ETV Bharat / entertainment

ಬಾಲಿವುಡ್​ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ - Welcome to the Jungle

Bollywood actor Shreyas Talpade suffered a heart attack: ಚಿತ್ರೀಕರಣ ಮುಗಿಸಿ ಹಿಂದಿರುಗುವ ವೇಳೆ ಬಾಲಿವುಡ್​ ನಟ ಶ್ರೇಯಸ್ ತಲ್ಪಾಡೆ ಅವರಿಗೆ ಹೃದಯಾಘಾತವಾಗಿದೆ. ಸದ್ಯ ಶಸ್ತ್ರ ಚಿಕಿತ್ಸೆ ನಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Bollywood actor Shreyas Talpade
ನಟ ಶ್ರೇಯಸ್ ತಲ್ಪಾಡೆ
author img

By ETV Bharat Karnataka Team

Published : Dec 15, 2023, 7:22 AM IST

ಮುಂಬೈ (ಮಹಾರಾಷ್ಟ್ರ): ಗುರುವಾರ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಹಿಂದುರುಗುವ ವೇಳೆ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತವಾಗಿದ್ದು ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ನಟನ ಆಪ್ತ ವಲಯಗಳಿಂದ ಬಂದಿರುವ ಮಾಹಿತಿ ಪ್ರಕಾರ, 47 ವರ್ಷದ ಶ್ರೇಯಸ್ ತಲ್ಪಾಡೆ ಬಾಲಿವುಡ್ 'ವೆಲ್‌ಕಮ್ ಟು ದ ಜಂಗಲ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಿನ್ನೆಯ ಚಿತ್ರೀಕರಣ ಮುಗಿದ ನಂತರ ನಟನಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೇಯಸ್​ಗೆ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆ ಬಳಿಕ ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವೆಲ್‌ಕಮ್ ಟು ದ ಜಂಗಲ್ ಚಿತ್ರವು 2007ಎ 'ವೆಲ್‌ಕಮ್' ಮೂವೀ 1 ರ ಮುಂದುವರೆದ ​3 ನೇ ಭಾಗವಾಗಿದೆ. ಎರಡನೇ ಭಾಗ 'ವೆಲ್‌ಕಮ್ ಬ್ಯಾಕ್' 2015 ರಲ್ಲಿ ತೆರೆ ಕಂಡಿತು. ವೆಲ್‌ಕಮ್ ಟು ದಿ ಜಂಗಲ್ ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಬಾಲಿವುಡ್​ ಸೂಪರ್​ ಸ್ಟಾರ್ ಅಕ್ಷಯ್​ ಕುಮಾರ್ ಜನ್ಮದಿನದಂದು​ ಅಂದರೆ, ಇದೇ ವರ್ಷದ ಸೆಪ್ಟೆಂಬರ್​ನಲ್ಲಿ ಅನಾವರಣಗೊಂಡಿತ್ತು. ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ ಆಗಿರುವ 'ವೆಲ್ಕಮ್​​ 3' ಬಹುದೊಡ್ಡ ತಾರಾಗಣ ಹೊಂದಿದೆ.

ಅಕ್ಷಯ್​ ಕುಮಾರ್​ ಜೊತೆ ರವೀನಾ ಟಂಡನ್​, ದಿಶಾ ಪಟಾನಿ, ಲಾರಾ ದತ್ತಾ, ಜಾಕ್ವೆಲಿನ್​ ಫರ್ನಾಂಡಿಸ್​, ಸುನೀಲ್​ ಶೆಟ್ಟಿ, ಸಂಜಯ್​ ದತ್​​, ಪರೇಶ್​ ರಾವಲ್​​, ಶ್ರೇಯಸ್​​ ತಲ್ಪಾಡೆ, ಅರ್ಶದ್​ ವಾರ್ಸಿ, ತುಷಾರ್​ ಕಪೂರ್, ರಾಜ್ಪಾಲ್​ ಯಾದವ್​​, ಜಾನಿ ಲಿವರ್, ಕಿಕು ಶಾರ್ದಾ, ಕೃಷ್ಣ ಅಭಿಷೇಕ್​​, ಗಾಯಕರಾದ ದಲೆರ್​ ಮೆಹಂದಿ, ಮಿಕಾ ಸಿಂಗ್​​ ಅಭಿನಯಿಸುತ್ತಿದ್ದಾರೆ. ಇನ್ನು 2024ರ ಕ್ರಿಸ್ಮಸ್​​ ಸಂದರ್ಭ ಡಿಸೆಂಬರ್​ 20ರಂದು ಚಿತ್ರ ಮಂದಿರಗಳಲ್ಲಿ ವೆಲ್ಕಮ್​ ಟು ದ ಜಂಗಲ್​​ (ವೆಲ್ಕಮ್​ 3 )ಬಿಡುಗಡೆ​​ ಆಗಲಿದೆ ಎಂದು ನಟ ಅಕ್ಷಯ್​ಕುಮಾರ್​ ಈ ಮೊದಲೇ ತಿಳಿಸಿದ್ದರು.

'ವೆಲ್ಕಮ್​ ಟು ದ ಜಂಗಲ್'​​ ಸಿನಿಮಾವನ್ನು ಜ್ಯೋತಿ ದೇಶ್​​ಪಾಂಡೆ, ಫಿರೋಜ್​ ನಾಡಿಯಾಡ್ವಾಲ ನಿರ್ಮಾಣ ಮಾಡುತ್ತಿದ್ದು, ಅಹಮದ್​ ಖಾನ್​​ ಆ್ಯಕ್ಷನ್​​ ಕಟ್​ ಹೇಳಿದ್ದಾರೆ. 20 ವರ್ಷಗಳ ವಿರಾಮದ ಬಳಿಕ ನಟಿ ರವೀನಾ ಟಂಡನ್​ ಮತ್ತು ನಟ ಅಕ್ಷಯ್​ ಕುಮಾರ್​ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಫೈಟರ್​' ಚಿತ್ರದ 'ಶೇರ್​ ಖುಲ್​ ಗಯೇ' ಹಾಡು ನಾಳೆ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.