ETV Bharat / entertainment

Bigg Boss OTT 2 day 52 highlights: ಅಂತಿಮ ಹಂತದ ಹಣಾಹಣಿಯಲ್ಲಿ ಬಿಗ್​ಬಾಸ್​ ಸ್ಪರ್ಧಿಗಳು; ಫಿನಾಲೆಗೆ ಇನ್ನೊಂದೇ ವಾರ ಬಾಕಿ - ಗ್ರಾಂಡ್​ ಫಿನಾಲೆಗೆ ಕೇವಲ ಒಂದು ವಾರ

Bigg Boss OTT 2 day 52 highlights: ಬಿಗ್​ಬಾಸ್​ ಒಟಿಟಿ 2 ಫಿನಾಲೆಗೆ ಅಂತ್ಯದಲ್ಲಿದ್ದು, ಸ್ಪರ್ಧಿಗಳ ಹಣಾಹಣಿ ರೋಚಕ ತಿರುವು ಪಡೆದುಕೊಂಡಿದೆ.

bigg-boss-ott-2-day-52-highlights-bigg-boss-loses-cool-on-elvish-yadav-two-more-contestants-join-abhishek-malhan-as-finalists

author img

By

Published : Aug 8, 2023, 12:33 PM IST

Updated : Aug 8, 2023, 12:42 PM IST

ಬೆಂಗಳೂರು: ಬಿಗ್​ಬಾಸ್​ ಒಟಿಟಿ ಸೀಸನ್​ 2 ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಗ್ರಾಂಡ್​ ಫಿನಾಲೆಗೆ ಕೇವಲ ಒಂದು ವಾರ ಬಾಕಿ ಇದೆ. ಟ್ರೋಫಿ ಗೆಲುವಿಗಾಗಿ ಮನೆಯಲ್ಲಿ ಕಾದು ಕುಳಿತಿರುವ ಅಭ್ಯರ್ಥಿಗಳಿಗೆ ಇದೀಗ ನಾಮಿನೇಷನ್​ ಸವಾಲ್​ ಎದುರಾಗಿದೆ. 52ನೇ ಸಂಚಿಕೆಯಲ್ಲಿ ಇದೀಗ ಮತ್ತಿಬ್ಬರು ಫೈನಲಿಸ್ಟ್​ಗಳು ಸೇರಿದ್ದು, ಇದೀಗ ಆಟ ಮತ್ತಷ್ಟು ರೋಚಕವಾಗಿದೆ.

ಜಿಯಾ ಶಂಕರ್​ಗೆ ಸಲಹೆ ನೀಡಿದ ಪೂಜಾ ಭಟ್​​: ಜಿಯಾ ಮತ್ತು ಅವಿನಾಶ್​ ಸಚ್​ದೇವ್​ ಅವರನ್ನು ನಾಮೀನೆಟ್​ ಮಾಡಿದ ಪೂಜಾ ಇದೇ ವೇಳೆ ಜಿಯಾಗೆ ಕೆಲವು ಸಲಹೆಗಳನ್ನು ನೀಡಿದರು. ಜೀವನ ತುಂಬಾ ಸಣ್ಣದು. ಜಿಯಾಳ ಜೀನಿಯಸ್ ವ್ಯಕ್ತಿತ್ವವನ್ನು ಗೇಮ್​ಗಳಲ್ಲಿನ ಪ್ರದರ್ಶನಕ್ಕಿಂತ ಇತರೆ ಅಭ್ಯರ್ಥಿಗಳೊಂದಿಗೆ ತೀರ್ಮಾನ ಮಾಡಲಾಗುವುದು ಎಂದರು. ಇನ್ನು ಮನೆಯಲ್ಲಿದ್ದಾಗ ಜಿಯಾ ಮನೀಶಾ​ ಜೊತೆಗಿನ ಸಂಬಂಧ ಕಂಡು ಪೂಜಾ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ. ಅವರು ವರ್ತನೆ ಮಾಡುತ್ತಿರುವ ರೀತಿ ಜನರಿಗೆ ತಪ್ಪು ಸಂದೇಶ ರವಾನಿಸಬಹುದು. ಈ ಹಿನ್ನೆಲೆ ನಿಮ್ಮ ವ್ಯಕ್ತಿತ್ವವನ್ನು ಯಾರಿಗಾಗಿಯೋ ಬದಲಾಯಿಸಿಕೊಳ್ಳದೆ ನಿಮ್ಮಂತೆ ನೀವು ಇರಿ ಎಂದು ಹೇಳಿದರು.

ಕಡೆಯ ನಾಮಿನೇಷನ್​ ಟಾಸ್ಕ್​: ಈ ಸೀಸನ್​ನ ಕಡೆಯ ನಾಮಿನೇಷನ್​ ಸೋಮವಾರ ನಡೆಯಲಿದೆ. ಈ ಫಿನಾಲೆಗೆ ಇದೀಗ ಅಭಿಷೇಕ್​ ಕೂಡ ಸೇರಿದ್ದಾರೆ. ಈ ಹಿನ್ನೆಲೆ ಇದು ಮತ್ತಷ್ಟು ಮೋಜುಭರಿತವಾಗಿದೆ. ಇನ್ನು ಇದೆ ವೇಳೆ ಅಭ್ಯರ್ಥಿಗಳಿಗೆ ರೂಮ್​ ಆಫ್​ ಟ್ರೂಥ್​ ಚಟುವಟಿಕೆಯನ್ನು ನೀಡಲಾಗಿದೆ. ಈ ವೇಳೆ ಅಭ್ಯರ್ಥಿಗಳನ್ನು ಮೂರು ಗುಂಪಾಗಿ ಮಾಡಲಾಗಿದೆ. ಅದರಲ್ಲಿ ಮನೀಶಾ​ ಮತ್ತು ಎಲ್ವಿಶ್​ ಒಂದು ಗುಂಪಾದರೆ, ಜಿಯಾ ಮತ್ತು ಅಭಿಷೇಕ್​ ಒಂದು ಗುಂಪು. ಹಾಗೇ ಬೆಬಿಕಾ ಮತ್ತು ಪೂಜಾ ಮತ್ತೊಂದು ಗುಂಪಾಗಿದ್ದಾರೆ. ಪ್ರತಿ ತಂಡವೂ ರೂಮ್​ ಆಫ್​ ಟ್ರೂಥ್​​ಗೆ ಹೋಗುವ ಅವಕಾಶ ಪಡೆಯಲಿದೆ. ಈ ವೇಳೆ ಇಬ್ಬರು ತಂಡದ ಸದಸ್ಯರು ತಮ್ಮ ಇತರೆ ಸ್ಪರ್ಧಿಗಳೊಂದಿಗೆ 27 ನಿಮಿಷಗಳ ಕಾಲ ಮುಕ್ತವಾಗಿ ಟೀಕಿಸಬಹುದಾಗಿದೆ. ಈ ವೇಳೆ ಉಳಿದ ತಂಡಗಳು ಅವರಿಗೆ ನೀಡಿದ ಸಮಯ ಮತ್ತು ಶಬ್ಧಗಳ ಆಧಾರದ ಮೇಲೆ ಅವಧಿಯನ್ನು ಅಂದಾಜಿಸಲಿವೆ. ಯಾವ ತಂಡ ಈ ಶಬ್ಧವನ್ನು ಸರಿಯಾಗಿ ಅಂದಾಜಿಸಲಿದೆಯೋ ಆ ತಂಡ ಗೆಲುವು ಪಡೆಯಲಿದೆ.

ಬಿಗ್​ಬಾಸ್​ ನಿರ್ಧಾರ ಅನುಮಾನಿಸಿದ ಎಲ್ವಿಶ್​ ಯಾದವ್​: ಈ ನಾಮಿನೇಷನ್​ ಟಾಸ್ಕ್​ನ ಸಮಯ ಏಣಿಕೆಯ ಬಗ್ಗೆ ಎಲ್ವಿಶ್​ ಧ್ವನಿ ಎತ್ತಿದ್ದಾರೆ. ಎಲ್ವಿಶ್​​ ಸರಿಯಾದ ಸಮಯಕ್ಕೆ ಟಾಸ್ಕ್​ ಮುಗಿಸಿದ್ದಾಗಿ ಹೇಳಿದ್ದಾರೆ. ಆದರೆ ಬಿಗ್​ಬಾಸ್​, ಎಲ್ವಿಶ್​ ಮತ್ತು ಮನೀಶಾ​ ರಾಣಿ 38 ನಿಮಿಷ 41 ಸೆಕೆಂಡ್​​ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಈ ವೇಳೆ ಬಿಗ್​ಬಾಸ್​ ಇದು ಲೆಕ್ಕಾಚಾರ ತಪ್ಪು ಎಂದರೆ, ಎಡಿಟ್​ ಆಗಿಲ್ಲದ ಫುಟೇಜ್​ ಅನ್ನು ಕೂಡ ಪರಿಶೀಲಿಸಬಹುದು ಎಂದಿತು.

ಎಲ್ವಿಶ್​ ವಾದಕ್ಕೆ ಬಿಗ್​ಬಾಸ್​​ ಚಡಿ: ಫಲಿತಾಂಶ ಘೋಷಣೆ ಬಳಿಕ ಎಲ್ವಿಶ್​, ಏಣಿಕೆ ಸರಿಯಾಗಿಲ್ಲ ಎಂದು ಮನೀಶ್​ ಬಳಿ ಹೇಳಿದ್ದಾರೆ. ಇದಕ್ಕೆ ಬಿಗ್​ಬಾಸ್​ ಕೂಡ ಕಿಡಿಕಾರಿತು. ಬಳಿಕ ಎಲ್ವಿಶ್​ ತಮ್ಮ ವಾದ ಕುರಿತು ಬಿಗ್​ ಬಾಸ್​ ಜೊತೆಗೆ ವಿಷಾದ ವ್ಯಕ್ತಪಡಿಸಿದರು.

ಸಂಚಿಕೆ ಅಂತಿಮ ಸ್ಪರ್ಧಿಗಳ ಘೋಷಿಸಿದ ಬಿಗ್​ ಬಾಸ್​: ಪೂಜಾ ಬಿಗ್​ಬಾಸ್​ ನೀಡಿದ ಸಮಯಕ್ಕೆ ಸರಿಯಾಗಿ ಅಂದಾಜಿಸಿದ್ದ, ಹಿನ್ನೆಲೆ ಫಿನಾಲೆಯ ಅಂತಿಮ ನಾಮಿನೇಟ್ ​ಆಗುವುದರಿಂದ ಪಾರಾದರು. ಅಂತಿಮವಾಗಿ ಜಿಯಾ, ಮನಿಶ್​​ ಮತ್ತು ಎಲ್ವಿಶ್​ ಈ ವಾರ ಡೇಂಜರ್​​ ಜೋನ್​ನಲ್ಲಿದ್ದಾರೆ. ಗ್ರಾಂಡ್​ ಫಿನಾಲೆಗೆ ಮುನ್ನ ಈ ಮೂರರಲ್ಲಿ ಒಬ್ಬರು ಹೊರಗೆ ಹೋಗಲಿದ್ದಾರೆ.

ಮನೀಶಾ ರಾಣಿಯಿಂದ ಕಿರಿಕಿರಿ ಅನುಭವಿಸಿದ ಎಲ್ವಶ್​: ಎಲ್ವಿಶ್​ ಮತ್ತು ಮನೀಶಾ​​ ತಮ್ಮ ಕಳಪೆ ಜೋಕ್​ ಮೂಲಕ ಮನೆಯಲ್ಲಿ ಕಂಡಿದ್ದಾರೆ. ಮನೀಶಾ, ಎಲ್ವಿಶ್​​ ಸಂಬಂಧ ಮತ್ತು ಬ್ರೇಕ್​ ಅಪ್​ ಕುರಿತು ಹಾಸ್ಯ ಮಾಡಿದ್ದಾರೆ. ಅಂತಿಮವಾಗಿ ಮನೀಶಾ ಎಲ್ವಿಶಾ ಗೆಳತಿ ಬಗ್ಗೆ ಹಾಸ್ಯ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಗ್ ಬಾಸ್ OTT 2: ಆರನೇ ವಾರ ಇಬ್ಬರು ನಾಮಿನೇಟ್​.. ಯಾರಿಗೆ ಸಿಗಲಿದೆ ಗೇಟ್​ಪಾಸ್​?

Last Updated : Aug 8, 2023, 12:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.