ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿದ್ದು ಸ್ಪರ್ಧಿಗಳ ಪ್ರೀತಿ-ಸ್ನೇಹ-ವಿಶ್ವಾಸಕ್ಕೆ ಪರೀಕ್ಷೆ ಎದುರಾದಂತಿದೆ. ಅಸಲಿ ಆಟ ಈಗ ಶುರುವಾಗಿರುವಂತೆ ತೋರುತ್ತಿದೆ. ಅದರ ಸುಳಿವು ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸಿಕ್ಕಿದೆ.
-
ಕಾರ್ತಿಕ್-ವಿನಯ್ ಸ್ನೇಹದಲ್ಲಿ ಸಂಗೀತಾವೆಂಬ ಅಪಸ್ವರ?
— Colors Kannada (@ColorsKannada) October 18, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/q6Ixhv1jDS
">ಕಾರ್ತಿಕ್-ವಿನಯ್ ಸ್ನೇಹದಲ್ಲಿ ಸಂಗೀತಾವೆಂಬ ಅಪಸ್ವರ?
— Colors Kannada (@ColorsKannada) October 18, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/q6Ixhv1jDSಕಾರ್ತಿಕ್-ವಿನಯ್ ಸ್ನೇಹದಲ್ಲಿ ಸಂಗೀತಾವೆಂಬ ಅಪಸ್ವರ?
— Colors Kannada (@ColorsKannada) October 18, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/q6Ixhv1jDS
'ಕಾರ್ತಿಕ್-ವಿನಯ್ ಸ್ನೇಹದಲ್ಲಿ ಸಂಗೀತಾವೆಂಬ ಅಪಸ್ವರ?' ಎಂಬ ಶೀರ್ಷಿಕೆ ಕೊಟ್ಟು ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ಇದು ಆನ್ಲೈನ್ಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ ಎಂಬ ದೊಡ್ಮನೆಯೊಳಗೆ ಹೋದಾಗಿನಿಂದಲೂ ಸಂಗೀತಾ ಹಾಗೂ ಕಾರ್ತಿಕ್ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಟಾಸ್ಕ್, ನಾಮಿನೇಷನ್ ಸೇರಿದಂತೆ ಹೆಚ್ಚಿನ ಸಂದರ್ಭಗಳಲ್ಲಿ ಇಬ್ಬರೂ ಈವರೆಗೆ ಪರಸ್ಪರ ಸಪೋರ್ಟಿವ್ ಆಗಿ ನಡೆದುಕೊಂಡಿದ್ದಾರೆ. ಈ ಸ್ಪರ್ಧಿಗಳ ಸ್ನೇಹಕ್ಕೀಗ ಪರೀಕ್ಷೆ ಎದುರಾಗಿದೆ.
-
ಟಾಸ್ಕ್ ಅಂದ್ಮೇಲೆ ಕಿತ್ತಾಟ, ಕಿತ್ತಾಟ ಅಂದ್ಮೇಲೆ ಚೀರಾಟ, ಚೀರಾಟ ಅಂದ್ಮೇಲೆ ಗೆಲ್ಲೋ ಹೋರಾಟ, ಮುಂದೇನಾಯ್ತು ಈ ಆಟ?
— Colors Kannada (@ColorsKannada) October 18, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/n3kvx7vo5q
">ಟಾಸ್ಕ್ ಅಂದ್ಮೇಲೆ ಕಿತ್ತಾಟ, ಕಿತ್ತಾಟ ಅಂದ್ಮೇಲೆ ಚೀರಾಟ, ಚೀರಾಟ ಅಂದ್ಮೇಲೆ ಗೆಲ್ಲೋ ಹೋರಾಟ, ಮುಂದೇನಾಯ್ತು ಈ ಆಟ?
— Colors Kannada (@ColorsKannada) October 18, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/n3kvx7vo5qಟಾಸ್ಕ್ ಅಂದ್ಮೇಲೆ ಕಿತ್ತಾಟ, ಕಿತ್ತಾಟ ಅಂದ್ಮೇಲೆ ಚೀರಾಟ, ಚೀರಾಟ ಅಂದ್ಮೇಲೆ ಗೆಲ್ಲೋ ಹೋರಾಟ, ಮುಂದೇನಾಯ್ತು ಈ ಆಟ?
— Colors Kannada (@ColorsKannada) October 18, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/n3kvx7vo5q
'ಎಲ್ಲರೂ ಒಂದ್ ಕಡೆ ಇದ್ರೆ, ನೀನು ಮಾತ್ರ ಒಂದ್ ಕಡೆ ಇರ್ತೀಯಾ. ಹದಿನಾರು ಜನರಲ್ಲಿ ಬೇರೆ ಯಾರೂ ಕಾಣಿಸ್ಲಿಲ್ವಾ? ನಾನು ಏನ್ ಮಾಡಿದೀನಿ ನಿಂಗೆ?' ಎಂದು ಒಂದು ಕಡೆ ವಿನಯ್ ಏರುದನಿಯಲ್ಲಿ ಕಾರ್ತಿಕ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ ಸಂಗೀತಾ, 'ಅವ್ರಿಗೆ ಯಾರೂ ಬೆರಳು ತೋರಿಸಬಾರದು. ತೋರಿಸಿದರೆ ಅವರು ಸಿಟ್ಟಿಗೇಳ್ತಾರೆ' ಎಂದು ವಿನಯ್ ಬಗ್ಗೆ ತಣ್ಣಗೆ ಹೇಳುತ್ತಾರೆ. 'ಸಗಣಿ ಮೇಲೆ ಕಾಲಿಟ್ರೆ ಏನು ಮಾಡ್ತೀಯಾ?' ಎಂಬುದು ವಿನಯ್ ಪ್ರಶ್ನೆ. 'ಐ ನೋ… ಇಲ್ಲಿ ಯಾರೂ ನಮ್ಮೋರಲ್ಲ' ಅನ್ನೋದು ಸಂಗೀತಾ ಅವರು ಕಾರ್ತಿಕ್‌ಗೆ ಹೇಳುತ್ತಿರುವ ಭಾವುಕ ನುಡಿ. 'ಇಲ್ಲಾ ನಾನಾ..ಇಲ್ಲಾ ಅವಳಾ?' ಇದು ವಿನಯ್ ಅವರ ಖಡಕ್ ಪ್ರಶ್ನೆ. 'ನೀವು ನನ್ ಜೊತೆ ಇರಿ, ಇಲ್ದೇ ಇರಿ, ಐ ಫೈಟ್ ಮೈ ಫೈಟ್' ಎಂದು ಕೊನೆಯ ಮಾತು ಎಂಬಂತೆ ಹೇಳಿ ಸಂಗೀತಾ ಎದ್ದು ಹೋಗಿದ್ದಾರೆ. 'ವಾರ್ ಡಿಕ್ಲೇರ್ ಮಾಡಿದ್ದಾರೆ. ವಾರ್ ಮಾಡೋಣ' ಎಂಬುದು ವಿನಯ್ ಕೊನೆಯ ಮಾತು.
ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಕ್ಷಣಗಳು: Photos
-
ಟಾಸ್ಕ್ ಸೋತರೂ ಸಂಗೀತಾಳ ಸ್ನೇಹ ಗೆದ್ದ ಕಾರ್ತಿಕ್!
— Colors Kannada (@ColorsKannada) October 17, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/QBC3SJ8cAk
">ಟಾಸ್ಕ್ ಸೋತರೂ ಸಂಗೀತಾಳ ಸ್ನೇಹ ಗೆದ್ದ ಕಾರ್ತಿಕ್!
— Colors Kannada (@ColorsKannada) October 17, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/QBC3SJ8cAkಟಾಸ್ಕ್ ಸೋತರೂ ಸಂಗೀತಾಳ ಸ್ನೇಹ ಗೆದ್ದ ಕಾರ್ತಿಕ್!
— Colors Kannada (@ColorsKannada) October 17, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/QBC3SJ8cAk
ಇವರಿಬ್ಬರ ಮಾತುಗಳನ್ನು ಮೌನವಾಗಿ ಕೇಳಿಸಿಕೊಳ್ಳುತ್ತಾ ಕುಳಿತಿರುವ ಕಾರ್ತಿಕ್ ಅವರ ಮನಸ್ಸಿನೊಳಗಿನ ತೊಳಲಾಟ ಮುಖದಲ್ಲಿ ಎದ್ದು ಕಾಣಿಸುತ್ತಿದೆ. ಬೆಸ್ಟ್ ಫ್ರೆಂಡ್ ಸಂಗೀತಾ ಜತೆಗೆ ನಿಲ್ತಾರಾ? ಅಥವಾ ವಿನಯ್‌ಗೆ ಸಾಥ್ ಕೊಡ್ತಾರಾ? ಎಂಬುದು ಪ್ರೇಕ್ಷಕರ ಪ್ರಶ್ನೆ. ಅದನ್ನು ತಿಳಿದುಕೊಳ್ಳಲು ಜಿಯೋಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡದ ನೇರಪ್ರಸಾರ ವೀಕ್ಷಿಸಿ.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 10: ತುಕಾಲಿ ಸಂತೋಷ್ ಕಾಮಿಡಿ - ದೊಡ್ಮನೆ ಸ್ಪರ್ಧಿಗಳ ಮೊಗದಲ್ಲಿ ನಗುವೇ ನಗು!
ನಟ ಸುದೀಪ್ ಸಾರಥ್ಯದ ಬಿಗ್ ಬಾಸ್ 9 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 10ನೇ ಸೀಸನ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಆರಂಭಗೊಡಿದ್ದು, ಎರಡನೇ ವಾರ ನಡೆಯುತ್ತಿದೆ. 24 ಗಂಟೆಯೂ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ಪ್ರತಿ ದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ವೀಕ್ಷಿಸಬಹುದು.