ETV Bharat / entertainment

ದೇವರು ಅವರಿಗೆ ಬುದ್ಧಿ ಕೊಡಲಿ: ಲಪಿಡ್ ಹೇಳಿಕೆಗೆ ಅನುಪಮ್ ಖೇರ್ ಕಿಡಿ - ನಡಾವ್ ಲಪಿಡ್ ಹೇಳಿಕೆ

ಇಸ್ರೇಲ್ ಸಿನಿಮಾ ನಿರ್ಮಾಪಕ ನಡಾವ್ ಲಪಿಡ್ ಹೇಳಿಕೆಯನ್ನು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

actor Anupam Kher
ನಟ ಅನುಪಮ್ ಖೇರ್
author img

By

Published : Nov 29, 2022, 2:39 PM IST

ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದು, ಸಂಚಲನ ಮೂಡಿಸಿದ್ದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಅಶ್ಲೀಲವಾಗಿದೆ ಎಂದು ಹೇಳಿಕೆ ನೀಡಿದ್ದ ಇಸ್ರೇಲ್ ಸಿನಿಮಾ ನಿರ್ಮಾಪಕ ನಡಾವ್ ಲಪಿಡ್ ಅವರ ವಿರುದ್ಧ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ನಟ ಅನುಪಮ್ ಖೇರ್

ಸೋಮವಾರ (ನವೆಂಬರ್ 28) ಗೋವಾದಲ್ಲಿ ನಡೆದ 'ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ'ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಲಪಿಡ್, 'ದಿ ಕಾಶ್ಮೀರ್ ಫೈಲ್ಸ್' ಅನ್ನು "ಪ್ರಚಾರ, ಅಸಭ್ಯ ಚಿತ್ರ" ಎಂದು ಕರೆದಿದ್ದರು. ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಈ ಚಿತ್ರವನ್ನು ನೋಡಿ "ಆಘಾತಗೊಂಡಿದ್ದೇನೆ ಎಂದು ಹೇಳಿದ್ದರು.

ಲಪಿಡ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಾಲಿವುಡ್​ ನಟ ಅನುಪಮ್ ಖೇರ್, ನಡಾವ್ ಲಪಿಡ್ ಅವರು ಚಿತ್ರವನ್ನು "ಪ್ರಚಾರ, ಅಸಭ್ಯ" ಎಂದು ಕರೆದಿರುವುದು "ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ್ದಾರೆ. "ಹತ್ಯಾಕಾಂಡ ಸರಿಯಾಗಿರುವುದಾದರೆ, ಕಾಶ್ಮೀರಿ ಪಂಡಿತರ ನಿರ್ಗಮನವೂ ಸರಿಯಿದೆ. ಇದು ಪೂರ್ವ ಯೋಜಿತ ಎಂದು ತೋರುತ್ತದೆ. ಈ ಹೇಳಿಕೆ ಬಳಿಕ ಟೂಲ್ ಕಿಟ್ ಗ್ಯಾಂಗ್ ಸಕ್ರಿಯವಾಗಿದೆ. ಲಪಿಡ್ ಅವರು, ಹತ್ಯಾಕಾಂಡದಿಂದ ಬಳಲುತ್ತಿರುವ ಯಹೂದಿಗಳ ಸಮುದಾಯದಿಂದ ಬಂದಿದ್ದರೂ ಈ ರೀತಿಯ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದ್ದಾರೆ.

  • ‘कश्मीर फ़ाइल्स’ का सच कुछ लोगो के गले में एक काँटे की तरह अटक गया है।वो ना उसे निगल पा रहे है ना उगल! इस सच को झूठा साबित करने के लिए उनकी आत्मा,जो मर चुकी है, बुरी तरह से छटपटा रही है।पर हमारी ये फ़िल्म अब एक आंदोलन है फ़िल्म नहीं।तुच्छ #Toolkit गैंग वाले लाख कोशिश करते रहें।🙏 pic.twitter.com/ysKwCraejt

    — Anupam Kher (@AnupamPKher) November 29, 2022 " class="align-text-top noRightClick twitterSection" data=" ">

ಇಂತಹ ಹೇಳಿಕೆ ನೀಡುವ ಮೂಲಕ ಅವರು ಈ ದುರಂತವನ್ನು ಎದುರಿಸಿದ ಜನರನ್ನೂ ನೋಯಿಸಿದ್ದಾರೆ. ವೇದಿಕೆಯಲ್ಲಿ ತನ್ನ ಉದ್ದೇಶವನ್ನು ಪೂರೈಸಲು ಸಾವಿರಾರು ಜನರ ದುರಂತ ಬಳಸದಂತೆ ದೇವರು ಅವರಿಗೆ ಬುದ್ಧಿ ನೀಡಲಿ ಎಂದು ಖೇರ್ ಹೇಳಿದರು.

ಲ್ಯಾಪಿಡ್ ಅವರ ಹೇಳಿಕೆ ಉಲ್ಲೇಖಿಸಿ, ಅನುಪಮ್ ಖೇರ್ ಕೂಡ ಟ್ವೀಟ್ ಮಾಡಿದ್ದಾರೆ, "ಸುಳ್ಳು ಎಷ್ಟೇ ಎತ್ತರವಾಗಿದ್ದರೂ, ಸತ್ಯಕ್ಕೆ ಹೋಲಿಸಿದರೆ ಅದು ಯಾವಾಗಲೂ ಚಿಕ್ಕದಾಗಿದೆ" ಎಂದಿದ್ದಾರೆ.

ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್ ಅಶ್ಲೀಲ ಚಲನಚಿತ್ರ': ನಡಾವ್ ಲಪಿಡ್ ವ್ಯಂಗ್ಯ

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ, 'ದಿ ಕಾಶ್ಮೀರ್ ಫೈಲ್ಸ್' ಅನ್ನು 2022 ಐಎಫ್‌ಎಫ್‌ಐನ ಭಾರತೀಯ ಪನೋರಮಾ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಈ ಚಿತ್ರವು 1990ರ ದಶಕದಲ್ಲಿ ಕಾಶ್ಮೀರ ದಂಗೆಯ ಸಮಯದ ಕಾಶ್ಮೀರಿ ಪಂಡಿತರ ಜೀವನ ಆಧರಿಸಿದೆ. ಇದು ಮೊದಲ ತಲೆಮಾರಿನ ವಿಡಿಯೊ ಸಂದರ್ಶನಗಳನ್ನು ಆಧರಿಸಿದ ನೈಜ ಕಥೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.