಲಕರ್ಣಿ, ವಾಲುಶ್ಚಾ ಡಿಸೋಸಾ, ಫ್ರೆಡ್ಡಿ ದಾರುವಾಲಾ ಮತ್ತು ಅಂಕುರ್ ಭಾಟಿಯಾ ನಟಿಸಿದ್ದಾರೆ. ಇದು ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: ಬಹುತಾರಾಗಣದ 'ಪ್ರಾಜೆಕ್ಟ್ ಕೆ': ಈ ಬಿಗ್ ಸ್ಟಾರ್ಸ್ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?