ETV Bharat / entertainment

ಕಿಚ್ಚನ "ವಿಕ್ರಾಂತ್ ರೋಣ" ಚಿತ್ರಕ್ಕೆ ಸಾಥ್​​ ನೀಡಿದ ಸೌಥ್​​​ ಸೂಪರ್​ ಸ್ಟಾರ್ಸ್​ - Release Sudeep starrer Vikrant Rona teaser

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಹಾಗು ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್, ತಮಿಳಿನಲ್ಲಿ ಸಿಂಬು ವಿಕ್ರಾಂತ್ ರೋಣ ಚಿತ್ರದ ಟೀಸರ್​ನ್ನ ಅನಾವರಣ ಮಾಡಲಿದ್ದಾರೆ‌. ದಿ ಡೆವಿಲ್ಸ್​ ಅರೈವಲ್​ ಹೆಸರಿನಲ್ಲಿ ವಿಕ್ರಾಂತ್​ ರೋಣ ಟೀಸರ್, ಏಪ್ರಿಲ್​ 2 ರಂದು ಬೆಳಗ್ಗೆ 9.55ಕ್ಕೆ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ.

ವಿಕ್ರಾಂತ್ ರೋಣ
ವಿಕ್ರಾಂತ್ ರೋಣ
author img

By

Published : Mar 31, 2022, 4:31 PM IST

ಕೋಟಿಗೊಬ್ಬ 3 ಸಿನಿಮಾ ಬಳಿಕ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್​ ರೋಣ. ಸದ್ಯ ಪೋಸ್ಟರ್ ಹಾಗು ಟೀಸರ್ ನಿಂದಲೇ ಸೌಥ್​ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಸ್ಟೈಲಿಷ್ ಲುಕ್ ಜೊತೆಗೆ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾಗೆ, ದಕ್ಷಿಣ ಭಾರತದ ಸ್ಟಾರ್ ನಟರು ಸಾಥ್ ನೀಡುತ್ತಿದ್ದಾರೆ.

"ವಿಕ್ರಾಂತ್ ರೋಣ" ಚಿತ್ರಕ್ಕೆ ಸಾಥ್​​ ನೀಡಿದ ಸೌತ್​​ ಸೂಪರ್​ ಸ್ಟಾರ್ಸ್​

ಹೌದು, ಯುಗಾದಿ ಹಬ್ಬಕ್ಕೆ ದಿ ಡೆವಿಲ್ಸ್​ ಅರೈವಲ್​ ಹೆಸರಿನಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡುತ್ತಿದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಹಾಗು ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್, ತಮಿಳಿನಲ್ಲಿ ಸಿಂಬು ವಿಕ್ರಾಂತ್ ರೋಣ ಚಿತ್ರದ ಟೀಸರ್​ನ್ನ ಅನಾವರಣ ಮಾಡಲಿದ್ದಾರೆ‌. ದಿ ಡೆವಿಲ್ಸ್​ ಅರೈವಲ್​ ಹೆಸರಿನಲ್ಲಿ ವಿಕ್ರಾಂತ್​ ರೋಣ ಟೀಸರ್, ಏಪ್ರಿಲ್​ 2 ರಂದು ಬೆಳಗ್ಗೆ 9.55ಕ್ಕೆ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ. ಈ ಟೀಸರ್ ಸುದೀಪ್ ಬಗ್ಗೆ ಆಗಿರುತ್ತಾ? ಅಥವಾ ಸುದೀಪ್ ಅಲ್ಲದೇ ಇಡೀ ಬೇರೆ ಸ್ಟಾರ್ಸ್ ಗಳ ಲುಕ್ ಆಗಿರುತ್ತಾ? ಹಾಗೇ ದಿ ಡೆವಿಲ್ಸ್ ಯಾರು ಆಗಿರುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಕೆಲವು ದಿನಗಳ ಹಿಂದೆ ವಿಕ್ರಾಂತ್​ ರೋಣ ಸಿನಿಮಾದ, ಸಣ್ಣ ಟೀಸರ್ ಬಿಡುಗಡೆ ಮಾಡಲಾಗಿತ್ತು. ಹಾಗೇ ಕಿಚ್ಚ ಸುದೀಪ್​ ಕೂಡ ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಕಿಚ್ಚ ಡಬ್​ ಮಾಡಿದ ದೃಶ್ಯ ಹಾಗೂ ಡೈಲಾಗ್​ಗಳು ಸಾಕಷ್ಟು ಗಮನ ಸೆಳೆದಿದ್ದವು. ರಂಗಿತರಂಗ ಖ್ಯಾತಿಯ ಅನೂಪ್​ ಭಂಡಾರಿ, ವಿಕ್ರಾಂತ್ ರೋಣ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕಿಚ್ಚ ಸುದೀಪ್​ ಅಲ್ಲದೇ ನೀತಾ ಅಶೋಕ್​, ನಿರೂಪ್​ ಭಂಡಾರಿ, ಜಾಕ್ವೆಲಿನ್​ ಫರ್ನಾಂಡಿಸ್​ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ವಿಕ್ರಾಂತ್​ ರೋಣ ಚಿತ್ರೀಕರಣ ಮಾಡಲಾಗಿದೆ. ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಬಂಡವಾಳ ಹಾಕಿದ್ದಾರೆ. ಸದ್ಯ ಯುಗಾದಿ ಹಬ್ಬಕ್ಕೆ ರಿವೀಲ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಟೀಸರ್​​ನಲ್ಲಿ, ಏನೆಲ್ಲಾ ಇರಲಿದೆ ಅನ್ನೋದು ಕಿಚ್ಚನ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದೆ‌.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.