ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ಮಕ್ಕಳೊಂದಿಗೆ ಔಟಿಂಗ್ ಹೋಗುತ್ತಿದ್ದಾಗ ಅಭಿಮಾನಿಯೋರ್ವರು ಬಲವಂತವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಆಗ ಆ ಅಭಿಮಾನಿ ಮೇಲೆ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ಗರಂ ಆಗಿದ್ದಾರೆ.
ಸಹಜವಾಗಿ ತಾವು ಇಷ್ಟಪಡುವ ಸೆಲೆಬ್ರಿಟಿಗಳು ಕಂಡೊಡನೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುವುದುಂಟು. ಇದು ಕೆಲವೊಮ್ಮೆ ಕಲಾವಿದರಿಗೆ ಕಿರಿಕಿರಿ ಆದ ಉದಾಹರಣೆಗಳು ಇವೆ. ಇದೀಗ ನಟ ಹೃತಿಕ್ ರೋಷನ್ ಬಳಿ ಬಲವಂತವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು, ಅಭಿಮಾನಿ ವಿರುದ್ಧ ನಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಹೃತಿಕ್ ತಮ್ಮ ಮಕ್ಕಳೊಂದಿಗೆ ಚಿತ್ರಮಂದಿರದಿಂದ ಹೊರಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ಹೃತಿಕ್ ಟಿ-ಶರ್ಟ್, ಜಾಕೆಟ್, ಡೆನಿಮ್ ಮತ್ತು ಕ್ಯಾಪ್, ಮಾಸ್ಕ್ ಧರಿಸಿರುವುದನ್ನು ಕಾಣಬಹುದು. ನಟ ಕಪ್ಪು ಬಣ್ಣದ ಕಾರಿನ ಮುಂದೆ ನಿಂತಿದ್ದು, ಅಭಿಮಾನಿಯೊಬ್ಬರು ಭದ್ರತೆಯನ್ನು ದಾಟಿ ಬಂದ ವೇಳೆ ಅವರ ಮಕ್ಕಳು ಸುರಕ್ಷಿತವಾಗಿ ಒಳಗೆ ಬಂದಿದ್ದಾರೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನಂತರ ಅಭಿಮಾನಿಯ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಮೈಸೂರಿನ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ.. ಮಕ್ಕಳೊಂದಿಗೆ ಮಾತುಕತೆ
ಕಳೆದ ತಿಂಗಳು ನಟ ಶಾರುಖ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದರು. ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಕೈಯಲ್ಲಿ ಫೋನ್ ಹಿಡಿದು ನಟನ ಬಳಿ ಬಂದಿದ್ದಾರೆ. ಬಳಿಕ ಬಲವಂತವಾಗಿ ನಟನ ಕೈ ಹಿಡಿಯಲು ಮುಂದಾಗಿದ್ದರು. ಆ ವೇಳೆ ಶಾರುಖ್ ಪುತ್ರ ಆರ್ಯನ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.