ETV Bharat / entertainment

ಮಗನ "ಖೆಯೊಸ್" ಚಿತ್ರದಲ್ಲಿ ತಂದೆ ಸುಪ್ರೀಂ ಹೀರೋ; ಪೆ. 17ಕ್ಕೆ ಹೊಸಬರ ಮರ್ಡರ್ ಮಿಸ್ಟರಿ ಸಿನಿಮಾ ತೆರೆಗೆ - ಅದಿತಿ ಪ್ರಭುದೇವ ಅಭಿನಯದ ಖೆಯೊಸ್

ನಟ ಶಶಿಕುಮಾರ್​ ಮಗ ಅಕ್ಷಿತ್ ಶಶಿಕುಮಾರ್ ಅಭಿನಯದ ಖೆಯೊಸ್ ಮೂವಿ ಇದೇ ಫೆ. 17 ಕ್ಕೆ ರಾಜ್ಯಾದ್ಯಂತ ರೀಲೀಸ್.

cheos
ಖೆಯೊಸ್
author img

By

Published : Feb 14, 2023, 10:13 AM IST

Updated : Feb 14, 2023, 12:05 PM IST

ಬೆಂಗಳೂರು: ‘‘ಖೆಯೊಸ್’’ ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಸದ್ದು ಮಾಡುತ್ತಿರೋ ಕನ್ನಡ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಮಗ ಅಕ್ಷಿತ್ ಶಶಿಕುಮಾರ್ ಹಾಗು ಅದಿತಿ ಪ್ರಭುದೇವ ಅಭಿನಯದ ಖೆಯೊಸ್ ಚಿತ್ರದ ಟ್ರೇಲರ್ ಈಗಾಗಲೇ ರೀಲೀಸ್​ ಆಗಿದೆ. ವಿಶೇಷವೆಂದರೆ ಸುಪ್ರೀಂ ಹೀರೋ ಶಶಿಕುಮಾರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಪ್ಪ ಮಗ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ.

movie
ಖೆಯೊಸ್ ಚಿತ್ರ

ಮನಸ್ಥಿತಿಯ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ: ಶಶಿಕುಮಾರ್ ಅವರು ಖೆಯೊಸ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಯಜಮಾನ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದರು. ನಟ ವಿನೋದ್ ಪ್ರಭಾಕರ್ ಚಿತ್ರತಂಡವನ್ನು ಅಭಿನಂದಿಸುವ ಮೂಲಕ ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದರು. ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ, ಮನಸ್ಥಿತಿಯ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಖೆಯೊಸ್. ಮೂಲತಃ ವೈದ್ಯರಾಗಿರುವ ಡಾ|ಜಿ.ವಿ.ಪ್ರಸಾದ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ‌ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಕ್ಷಿತ್ ಶಶಿಕುಮಾರ್ ಹಾಗೂ ಅದಿತಿ ಪ್ರಭುದೇವ ಅವರದು ಈ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರ. ಅಲ್ಲದೆ ಹಿರಿಯನಟ ಶಶಿಕುಮಾರ್ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು‌.

ಇದನ್ನೂ ಓದಿ: ಮರ್ಡರ್ ಮಿಸ್ಟರಿ ಸಿನಿಮಾದೊಂದಿಗೆ ಬಂದ ಅಕ್ಷಿತ್ ಶಶಿಕುಮಾರ್

‘‘ಅಪ್ಪನ ನೆರಳಿನಲ್ಲಿ ಅರಳಿದರೂ ಬೆಳೆಯಲು ಬೇರೆ ಆಶ್ರಯ ಬೇಕು’’: ಇನ್ನು ಅಕ್ಷಿತ್ ಶಶಿಕುಮಾರ್ ಮಾತನಾಡಿ ಚಿತ್ರಕ್ಕೆ ಪ್ರತಿಯೊಬ್ಬರು ನೀಡಿದ ಸಹಕಾರವನ್ನು ನೆನೆಯುತ್ತಾ, ಇದು ನನ್ನ ಎರಡನೇ ಚಿತ್ರ. ದಯವಿಟ್ಟು ಎಲ್ಲರೂ ಪ್ರೋತ್ಸಾಹಿಸಿ ಎಂದರಲ್ಲದೆ, ನಾನು ಅಪ್ಪನ ನೆರಳಿನಲ್ಲಿ ಅರಳಿದರೂ ಬೆಳೆಯಲು ಬೇರೆ ಆಶ್ರಯ ಬೇಕಾಗುತ್ತದೆ. ಈ ವಿಷಯದಲ್ಲಿ ಸ್ನೇಹಿತರು ಅತ್ಯಂತ ಸಹಕಾರ ನೀಡುತ್ತಿದ್ದಾರೆ ಎಂದರು. ಇದರ ಜೊತೆಗೆ ನಟರಾದ ಶಿವಾನಂದ್, ಆರ್.ಕೆ. ಚಂದನ್, ಡಾ.ಸುಮಿತ್ ತಲ್ವಾರ್, ನಟಿ ಗಗನ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರವನ್ನು ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಜಿ.ವಿ.ಪ್ರಸಾದ್ ಅವರು ಚಿತ್ರದ ಶೀರ್ಷಿಕೆ ಮತ್ತು ಅದನ್ನು ಚಿತ್ರದಲ್ಲಿ ಬಳಸಿಕೊಂಡಿರುವುದರ ಬಗ್ಗೆ ತಿಳಿಸಿದರು. ಗಾಯಕ ಶಶಾಂಕ್ ಶೇಷಗಿರಿ ಹಾಡುಗಳನ್ನು ಹಾಡಿದ್ದು, ಚಿತ್ರಕ್ಕೆ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕ ಸಂದೀಪ್ ವಲ್ಲೂರಿ ಈ‌ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದು ಟ್ರೈಲರ್ ನಿಂದಲೇ ಖೆಯೊಸ್ ಸಿನಿಮಾ ಗಮನ ಸೆಳೆಯುತ್ತಿದೆ.

ಫೆಬ್ರವರಿ 17 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿರುವ ಖೆಯೊಸ್..​ ಸದ್ಯ ಫೆಬ್ರವರಿ 17 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು, ಈ ಚಿತ್ರ ಶಶಿಕುಮಾರ್ ಮಗ ಅಕ್ಷಿತ್ ಗೆ ಒಳ್ಳೆ ಲಕ್​ ತರುತ್ತಾ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ: ಖೆಯೊಸ್ ಸಿನಿಮಾ‌ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಶಶಿಕುಮಾರ್ ಪುತ್ರ ಅಕ್ಷಿತ್

Last Updated : Feb 14, 2023, 12:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.