'ಪಠಾಣ್' ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸದ್ಯ ಸಾಲು ಸಾಲು ಸಿನಿಮಾ ಆಫರ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಅದು ವಿಶ್ವದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತರಿಗೆ ಮಾತ್ರ ಮಾರಾಟವಾಗುವ ರೋಲ್ಸ್ ರಾಯ್ಸ್ ಕಂಪನಿಯ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಮಾಡೆಲ್ ಕಾರು. ಇದರ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ. ಬಿಳಿ ಬಣ್ಣದ ಈ ಹೊಸ ಕಾರನ್ನು ನೋಡಿದ ಶಾರುಖ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಈಗಾಗಲೇ ಕಿಂಗ್ ಖಾನ್ ಜೊತೆ ಬಿಎಂಡಬ್ಲ್ಯು, ಬೆಂಟ್ಲಿ, ಬುಗಾಟಿ ಮತ್ತು ಇತರೆ ಐಷಾರಾಮಿ ಕಾರುಗಳಿದ್ದು, ಅವುಗಳ ಜೊತೆ ಈ ಹೊಸ ದುಬಾರಿ ಕಾರು ಕೂಡ ಸೇರ್ಪಡೆಯಾಗಿದೆ. ಈ ಬಗ್ಗೆ ಶಾರುಖ್ ಅಧಿಕೃತವಾಗಿ ಹೇಳದಿದ್ದರೂ, ಕಾರಿಗೆ ಸಂಬಂಧಿಸಿದ ಕೆಲ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶಾರುಖ್ ಖಾನ್ ಫ್ಯಾನ್ ಪೇಜ್ ಟ್ವಿಟರ್ನಲ್ಲಿ ಕಾರಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದೆ. ಕಾರಿಗೆ ಶಾರುಖ್ ಸಿಗ್ನೇಚರ್ ಸಂಖ್ಯೆ 555 ಕೂಡ ಇದೆ. ಜೊತೆಗೆ ಈ ಕಾರು ರಾತ್ರಿ ವೇಳೆ ಶಾರುಖ್ ಅವರ ನಿವಾಸವಾದ ಮನ್ನತ್ ಒಳಗೆ ಪ್ರವೇಶಿಸುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.
-
#ShahRukhKhan𓀠 new car Rolls-Royce 555 entrying in #Mannat last night 🌙 @iamsrk pic.twitter.com/tU1GWgkC9T
— SRK Khammam Fan club (@srkkhammamfc) March 27, 2023 " class="align-text-top noRightClick twitterSection" data="
">#ShahRukhKhan𓀠 new car Rolls-Royce 555 entrying in #Mannat last night 🌙 @iamsrk pic.twitter.com/tU1GWgkC9T
— SRK Khammam Fan club (@srkkhammamfc) March 27, 2023#ShahRukhKhan𓀠 new car Rolls-Royce 555 entrying in #Mannat last night 🌙 @iamsrk pic.twitter.com/tU1GWgkC9T
— SRK Khammam Fan club (@srkkhammamfc) March 27, 2023
ಇದನ್ನೂ ಓದಿ: 'ಕಾಂತಾರ'ಗೆ ಮತ್ತೆರಡು ಗರಿ: 'ಗೇಮ್ ಚೇಂಜರ್' ರಿಷಬ್, 'ರೈಸಿಂಗ್ ಸ್ಟಾರ್' ಸಪ್ತಮಿ
ಕಿಂಗ್ ಖಾನ್ ಮುಂದಿನ ಸಿನಿಮಾಗಳು.. ಜೀರೋ ಸಿನಿಮಾದ ನಂತರ ನಾಲ್ಕು ವರ್ಷ ಗ್ಯಾಪ್ ತೆಗೆದುಕೊಂಡ ಶಾರುಖ್ ಖಾನ್ ಪಠಾಣ್ ಸಿನಿಮಾದ ಮೂಲಕ ರೀ ಎಂಟ್ರಿ ಕೊಟ್ಟರು. ಈ ಚಿತ್ರ ನೂರು ಕೋಟಿಯಿಂದ 1000 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಸದ್ಯ ಕಿಂಗ್ ಖಾನ್ ತಮಿಳು ಸ್ಟಾರ್ ಡೈರೆಕ್ಟರ್ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಶಾರುಖ್ಗೆ ಲೇಡಿ ಸೂಪರ್ ಸ್ಟಾರ್ ನಯನ ತಾರಾ ಜೋಡಿಯಾಗಲಿದ್ದಾರೆ. ಈ ಸಿನಿಮಾದಲ್ಲಿ ಕಾಲಿವುಡ್ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ರಾಘವ್ ಚಡ್ಡಾ ಮದುವೆ ವದಂತಿ ಮಧ್ಯೆ ಖ್ಯಾತ ಡಿಸೈನರ್ ಭೇಟಿಯಾದ ಪರಿಣಿತಿ ಚೋಪ್ರಾ
-
#SRK's New Rolls Royce Cullinan Black Badge car Worth Rs. 10 cr#ShahRukhKhan @iamsrk pic.twitter.com/7Yva9tsgZk
— The Unknown SRKian (@DUnknownSRKian) March 27, 2023 " class="align-text-top noRightClick twitterSection" data="
">#SRK's New Rolls Royce Cullinan Black Badge car Worth Rs. 10 cr#ShahRukhKhan @iamsrk pic.twitter.com/7Yva9tsgZk
— The Unknown SRKian (@DUnknownSRKian) March 27, 2023#SRK's New Rolls Royce Cullinan Black Badge car Worth Rs. 10 cr#ShahRukhKhan @iamsrk pic.twitter.com/7Yva9tsgZk
— The Unknown SRKian (@DUnknownSRKian) March 27, 2023
ಪಠಾಣ್ ಚಿತ್ರದ ನಂತರ ಶಾರುಖ್ ಅಭಿನಯದ ಮುಂದಿನ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳು ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಲ್ಲದೇ, ತ್ರೀ ಈಡಿಯಟ್ಸ್ ಖ್ಯಾತಿಯ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಡಂಕಿ ಚಿತ್ರಕ್ಕೂ ಶಾರುಖ್ ಸಹಿ ಹಾಕಿದ್ದಾರೆ. ಇದರಲ್ಲಿ ಬಾಲಿವುಡ್ ಬೆಡಗಿ ತಾಪ್ಸಿ ನಾಯಕಿಯಾಗಿ ನಟಿಸಲಿದ್ದಾರೆ. ಮತ್ತೊಂದೆಡೆ ಸಲ್ಮಾನ್ ಖಾನ್ ಅವರ ಟೈಗರ್ 3 ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಠಾಣ್ನಲ್ಲಿ ಒಟ್ಟಿಗೆ ನಟಿಸಿದ್ದ ಈ ಸೂಪರ್ ಸ್ಟಾರ್ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಬೆದರಿಕೆ ಇ-ಮೇಲ್: ಆರೋಪಿ 7 ದಿನ ಪೊಲೀಸ್ ಕಸ್ಟಡಿಗೆ