ಹೈದರಾಬಾದ್: ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಶೇಖರ್ ಆರ್ಟ್ಸ್ ಕ್ರಿಯೇಷನ್ ಮಾಲೀಕ ಕೊಪ್ಪದ ಶೇಖರ್ ರಾಜು ಎಂಬುವವರು ವರ್ಮಾ ವಿರುದ್ಧ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಂಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ 'ಆಶಾ ಎನ್‌ಕೌಂಟರ್' 2019ರಲ್ಲಿ ಹೈದರಾಬಾದ್‌ನ ಉಪನಗರದಲ್ಲಿ ನಡೆದ ಕೊಲೆಯ ನೈಜ ಕಥೆ ಆಧರಿಸಿದೆ. ಕೊಲೆ ಆರೋಪಿಗಳ ಎನ್‌ಕೌಂಟರ್ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆಯಿದೆ. ಈ ಸಿನಿಮಾ ನಿರ್ಮಾಣಕ್ಕೆಂದು ವರ್ಮಾ ನನ್ನಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಶೇಖರ್ ರಾಜು ಆರೋಪಿಸಿದ್ದಾರೆ.
ಶೇಖರ್ ಹೇಳುವಂತೆ, ಆರ್ಜಿವಿ 8 ಲಕ್ಷ, 20 ಲಕ್ಷ, ಮತ್ತು ರೂ. 28 ಲಕ್ಷಗಳಾಗಿ 2020ರಲ್ಲಿ ಮೂರು ಅವಧಿಗಳಲ್ಲಿ ಹಣ ಪಡೆದಿದ್ದಾರೆ. ಆಶಾ ಎನ್‌ಕೌಂಟರ್ ಚಿತ್ರದ ಬಿಡುಗಡೆಗೂ ಮೊದಲು ಹಣ ಹಿಂದಿರುಗಿಸುವುದಾಗಿ ಮಾತು ಕೊಟ್ಟಿದ್ದರು. ಸಿನಿಮಾ ನಿರ್ಮಾಪಕ ವರ್ಮಾ ಅಲ್ಲದ ಕಾರಣ ವಂಚನೆಗೆ ಒಳಗಾಗಿರುವುದನ್ನು ಮನಗಂಡು ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಕ್ರಾಂತ್ ರೋಣನ 'ರಾರಾ ರುಕ್ಕಮ್ಮ' ರಿಲೀಸ್.. ರಿಂಗ ರಿಂಗ ರೋಜು ಲಂಗದಲ್ಲಿ ಜಾಕ್ವೆಲಿನ್ ಮಿಂಚಿಂಗ್!