ಬಾಲಿವುಡ್ ಲವ್ ಬರ್ಡ್ಸ್ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ಈ ಹಿಂದೆ ವರದಿಯಾಗಿತ್ತು. ಫರಾ ಖಾನ್ ಜೊತೆಗೆ ಜಲಕ್ ದಿಖ್ಲಾ ಜಾ ಶೋನಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿರುವ ನಟಿ ಮಲೈಕಾ ಅರೋರಾ, ಇತ್ತೀಚಿನ ಸಂಚಿಕೆಯಲ್ಲಿ ಮರುಮದುವೆ ಬಗ್ಗೆ ಸುಳಿವು ನೀಡಿದ್ದರು. ಮಾಜಿ ಪತಿ ಅರ್ಬಾಜ್ ಖಾನ್ ಕೂಡ ಇತ್ತೀಚೆಗಷ್ಟೇ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಮದುವೆ ಆಗಿದ್ದು, ಅದರ ಬೆನ್ನಲ್ಲೇ ಮಲೈಕಾ ಅರೋರಾ ಮಾತನಾಡಿದ್ದರು.
ಆದ್ರೆ ಮಲೈಕಾ-ಅರ್ಜುನ್ ನಡುವೆ ಬಿರುಕು ವದಂತಿ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದು, ಊಹಾಪೋಹಗಳಿಗೆ ಈ ಪ್ರೇಮಪಕ್ಷಿಗಳು ತೆರೆ ಎಳೆದಿದ್ದಾರೆ. ಮಲೈಕಾ ಅವರು ಗೆಳೆಯ ಅರ್ಜುನ್ ಕಪೂರ್ ಜೊತೆಗೆ ತಮ್ಮ ಸ್ನೇಹಿತೆ ಕರಿಷ್ಮಾ ಕರಮಚಂದಾನಿ ಅವರ ಪ್ರಿ ವೆಡ್ಡಿಂಗ್ ಸೆಲೆಬ್ರೇಶನ್ನಲ್ಲಿ ಭಾಗಿಯಾಗಿದ್ದು, ಫೋಟೋ-ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕರಿಷ್ಮಾ ಕರಮಚಂದಾನಿ ಅವರ ಪ್ರಿ ವೆಡ್ಡಿಂಗ್ ಸೆಲೆಬ್ರೇಶನ್ನಲ್ಲಿ ಬಾಲಿವುಡ್ನ ಹಲವರು ಕಾಣಿಸಿಕೊಂಡಿದ್ದಾರೆ. ನಟಿ ಸೋನಂ ಕಪೂರ್, ಅರ್ಜುನ್ ಅವರ ಸಹೋದರಿ ಅಂಶುಲಾ ಕಪೂರ್, ನಿರ್ಮಾಪಕಿ ರಿಯಾ ಕಪೂರ್, ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಆವಂತಿಕಾ ಮಲಿಕ್ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಫೋಟೋದಲ್ಲಿ ಮಲೈಕಾ ಅರೋರಾ, ಅರ್ಜುನ್ ಕಪೂರ್, ವಧು ಮತ್ತು ಹೆಸರಾಂತ ಫ್ಯಾಷನ್ ಡಿಸೈನರ್ ಅರ್ಪಿತಾ ಮೆಹ್ತಾ ಸೇರಿದಂತೆ ಕೆಲವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಾಗಚೈತನ್ಯ-ಸಾಯಿ ಪಲ್ಲವಿ ಅಭಿನಯದ 'ತಂಡೆಲ್' ಫಸ್ಟ್ ಗ್ಲಿಂಪ್ಸ್ ರಿಲೀಸ್
ಮಲೈಕಾ ಅವರು ಹಸಿರು ಲೆಹೆಂಗಾದಲ್ಲಿ ಕಂಗೊಳಿಸಿದರೆ, ಅರ್ಜುನ್ ಕಪೂರ್ ಕುರ್ತಾ ಪೈಜಾಮಾದಲ್ಲಿ ಕಾಣಿಸಿಕೊಂಡರು. ಮತ್ತೊಂದು ಫೋಟೋದಲ್ಲಿ, ಮಲೈಕಾ ಮತ್ತು ಅರ್ಜುನ್ ತಮ್ಮ ಸ್ನೇಹಿತರಾದ ಕುನಾಲ್ ರಾವಲ್, ಅರ್ಪಿತಾ ಮೆಹ್ತಾ ಮತ್ತು ಆವಂತಿಕಾ ಮಲಿಕ್ ಅವರೊಂದಿಗೆ ಸಂಭ್ರಮಾಚರಿಸುತ್ತಿರೋದನ್ನು ಕಾಣಬಹುದು. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಧು-ವರರ ಫೋಟೋ ಹಂಚಿಕೊಂಡ ಮಲೈಕಾ, "ಅಭಿನಂದನೆಗಳು ಮಿಸ್ಟರ್ ಆ್ಯಂಡ್ ಮಿಸೆಸ್ , ಎಂದೆಂದಿಗೂ ಪ್ರೀತಿ, ಖುಷಿ ಇರಲಿ" ಎಂಬ ಕ್ಯಾಪ್ಷನ್ ಕೊಟ್ಟು ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ.
ಇದನ್ನೂ ಓದಿ: ಅನಿಮಲ್ ಸಕ್ಸಸ್ ಸಂಭ್ರಮಕ್ಕಾಗಿ ಪುಷ್ಪ- 2ರಿಂದ ಬ್ರೇಕ್ ಪಡೆದ ರಶ್ಮಿಕಾ ಮಂದಣ್ಣ
ಮಲೈಕಾ ಮತ್ತು ಅರ್ಜುನ್ ಕೆಲ ಸಮಯದಿಂದ ರಿಲೇಶನ್ಶಿಪ್ನಲ್ಲಿದ್ದಾರೆ. 2019ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದು, ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅರ್ಜುನ್ ಕಪೂರ್ ಅವರು ಕೊನೆಯದಾಗಿ ಅಜಯ್ ಬಹ್ಲ್ ಅವರ ಕ್ರೈಮ್ ಥ್ರಿಲ್ಲರ್ 'ದಿ ಲೇಡಿ ಕಿಲ್ಲರ್'ನಲ್ಲಿ ಭೂಮಿ ಪೆಡ್ನೇಕರ್ ಜೊತೆ ಕಾಣಿಸಿಕೊಂಡರು. ಮೇರಿ ಪತ್ನಿ ಕಾ ರಿಮೇಕ್ ಮತ್ತು ರೋಹಿತ್ ಶೆಟ್ಟಿಯವರ ಸಿಂಗಮ್ ಎಗೈನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲೈಕಾ ಅರೋರಾ ಜಲಕ್ ದಿಖ್ಲಾ ಜಾ ಶೋನಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದಾರೆ.