ETV Bharat / entertainment

ಪ್ರಮೋದ್-ಪೃಥ್ವಿ ಅಂಬರ್​​ ನಟನೆಯ 'ಭುವನಂ ಗಗನಂ' ಶೂಟಿಂಗ್ ಕಂಪ್ಲೀಟ್ - ಪೃಥ್ವಿ ಅಂಬರ್

ಗಿರೀಶ್ ಮೂಲಿಮನಿ ನಿರ್ದೇಶನದ 'ಭುವನಂ ಗಗನಂ' ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ.

Bhuvanam Gaganam
'ಭುವನಂ ಗಗನಂ' ಶೂಟಿಂಗ್ ಕಂಪ್ಲೀಟ್
author img

By ETV Bharat Karnataka Team

Published : Jan 5, 2024, 7:45 PM IST

ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಸಿನಿಮಾ ''ಭುವನಂ ಗಗನಂ''. ಪ್ರೀಮಿಯರ್ ಪದ್ಮಿನಿ ಸಿನಿಮಾ ಖ್ಯಾತಿಯ ಪ್ರಮೋದ್ ಹಾಗೂ ದಿಯಾ ಚಿತ್ರದ ಪೃಥ್ವಿ ಅಂಬರ್ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರವಿದು. 'ಭುವನಂ ಗಗನಂ' ಹೆಚ್ಚು ಸದ್ದು ಮಾಡದೆ ಶೂಟಿಂಗ್ ಪೂರ್ಣಗೊಳಿಸಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರತಂಡ ಕೊನೆ ದಿನದ ಚಿತ್ರೀಕರಣ ನಡೆಸಿದೆ.

ನಟ ಪ್ರಮೋದ್ ಮಾತನಾಡಿ, ನನ್ನ ಭಾಗದ ಶೂಟಿಂಗ್ 2023ರ ಅಕ್ಟೋಬರ್ ತಿಂಗಳಲ್ಲೇ ಮುಗಿದಿತ್ತು. ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದ್ಭುತ ಶೂಟಿಂಗ್ ಸೆಟ್ ಹಾಕಿದ್ದಾರೆ. ಇದಕ್ಕೆಲ್ಲಾ ಮುನೇಗೌಡರ ಬೆಂಬಲವಿದೆ. ಅವರಿಗೆ ಸಿನಿಮಾ ಮೇಲೆ ಹೆಚ್ಚು ಆಸಕ್ತಿಯಿದೆ. ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಚಿತ್ರದಲ್ಲಿ ನಾನು ಸ್ಟೈಲೀಶ್, ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದರು.

Bhuvanam Gaganam
'ಭುವನಂ ಗಗನಂ' ತಂಡ

ಬಳಿಕ ನಟ ಪೃಥ್ವಿ ಅಂಬರ್ ಮಾತನಾಡಿ, ನನ್ನ ಪಾತ್ರ ಸ್ವಲ್ಪ ವಿಭಿನ್ನ. ಬಹಳ ಪ್ಯಾಷನೇಟೆಡ್ ಆಗಿ ನಿರ್ದೇಶಕರು ನನ್ನ ಕೈಯಲ್ಲಿ ಅಭಿನಯ ಮಾಡಿಸಿದ್ದಾರೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮುನೇಗೌಡರ ಎಸ್​​ವಿಸಿ ಫಿಲ್ಮ್ಸ್ ಚಿತ್ರರಂಗದಲ್ಲಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಬೇಕು. ಓರ್ವ ಸ್ಟ್ರಾಂಗ್ ಪ್ರೊಡ್ಯೂಸರ್ ಸಿಗುವುದು ಕಷ್ಟ. ಅವರು ಈ ಕಂಟೆಂಟ್​ಗೆ ಏನು ಬೇಕೋ ಅದನ್ನು ಮನಸಾರೆ, ಬಹಳ ಪ್ರಿತಿಯಿಂದ ಕೊಟ್ಟಿದ್ದಾರೆ. ಈ ಸಂಸ್ಥೆಯಿಂದ ತುಂಬಾ ಒಳ್ಳೆ ಸಿನಿಮಾಗಳು ಬರಬೇಕು ಎಂದು ಹೇಳಿದರು.

ನಿರ್ದೇಶಕ ಗಿರೀಶ್ ಮೂಲಿಮನಿ ಮಾತನಾಡಿ, ಒಂದೂವರೆ ವರ್ಷದ ಹಿಂದೆಯೇ ಭುವನಂ ಗಗನಂ ಪಯಣ ಪ್ರಾರಂಭವಾಗಿದೆ. ಲವ್, ರೊಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರವುಳ್ಳ ಸಿನಿಮಾವಾಗಿದ್ದು, ನಗರ, ಹಳ್ಳಿ ಸೇರಿ ಎರಡು ಬ್ಯಾಕ್​ಡ್ರಾಪ್​ನಲ್ಲಿ ನಡೆಯುವ ಕಥೆ. ಈ ಚಿತ್ರ ಸಖತ್​​ ಎಂಟರ್​​​ಟೈನಿಂಗ್ ಆಗಿ ಇದೆಯೆಂದರು.

ಪ್ರಮೋದ್ ಅವರಿಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿ ಅಂಬರ್​​ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಇವರ ಜೊತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗಾ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: 'ಮಾರ್ಟಿನ್' ಆಡಿಯೋ ರೈಟ್ಸ್ ಕೋಟ್ಯಂತರ ರೂಪಾಯಿಗೆ ಮಾರಾಟ; ಧ್ರುವ ಸರ್ಜಾ ಸಿನಿಮಾ ಕಾತರ

ನಿರ್ಮಾಪಕ ಎಂ.ಮುನೇಗೌಡ ಮಾತನಾಡಿ, ಒಂದೂವರೆ ವರ್ಷದ ಹಿಂದೆ ಶುರುವಾದ ಜರ್ನಿ ಇದು. ಸುಮಾರು 75 ದಿನಗಳ ಕಾಲ ಮೈಸೂರು, ಹಾವೇರಿ, ಕುದುರೆಮುಖ, ಕಳಸ, ಕನ್ಯಾಕುಮಾರಿ. ಬೆಂಗಳೂರು ಸುತ್ತಿಕೊಂಡು ಕೊನೆಗೆ ಈ ಜಾಗದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಒಂದೊಳ್ಳೆ ಕಥೆ ಹಿಡಿದು ಸಿನಿಮಾ ಮಾಡಿದ್ದೇವೆ. ಈ ಸಿನಿಮಾ ಯಾವುದೋ ಒಂದು ರೇಂಜ್​ನಲ್ಲಿ ಹೋಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದರು.

Bhuvanam Gaganam
'ಭುವನಂ ಗಗನಂ' ತಂಡ

ಇದನ್ನೂ ಓದಿ: ರಾಕಿಂಗ್​ ಸ್ಟಾರ್ 'ಯಶ್​​ ಬರ್ತ್​ಡೇ ಡಿಪಿ' ಅನಾವರಣಗೊಳಿಸಿದ ಶಿವಣ್ಣ

'ಭುವನಂ ಗಗನಂ' ಸಿನಿಮಾಗೆ ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ರಾಜರು ಎಂಬ ಚಿತ್ರ ಮಾಡಿದ್ದರು. ಇದೀಗ ಭುವನಂ ಗಗನಂ ಮೂಲಕ ಮತ್ತೊಂದು ಫ್ರೆಶ್ ಕಥೆ ಹೇಳೋದಿಕ್ಕೆ ಬರುತ್ತಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಬೇಕೆಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್​​ವಿಸಿ ಫಿಲ್ಮಂಸ್ ಪ್ರೊಡಕ್ಷನ್ ಅಡಿ ಭುವನಂ ಗಗನಂಗೆ ಬಂಡವಾಳ ಹೂಡಿದ್ದಾರೆ. ಉದಯ್ ಲೀಲಾ ಕ್ಯಾಮರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಈ ಸಿನಿಮಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿರೋ ಭುವನಂ ಗಗನಂ ಚಿತ್ರತಂಡ ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಿ ಪ್ರೇಕ್ಷಕರ ಮುಂದೆ ಬರುವ ಯೋಜನೆ ಹಾಕಿಕೊಂಡಿದೆ.

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.