ನಿನ್ನೆ(ಗುರುವಾರ) ಸಿಂಗಾಪುರದಲ್ಲಿ ನಡೆದ 'ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್ 2023'ರಲ್ಲಿ ಭಾರತದಿಂದ ವಿಜಯ್ ವರ್ಮಾ ಮತ್ತು ರಾಜ್ಶ್ರೀ ದೇಶ್ಪಾಂಡೆ ಭಾಗಿಯಾಗಿ ವಿಶೇಷ ಗೌರವಕ್ಕೆ ಪಾತ್ರರಾದರು. ಸಿಂಗಾಪುರ, ಜಪಾನ್ ಮತ್ತು ಭಾರತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡ ಪ್ರಮುಖ ದೇಶಗಳಾಗಿವೆ.
ಭಾರತೀಯ ನಟರು ನಟನಾ ವಿಭಾಗದಲ್ಲಿ ಮಿಂಚು ಹರಿಸಿದ್ದಾರೆ. ಟ್ರಯಲ್ ಬೈ ಫೈಯರ್ (ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ) ಅಮೋಘ ಅಭಿನಯಕ್ಕಾಗಿ ರಾಜ್ಶ್ರೀ ದೇಶಪಾಂಡೆ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ವಿಜಯ್ ವರ್ಮಾ ಪ್ರಮುಖ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡರು. ದಹಾದ್‌ನಲ್ಲಿನ (ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ) ನಟನೆಗೆ ಈ ಗೌರವ ಸಂದಿದೆ.
ಇಬ್ಬರು ವಿಜೇತರು ಸಾಮಾಜಿಕ ಮಾಧ್ಯಮದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ವಿಜಯ್ ಕೃತಜ್ಞತೆ ಸಲ್ಲಿಸಿ, ಇದು ತಮ್ಮ ದೇಶದ ಗೆಲುವು ಎಂಬುದನ್ನು ಒತ್ತಿ ಹೇಳಿದರು. "ಪ್ರಶಸ್ತಿ ಗೆಲ್ಲುವುದು ಯಾವಾಗಲೂ ಅದ್ಭುತ ಕ್ಷಣವೇ. ಆದರೆ ಈ ಬಾರಿ ಹೆಚ್ಚು ವಿಶೇಷವಾಗಿದೆ. ಏಕೆಂದರೆ ಇದು ನಿಮ್ಮ ಗೆಲುವು ನಿಮ್ಮ ದೇಶದ ಗೆಲುವು" ಎಂದರು. ಮುಂದುವರೆದು, "ನನ್ನ ದೇಶವಾಸಿಗಳಿಗೆ ಇದನ್ನು ಹೇಳಲು ಬಹಳ ಸಂತೋಷವಾಗುತ್ತಿದೆ. ಏಷ್ಯಾ-ಪೆಸಿಫಿಕ್ನಲ್ಲಿ ನಾವು ಅತ್ಯುತ್ತಮರು" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ ರಕ್ಷಾ ರಾಮಯ್ಯ
ದಹಾದ್‌ನಲ್ಲೂ ವಿಜಯ್ ವರ್ಮಾ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಶ್ರೀ ದೇಶಪಾಂಡೆ ಅವರು ಟ್ರಯಲ್ ಬೈ ಫೈಯರ್‌ನಲ್ಲಿ ನೀಲಂ ಕೃಷ್ಣಮೂರ್ತಿ ಪಾತ್ರದಲ್ಲಿ ನಟಿಸಿದ್ದರು. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ದಹಾದ್ ಮತ್ತು ಟ್ರಯಲ್ ಬೈ ಫೈಯರ್ ವೀಕ್ಷಣೆಗೆ ಲಭ್ಯವಿದೆ.
ಪ್ರಶಸ್ತಿ ವಿಜೇತರು-(ಪ್ರಮುಖ ವಿಭಾಗಗಳು):
- ಬೆಸ್ಟ್ ಅನಿಮೇಟೆಡ್ ಪ್ರೋಗ್ರಾಮ್ ಅಥವಾ ಸೀರಿಸ್: ಓಎನ್ಐ; ಥಂಡರ್ ಗಾಡ್ಸ್ ಟೇಲ್ (ಜಪಾನ್).
- ಬೆಸ್ಟ್ ಡಾಕ್ಯುಮೆಂಟರಿ ಪ್ರೋಗ್ರಾಮ್ (ಒನ್ ಆಫ್): ದಿ ಕ್ಲೀನಿಂಗ್ ಕಂಪನಿ (ಆಸ್ಟ್ರೇಲಿಯಾ).
- ಬೆಸ್ಟ್ ಡಾಕ್ಯುಮೆಂಟರಿ ಸೀರಿಸ್: ನೇಚರ್ಸ್ ಹಿಡನ್ ಮಿರಾಕಲ್ಸ್; ದಿ ಸೀಕ್ರೆಟ್ ಲೈಫ್ ಆಫ್ ಪ್ಲ್ಯಾಂಟ್ಸ್ (ಜಪಾನ್).
- ಬೆಸ್ಟ್ ಆ್ಯಕ್ಟರ್: ವಿಜಯ್ ವರ್ಮಾ - ದಹಾದ್ (ಭಾರತ).
- ಬೆಸ್ಟ್ ಆ್ಯಕ್ಟ್ರೆಸ್: ರಾಜ್ಶ್ರೀ ದೇಶ್ಪಾಂಡೆ - ಟ್ರಯಲ್ ಬೈ ಫೈಯರ್ (ಭಾರತ).
- ಬೆಸ್ಟ್ ಡೈರೆಕ್ಷನ್ (ಫಿಕ್ಷನ್): ಇಟರು ಮಿಜುನೊ - ರೀಬೂಟಿಂಗ್ (ಜಪಾನ್).
- ಬೆಸ್ಟ್ ಡ್ರಾಮಾ ಸೀರಿಸ್: ದಿ ಗ್ಲೋರಿ (ಕೊರಿಯಾ).
- ಬೆಸ್ಟ್ ಫೀಚರ್ ಫಿಲ್ಮ್: ಹಂಗರ್ (ಥಾಯ್ಲೆಂಡ್).
ಇದನ್ನೂ ಓದಿ: 'ಫೈಟರ್' ಟೀಸರ್: ಮೈನವಿರೇಳಿಸುವ ವೈಮಾನಿಕ ದೃಶ್ಯಗಳೊಂದಿಗೆ ಬಂದ ಹೃತಿಕ್, ದೀಪಿಕಾ