ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ (25) ಇಂದು ವಾರಣಾಸಿಯ ಸಾರನಾಥ ಪ್ರದೇಶದ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದ್ರೆ ಇನ್ನೂ ಖಚಿತಪಡಿಸಿಲ್ಲ. ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪೊಲೀಸ್ ಮಾಹಿತಿ.. ಮಾಧ್ಯಮಗಳೊಂದಿಗೆ ಮಾತನಾಡಿದ ಎಸಿಪಿ ಜ್ಞಾನ್ ಪ್ರಕಾಶ್ ಸಿಂಗ್, "ಆಕಾಂಕ್ಷಾ ದುಬೆ ವಾರಣಾಸಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ವರದಿಯು ಇದು ಆತ್ಮಹತ್ಯೆ ಎಂದು ಸೂಚಿಸುತ್ತದೆ. ಆದರೆ ಖಚಿತ ಮಾಹಿತಿಗೆ ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣಕ್ಕಾಗಿ ಅವರು ಪ್ರಸ್ತುತ ವಾರಣಾಸಿಯಲ್ಲಿ ತಂಗಿದ್ದರು'' ಎಂದು ತಿಳಿಸಿದ್ದಾರೆ.
ಚಿತ್ರತಂಡದ ಸದಸ್ಯರ ಮಾಹಿತಿ: ಅವರ ಚಿತ್ರತಂಡದ ಸದಸ್ಯರಲ್ಲಿ ಒಬ್ಬರಾದ ರೇಖಾ ಮೌರ್ಯ ಮಾತನಾಡಿ, "ಇಂದು ಬೆಳಗ್ಗೆ ನನಗೆ ಕರೆ ಬಂತು, ಆಕಾಂಕ್ಷಾ ಅವರ ಶೂಟಿಂಗ್ ಇತ್ತು, ಹಾಗಾಗಿ ಅವರು 10 ಗಂಟೆಗೆ ಸಿದ್ಧರಾಗಬೇಕಿತ್ತು. ನಾನು ಅವರನ್ನು ಕರೆಯಲು ಅವರ ಕೋಣೆ ಬಳಿ ಹೋಗಿ ಬಾಗಿಲು ತಟ್ಟಿದೆ. ಅವರು ಬಾಗಿಲು ತೆರೆಯಲಿಲ್ಲ, ಫೋನ್ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ನಂತರ ನಾನು ನಮ್ಮ ತಂಡದ ಹಿರಿಯರಿಗೆ ಕರೆ ಮಾಡಿದೆ. ಬಳಿಕ ಘಟನೆಯ ಬಗ್ಗೆ ನಮಗೆ ತಿಳಿಯಿತು'' ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತಷ್ಟು ಮಾಹಿತಿ ಹಂಚಿಕೊಂಡ ರೇಖಾ ಮೌರ್ಯ, "ಆಕಾಂಕ್ಷಾ ನಿನ್ನೆ ರಾತ್ರಿ ಬರ್ತ್ ಡೇ ಪಾರ್ಟಿ ಒಂದಕ್ಕೆ ಹೋಗಿದ್ದರು. ಆದರೆ ಅವರು ಎಲ್ಲಿಗೆ ಮತ್ತು ಯಾರೊಂದಿಗೆ ಹೋಗುತ್ತಿದ್ದಾರೆಂದು ತಿಳಿಸಿರಲಿಲ್ಲ" ಎಂದು ಹೇಳಿದರು.
ಕಿರಿ ವಯಸ್ಸಿನಲ್ಲಿ ಸಾಕಷ್ಟು ಖ್ಯಾತಿ.. ಆಕಾಂಕ್ಷಾ ದುಬೆ ಭೋಜ್‌ಪುರಿ ಸಿನಿಮಾ, ಸಂಗೀತದಲ್ಲಿ ಕೆಲಸ ಮಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಗಳನ್ನು ಹೊಂದಿದ್ದರು. ಅವರ ರೀಲ್ಸ್ ವಿಡಿಯೋಗಳು ಸಾಕಷ್ಟು ಜನಪ್ರಿಯವಾಗಿವೆ. ಈ ನಟಿ ಕಡಿಮೆ ಸಮಯದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು.
ಇದನ್ನೂ ಓದಿ: ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ.. ಡ್ರೀಮ್ ಗರ್ಲ್ ಸಾವಿನಿಂದ ಅಭಿಮಾನಿಗಳಿಗೆ ಆಘಾತ
ಇನ್ನು ತಮ್ಮ ಜೀವನವನ್ನು ಕೊನೆಗೊಳಿಸುವ ಕೆಲ ಗಂಟೆಗಳ ಮೊದಲು, ಭೋಜ್‌ಪುರಿ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಕಣ್ಣೀರು ಸುರಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಈ ಸಂಬಂಧ ವಿಡಿಯೋ ಒಂದು ಹರಿದಾಡುತ್ತಿದೆ. ಅದರಲ್ಲಿ ನಟಿ ಬಾಯಿಗೆ ಕೈ ಹಿಡಿದು, ಕಣ್ಣೀರು ಹಾಕಿದ್ದನ್ನು ಕಾಣಬಹುದು.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ನೆನೆದು ಕಣ್ಣೀರಿಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕಸಮ್ ಪೈದಾ ಕರ್ನೆ ವಾಲೆ ಕಿ 2, ಮುಜ್ಸೆ ಶಾದಿ ಕರೋಗಿ (ಭೋಪುರಿ) ಮತ್ತು ವೀರೋನ್ ಕೆ ವೀರ್, ಮೇರಿ ಜಂಗ್ ಮೇರಾ ಫೈಸ್ಲಾ, ಫೈಟರ್ ಕಿಂಗ್ ಸೇರಿದಂತೆ ಹಲವಾರು ಭೋಜ್‌ಪುರಿ ಚಿತ್ರಗಳಲ್ಲಿ ಆಕಾಂಕ್ಷಾ ದುಬೆ ನಟಿಸಿದ್ದರು. ಭೋಜ್‌ಪುರಿ ಚಿತ್ರರಂಗದ ರಾಣಿ ಚಟರ್ಜಿ, ವಿನಯ್ ಆನಂದ್ ಮತ್ತು ಆಮ್ರಪಾಲಿ ದುಬೆ ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ.