ETV Bharat / entertainment

ತನ್ನ ಹೆಬ್ಬೆರಳನ್ನು ಬಿಗಿಯಾಗಿ ಹಿಡಿದ ಪುತ್ರಿ: ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು - ಅಲೋನ್ ಚಿತ್ರ

ನಟಿ ಬಿಪಾಶಾ ಬಸು ತಮ್ಮ ಪುತ್ರಿ ದೇವಿ ಬಸು ಸಿಂಗ್ ಗ್ರೋವರ್​​ ಜೊತೆಗಿರುವ ಹೊಸ ಫೋಟೋ ಹಂಚಿಕೊಂಡಿದ್ದಾರೆ. ತನ್ನ ಹೆಬ್ಬೆರಳನ್ನು ಬಿಗಿಯಾಗಿ ಹಿಡಿದಿರುವ ಪುತ್ರಿಯ ಫೋಟೋ ಇದಾಗಿದೆ.

Bipasha Basu shares adorable pics with husband and Daughter, see
ತನ್ನ ಹೆಬ್ಬೆರಳನ್ನು ಬಿಗಿಯಾಗಿ ಹಿಡಿದ ಪುತ್ರಿಯ ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು
author img

By

Published : Dec 2, 2022, 7:48 PM IST

Updated : Dec 3, 2022, 12:16 PM IST

ಹೈದರಾಬಾದ್: ಬಾಲಿವುಡ್​ನ ಸುಂದರ ಜೋಡಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಮದುವೆಯಾಗಿ ಆರು ವರ್ಷದ ನಂತರ ಪೋಷಕರಾಗಿದ್ದಾರೆ. ನ. 12 ರಂದು ಬಿಪಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸದ್ಯ ಮನೆಯಲ್ಲಿ ಸಂತಸ ನೆಲೆ ಮಾಡಿದೆ. ದಂಪತಿ ತಮ್ಮ ಮುದ್ದು ಮಗಳಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ಹೆಸರಿಸಿದ್ದಾರೆ.

ತಾಯ್ತನದ ಖುಷಿಯ ಜೊತೆ ಬಿಪಾಶಾ ಎರಡು ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಮನದಾಳದ ಮಾತನ್ನು ಹೇಳಿದ್ದಾರೆ. ಹಂಚಿಕೊಂಡ ಮೊದಲ ಚಿತ್ರದಲ್ಲಿ, ಬಿಪಾಶಾ ಮತ್ತು ಕರಣ್ ಉತ್ತಮ ಉಡುಗೆಯಿಂದ ಸುಂದರ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದಕ್ಕೆ ಬಿಪಾಶಾ, ಪತಿ ಕರಣ್‌ಗೆ ಯಾವಾಗಲೂ ನೀವು ನನ್ನ ನಂಬರ್ 1 ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ. ಎರಡನೆದಾಗಿ, ತನ್ನ ಹೆಬ್ಬೆರಳನ್ನು ಬಿಗಿಯಾಗಿ ಹಿಡಿದಿರುವ ಪುತ್ರಿಯ ಫೋಟೋ ಶೇರ್ ಮಾಡಿದ್ದಾರೆ. ಈ ಪೋಟೋಗೆ ಅಭಿಮಾನಿಗಳ ಪ್ರೀತಿಯ ಕಮೆಂಟ್​ಗಳು ಹರಿದು ಬರುತ್ತಿವೆ.

ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಬಸು ಮೊದಲ ಬಾರಿಗೆ 2015 ರಲ್ಲಿ ತೆರೆಕಂಡ ಅಲೋನ್ ಚಿತ್ರದ ಮೂಲಕ ಒಟ್ಟಿಗೆ ನಟಿಸಿದ್ದರು. ಶೂಟಿಂಗ್ ಸಮಯದಲ್ಲಿ ಇಬ್ಬರಲ್ಲು ಪ್ರೀತಿಯ ಚಿಗುರೊಡೆದಿದ್ದರಿಂದ 2016 ರಲ್ಲಿ ವಿವಾಹವಾಗಿದ್ದರು. ಸದ್ಯ ಮದುವೆಯಾಗಿ 6 ​​ವರ್ಷಗಳ ನಂತರ, ದಂಪತಿ ಮನೆಯಲ್ಲಿ ಪುಟ್ಟ ದೇವತೆ ಜನನವಾಗಿದೆ.

ಇದನ್ನೂ ಓದಿ:ಹನ್ಸಿಕಾ ಮದುವೆ ಶಾಸ್ತ್ರಗಳು ಪ್ರಾರಂಭ: ಐಷಾರಾಮಿ ಹೋಟೆಲ್ ಆದ ಪುರಾತನ ಕೋಟೆ

Last Updated : Dec 3, 2022, 12:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.