ETV Bharat / entertainment

ವಾರಾಂತ್ಯಕ್ಕೆ ವಿಶ್ವದಾದ್ಯಂತ ಕಮಾಲ್ ಮಾಡಿದ​ ಬ್ರಹ್ಮಾಸ್ತ್ರ.. ನಾಲ್ಕು ದಿನದಲ್ಲಿ ಗಳಿಸಿದ್ದೆಷ್ಟು? - Brahmastra collected 225 crore worldwide

"ಬ್ರಹ್ಮಾಸ್ತ್ರ ಭಾಗ 1: ಶಿವ" ಮೊದಲ ದಿನದಲ್ಲಿ 75 ಕೋಟಿ ಮತ್ತು ಮರುದಿನ 85 ಕೋಟಿಯನ್ನು ಕೊಳ್ಳೆಹೊಡೆದಿದೆ. 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

Brahmastra Part One: Shiva
"ಬ್ರಹ್ಮಾಸ್ತ್ರ ಭಾಗ 1: ಶಿವ"
author img

By

Published : Sep 12, 2022, 5:15 PM IST

ಮುಂಬೈ: ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ವಾರಾಂತ್ಯಕ್ಕೆ ವಿಶ್ವದಾದ್ಯಂತ ಒಟ್ಟು ಬಾಕ್ಸ್ ಆಫೀಸ್​ ಕಲೆಕ್ಷನ್‌ನಲ್ಲಿ 225 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ತಯಾರಕರು ಸೋಮವಾರ ತಿಳಿಸಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಸಂಗ್ರಹದ ಅಪ್​ಡೇಟ್​ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯಕ್ಕೆ ಪ್ರೀತಿ ನೀಡಿದ ಪ್ರೇಕ್ಷಕರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಅಮಿತಾಭ್ ಬಚ್ಚನ್ ಸಹ ನಟಿಸಿರುವ "ಬ್ರಹ್ಮಾಸ್ತ್ರ ಭಾಗ 1: ಶಿವ" ಮೊದಲ ದಿನದಲ್ಲಿ 75 ಕೋಟಿ ಮತ್ತು ಮರುದಿನ 85 ಕೋಟಿಯನ್ನು ಕೊಳ್ಳೆಹೊಡೆದಿದೆ. 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಚಿತ್ರದ ನಾಯಕಿ ಆಲಿಯಾ ಭಟ್​ ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾ ನೋಡಿದ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಬಂಡವಾಳ ಹೂಡಿರುವ ಬ್ರಹ್ಮಾಸ್ತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಪ್ರಸ್ತುತ 2D, 3D ಮತ್ತು IMAX 3Dಯಲ್ಲಿ ಚಿತ್ರಮಂದಿರಗಳಲ್ಲಿದೆ. ಈ ಸಿನಿಮಾದಲ್ಲಿ ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಬ್ರಹ್ಮಾಸ್ತ್ರ ಟಾನಿಕ್​.. ಎರಡು ದಿನಗಳಲ್ಲಿ 160 ಕೋಟಿ ರೂ. ಕಲೆಕ್ಷನ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.