ETV Bharat / entertainment

ಚಿತ್ರೀಕರಣ ವೇಳೆ ಪ್ಯಾಡ್ ಬದಲಾಯಿಸಲು ಪೊದೆ ಹುಡುಕುತ್ತಿದ್ದೆವು: ಜಯಾ ಬಚ್ಚನ್

ಋತುಬಂಧ, ಋತು ಅವಧಿಯ ಕಥೆಗಳು ಮತ್ತು ಲೈಂಗಿಕ ಶಿಕ್ಷಣದಂತಹ ವಿಷಯಗಳು ಸೇರಿದಂತೆ ಸ್ತ್ರೀ ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ನಟಿಮಣಿಯರು 'ವಾಟ್ ದಿ ಹೆಲ್ ನವ್ಯಾ' ಸಂಚಿಕೆಯಲ್ಲಿ ಮಾತನಾಡಿದ್ದಾರೆ.

Bollywood actress on female health in 'What The Hell Navya'
ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದ ನಟಿಮಣಿಯರು
author img

By

Published : Nov 12, 2022, 7:49 PM IST

ಜಯಾ ಬಚ್ಚನ್, ಶ್ವೇತಾ ನಂದಾ ಮತ್ತು ನವ್ಯಾ ನವೇಲಿ ನಂದಾ ಅವರು 'ವಾಟ್ ದಿ ಹೆಲ್ ನವ್ಯಾ' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದು, ತಮ್ಮ ಸಂಭಾಷಣೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ.

ಮೊದಲು ಅವರು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದರೆ, ಈ ಬಾರಿ ಅವರ ಸಂಭಾಷಣೆಯು ಋತುಬಂಧ, ಋತು ಅವಧಿಯ ಕಥೆಗಳು ಮತ್ತು ಲೈಂಗಿಕ ಶಿಕ್ಷಣದಂತಹ ವಿಷಯಗಳು ಸೇರಿದಂತೆ ಸ್ತ್ರೀ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲೆ ಕೇಂದ್ರೀಕೃತವಾಗಿತ್ತು.

ಇತ್ತೀಚಿನ ಸಂಚಿಕೆ 'ಬಯಾಲಜಿ: ಬ್ಲೆಸ್ಡ್ ಬಟ್ ಬಯಾಸ್ಡ್' ಎಂಬ ಶೀರ್ಷಿಕೆ ಹೊಂದಿತ್ತು. ಮಹಿಳೆಯರ ಸರ್ವಾಂಗೀಣ ಆರೋಗ್ಯ ಮತ್ತು ಕ್ಷೇಮ ಕುರಿತು ಪ್ರತಿಕ್ರಿಯಿಸಿದ ಶ್ವೇತಾ ನಂದಾ, "ಅದೆಷ್ಟೋ ಮಹಿಳೆಯರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಮತ್ತು ಇದು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಭಾರತೀಯ ಮಹಿಳೆಯರಿಗೆ ಮೂಳೆಯ ಆರೋಗ್ಯದ ಬಗ್ಗೆ ಏನೂ ತಿಳಿದಿಲ್ಲ. ಒಂದು ನಿರ್ದಿಷ್ಟ ಹಂತದ ನಂತರ ಕ್ಯಾಲ್ಸಿಯಂ ಮಹಿಳೆಯರಿಗೆ ತುಂಬಾ ಮುಖ್ಯವಾಗಿದೆ ಎಂದರು.

ಜಯಾ ಬಚ್ಚನ್ ಮಾತನಾಡಿ, ಮಹಿಳೆಯರ ಸುತ್ತ ಸಂಭಾಷಣೆಗಳು ಬಹಳ ನಿಧಾನವಾಗಿ ಬದಲಾಗುತ್ತಿದೆ. "ಇದು ಇಂದು ಮುಖ್ಯಾಂಶಗಳಾಗಬೇಕಿತ್ತು" ಎಂದು ಅವರು ಹೇಳಿದರು.

ಇದನ್ನೂ ಓದಿ: ಹೇರಾ ಫೇರಿ 3: ಅಕ್ಷಯ್​​ ಬದಲಿಗೆ ಕಾರ್ತಿಕ್​ ಆರ್ಯನ್-ಪ್ರೇಕ್ಷಕರು ಏನಂತಾರೆ?​​

ನಮ್ಮ ಕಾಲದಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಕ್ಯಾರವಾನ್ ಇರಲಿಲ್ಲ. ಸರಿಯಾದ ಶೌಚಾಲಯದ ವ್ಯವಸ್ಥೆಗಳೂ ಸಹ ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ಪ್ಯಾಡ್‌ಗಳನ್ನು ಬದಲಿಸಲು ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಅವನ್ನು ಎಸೆಯಲು ಪ್ಲಾಸ್ಟಿಕ್ ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಇಂತಹ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೇವೆಂದು ತಿಳಿಸಿದರು. ಜೊತೆಗೆ ಮುಟ್ಟಾದ ಮಹಿಳೆಯರ ಕಷ್ಟವನ್ನು ಅರಿತುಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.