ETV Bharat / entertainment

ಕಂಗನಾ ರಣಾವತ್​​ - ರಾಘವ ಲಾರೆನ್ಸ್ ಮುಖ್ಯಭೂಮಿಕೆಯ 'ಚಂದ್ರಮುಖಿ 2' ಗಳಿಸಿದ್ದಿಷ್ಟು! - ಚಂದ್ರಮುಖಿ 2 ಕಲೆಕ್ಷನ್​

Chandramukhi 2 collection: ಬಹುನಿರೀಕ್ಷಿತ ಸಿನಿಮಾ 'ಚಂದ್ರಮುಖಿ 2' ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಅಂಕಿ ಅಂಶದೊಂದಿಗೆ ಆರಂಭಗೊಂಡಿದೆ.

Chandramukhi 2
ಚಂದ್ರಮುಖಿ 2
author img

By ETV Bharat Karnataka Team

Published : Sep 29, 2023, 1:31 PM IST

2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ 'ಚಂದ್ರಮುಖಿ 2' ಸಿನಿಮಾ ನಿನ್ನೆ ಚಿತ್ರಮಂದಿರಗಳಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿದೆ. ನಟ, ನಿರ್ದೇಶಕ, ಕೊರಿಯೋಗ್ರಾಫರ್ ರಾಘವ ಲಾರೆನ್ಸ್ ಹಾಗೂ ಬಾಲಿವುಡ್​​ ಕ್ವೀನ್​ ಖ್ಯಾತಿಯ ಕಂಗನಾ ರಣಾವತ್​​ ಅಭಿನಯದ ಚಂದ್ರಮುಖಿ 2 ಬಾಕ್ಸ್​ ಆಫೀಸ್​ನಲ್ಲಿ ಯೋಗ್ಯ ಅಂಕಿ ಅಂಶ ಹೊಂದಿದೆ.

2005ರಲ್ಲಿ ತೆರೆಕಂಡ ಚಂದ್ರಮುಖಿಯ ಸೀಕ್ವೆಲ್​: ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಪಿ. ವಾಸು ನಿರ್ದೇಶನದ ಈ ಸಿನಿಮಾ ಸೂಪರ್​​ ಸ್ಟಾರ್ ರಜನಿಕಾಂತ್ ಹಾಗೂ ಬಹುಬೇಡಿಕೆ ನಟಿ ಜ್ಯೋತಿಕಾ ಮುಖ್ಯಭೂಮಿಕೆಯ ಚಂದ್ರಮುಖಿಯ ಸೀಕ್ವೆಲ್​​. 2005ರಲ್ಲಿ ತೆರೆಕಂಡ ಮೊದಲ ಭಾಗ ಕೂಡ ಯಶಸ್ವಿ ಆಗಿತ್ತು. ಚಂದ್ರಮುಖಿ 2 ಅದರ ಮುಂದುವರಿದ ಭಾಗ. ಬಿಡುಗಡೆ ದಿನಾಂಕ ಮುಂದೂಡಿದ್ದ ಈ ಚಿತ್ರ ಅಂತಿಮವಾಗಿ ಗುರುವಾರದಂದು ಪ್ರೇಕ್ಷಕರಿಗೆ ದರ್ಶನ ಕೊಟ್ಟಿದೆ. ನಿನ್ನೆ ಬಹುಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆಕಂಡಿದ್ದು, ಚಂದ್ರಮುಖಿ 2 ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿದೆ. ಚಂದ್ರಮುಖಿ 2 ಪ್ಯಾನ್​ ಇಂಡಿಯಾ ಸಿನಿಮಾ.

  • " class="align-text-top noRightClick twitterSection" data="">

ಚಂದ್ರಮುಖಿ 2 ಕಲೆಕ್ಷನ್​​: ಚಂದ್ರಮುಖಿ 2 ಚಿತ್ರ ತೆರೆಕಂಡ ಮೊದಲ ದಿನ 7.5 ಕೋಟಿ ರೂ. ಕಲೆಕ್ಷನ್​ ಮಾಡಿದೆ. ರಾಘವ ಲಾರೆನ್ಸ್​​, ಕಂಗನಾ ರಣಾವತ್​​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಾರರ್ ಕಾಮಿಡಿ ಸಿನಿಮಾ ಎಲ್ಲಾ ಭಾಷೆಗಳಲ್ಲಿಯೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ ಎಂದು ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ತಿಳಿಸಿದ್ದಾರೆ.

ತಮಿಳು ಚಿತ್ರಮಂದಿರಗಳಲ್ಲಿ ಚಂದ್ರಮುಖಿ 2 ಸಿನಿಮಾ ಶೇ.51.90 ರಷ್ಟು ಆಕ್ಯುಪೆನ್ಸಿ ದರ (ಥಿಯೇಟರ್​ಗಳಲ್ಲಿ ಆಸನ ಭರ್ತಿ/ಪ್ರೇಕ್ಷಕರ ಪ್ರಮಾಣ) ಹೊಂದಿತ್ತು. ತೆಲುಗು ಮತ್ತು ಹಿಂದಿ ಶೋಗಳು ಕ್ರಮವಾಗಿ ಶೇ. 42.65 ಮತ್ತು ಶೇ 12.77 ರಷ್ಟು ಆಸನಗಳು ಭರ್ತಿ ಆಗಿದ್ದವು.

ಇದನ್ನೂ ಓದಿ: 'ಕಾವೇರಿ'ದ ಬಂದ್: ಸ್ಯಾಂಡಲ್​ವುಡ್​ ನಟ-ನಟಿಯರಿಂದ ಪ್ರತಿಭಟನೆ... ಶಿವಣ್ಣ, ಶ್ರೀನಾಥ್, ಉಪೇಂದ್ರ ಸೇರಿ ಹಲವರು ಭಾಗಿ

ಪಾಸಿಟಿವ್​ ರೆಸ್ಪಾನ್ಸ್​: ಚಂದ್ರಮುಖಿ 2 ಗುರುವಾರದಂದು ಅಂದರೆ ನಿನ್ನೆ ಬಿಡುಗಡೆ ಆಯಿತು. ಎರಡು ಹಿಂದಿ ಸಿನಿಮಾಗಳಾದ ದಿ ವ್ಯಾಕ್ಸಿನ್ ವಾರ್ ಮತ್ತು ಫುಕ್ರೆ 3 ಕೂಡ ನಿನ್ನೆಯೇ ತೆರೆಕಂಡಿದೆ. ಈದ್ ಮತ್ತು ಗಣಪತಿ ನಿಮಜ್ಜನದ ಸಲುವಾಗಿ ಹಲವೆಡೆ ರಜೆ ಇದ್ದ ಹಿನ್ನೆಲೆ ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು.

ಇದನ್ನೂ ಓದಿ: ಬಹುನಿರೀಕ್ಷಿತ 'ಸಲಾರ್'​​ ರಿಲೀಸ್​ ಡೇಟ್​ ಅನೌನ್ಸ್: ಶಾರುಖ್​ ಸಿನಿಮಾದೊಂದಿಗೆ ಪೈಪೋಟಿ!

ಈ ಮೊದಲು ಸೆಪ್ಟೆಂಬರ್ 15 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ತಾಂತ್ರಿಕ ಸಮಸ್ಯೆಗಳ ಹಿನ್ನೆಲೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಆರ್​ಆರ್​ಆರ್​ ಖ್ಯಾತಿಯ ಎಂಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು ಚಿತ್ರದ ಹೈಲೆಟ್ಸ್​​ಗಳಲ್ಲೊಂದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.