ETV Bharat / entertainment

ಅನಿಮಲ್​ ಫಸ್ಟ್​ ಲುಕ್: ರಗಡ್ ನೋಟದಲ್ಲಿ ರಣ್​​​​ಬೀರ್​ ಕಪೂರ್ ಮಿಂಚು - Ranbir Kapoor latest news

ಬಾಲಿವುಡ್ ನಟ ರಣ್​ಬೀರ್​ ಕಪೂರ್​ ಅವರ ಮುಂಬರುವ ಅನಿಮಲ್​ ಚಿತ್ರದ ಫಸ್ಟ್ ಲುಕ್ ರಿಲೀಸ್​ ಆಗಿದೆ.

Animal first look
ಅನಿಮಲ್​ ಫಸ್ಟ್​ ಲುಕ್
author img

By

Published : Jan 1, 2023, 1:27 PM IST

ಬಾಲಿವುಡ್​ ನಟ​​ ರಣ್​​​​ಬೀರ್​ ಕಪೂರ್ ಅವರ ಕೊನೆಯ ಚಿತ್ರ ​ಬ್ರಹ್ಮಾಸ್ತ್ರ ಸೂಪರ್​ ಹಿಟ್​ ಆಗಿತ್ತು. 2022ರಲ್ಲಿ ಭರ್ಜರಿ ಗೆಲುವು ಕಂಡಿರುವ ಅವರು ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಶುರು ಮಾಡುತ್ತಿದ್ದಾರೆ. ಅವರ ಮುಂದಿನ ಚಿತ್ರ ಅನಿಮಲ್​ ಫಸ್ಟ್​ ಲುಕ್​​ ರಿಲೀಸ್​ ಅಗಿದ್ದು, ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ರಣ್​​​​ಬೀರ್​ ಕಪೂರ್ ​ಫಸ್ಟ್​ ಲುಕ್​: ಅನಿಮಲ್ ಚಿತ್ರ ತಯಾರಕರು ಹೊಸ ವರ್ಷದಂದು ರಣ್​ಬೀರ್​ ಕಪೂರ್​ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಇವರು 2019ರ ಬ್ಲಾಕ್‌ಬಸ್ಟರ್ ಕಬೀರ್ ಸಿಂಗ್ ಮೂಲಕ ಬಾಲಿವುಡ್‌ನಲ್ಲಿ ನಿರ್ದೇಶಕರಾಗಿ ಎಂಟ್ರಿ ಕೊಟ್ಟವರು. ಈ ಚಿತ್ರ ಅವರ 2017ರ ತೆಲುಗು ಹಿಟ್ ಮೂವಿ ಅರ್ಜುನ್ ರೆಡ್ಡಿಯ ರಿಮೇಕ್ ಆಗಿದೆ.

ರಗಡ್ ಲುಕ್​ನಲ್ಲಿ ರಣ್​​​​ಬೀರ್​ ಕಪೂರ್: ಅನಿಮಲ್ ಸಿನಿಮಾನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿ ಚಿತ್ರ ತಯಾರಕರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ. ರಗಡ್‌ ಲುಕ್‌ನಲ್ಲಿ ರಣ್‌ಬೀರ್‌, ಕೊಡಲಿಯನ್ನು ಹಿಡಿದುಕೊಂಡು ಸಿಗರೇಟ್ ಹಚ್ಚುತ್ತಿರುವುದನ್ನು ಕಾಣಬಹುದು.

'ಪ್ರೇಕ್ಷಕರಿಗೆ ಚಿತ್ರದ, ನಾಯಕನ ಮೊದಲ ನೋಟವನ್ನು ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ಪೋಸ್ಟರ್‌ನಲ್ಲಿರುವ ರಣ್​​ಬೀರ್ ಕಪೂರ್ ಅವರ ನೋಟವು ಚಿತ್ರದ ಸಾರವನ್ನು ಚೆನ್ನಾಗಿ ಸಮರ್ಥಿಸುತ್ತದೆ. ಪ್ರೇಕ್ಷಕರು ಅರ್ಹವಾದ ಚಿತ್ರವನ್ನು ವೀಕ್ಷಿಸುತ್ತಾರೆ ಎಂಬ ವಿಶ್ವಾಸ ನಮಗಿದೆ' ಎಂದು ನಿರ್ಮಾಪಕರುಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ಪೋಸ್ಟ್: ಅನಿಮಲ್‌ ಚಿತ್ರತಂಡದಿಂದ ರಣಬೀರ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ ತಕ್ಷಣದಿಂದ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ನಟನ ಪತ್ನಿ, ನಟಿ ಆಲಿಯಾ ಭಟ್ ಕೂಡ ಚಿತ್ರದ ಪೋಸ್ಟರ್ ಮೆಚ್ಚಿ ಅದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫೈಯರ್ ಇಮೋಜಿ ಹಾಕಿ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೇ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಸಹ ಸಿನಿಮಾದ ಫಸ್ಟ್​ ಲುಕ್​ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ರಂಗಭೂಮಿ ಕಲಾವಿದನ ಮೆದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಏಳು ಜನರಿಗೆ ಹೊಸ ಜೀವನ ಕೊಟ್ಟ ನಟ

ಐದು ಭಾಷೆಗಳಲ್ಲಿ ಬಿಡುಗಡೆ: ಈ ವರ್ಷದ ಏಪ್ರಿಲ್‌ನಲ್ಲಿ ಹಿಮಾಚಲ ಪ್ರದೇಶದ ಮನಾಲಿಯ ಹಿಮದಿಂದ ಆವೃತವಾದ ಪರ್ವತಗಳ ನಡುವೆ ಚಿತ್ರೀಕರಣ ಪ್ರಾರಂಭವಾಯಿತು. ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಮತ್ತು ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಈ ವರ್ಷದ ಆಗಸ್ಟ್​​ನಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದ ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿ

ಇನ್ನು, ರಣ್​ಬೀರ್​ ಕಪೂರ್​ ಅನಿಮಲ್​ ಅಲ್ಲದೇ ತು ಜೂತಿ ಮೇ ಮಕ್ಕಾರ್ (Tu Jhooti Main Makkaar) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಇದೇ ಮಾರ್ಚ್​ 8ರಂದು ಬಿಡುಗಡೆ ಆಗಲು ಸಜ್ಜಾಗಿದೆ. ರಣ್​ಬೀರ್ ಜೊತೆ ಶ್ರದ್ಧಾ ಕಪೂರ್​ ಮೊದಲ ಬಾರಿಗೆ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.