ETV Bharat / entertainment

ಆಲಿಯಾ ಭಟ್​ ಅಜ್ಜ ನರೇಂದ್ರನಾಥ್​ ರಜ್ದಾನ್ ನಿಧನ: ಮೊಮ್ಮಗಳಿಂದ ಭಾವನಾತ್ಮಕ ಪೋಸ್ಟ್​ - ಈಟಿವಿ ಭಾರತ ಕನ್ನಡ

ನಟಿ ಆಲಿಯಾ ಭಟ್​ ಅವರ ಅಜ್ಜ ನರೇಂದ್ರನಾಥ್​ ರಜ್ದಾನ್​ ಅವರು ಇಂದು ನಿಧನರಾಗಿದ್ದಾರೆ.

Alia Bhatt's grandfather Narendranath Razdan
ಆಲಿಯಾ ಭಟ್​ ಅಜ್ಜ ನರೇಂದ್ರನಾಥ್​ ರಜ್ದಾನ್ ನಿಧನ
author img

By

Published : Jun 1, 2023, 3:39 PM IST

ಬಾಲಿವುಡ್​ ನಟಿ ಆಲಿಯಾ ಭಟ್​ ಅವರ ಅಜ್ಜ ನರೇಂದ್ರನಾಥ್​ ರಜ್ದಾನ್​ ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ನಟಿ ತನ್ನ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಹಂಚಿಕೊಂಡು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಮ್ಮ ಅಜ್ಜನ ಹುಟ್ಟುಹಬ್ಬ ಆಚರಣೆಯ ಥ್ರೋಬ್ಯಾಕ್​ ವಿಡಿಯೋವನ್ನು ಹಂಚಿಕೊಂಡು ಭಾವನಾತ್ಮಕ ಶೀರ್ಷಿಕೆಯನ್ನು ಬರೆದಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಆಲಿಯಾ, "ನನ್ನ ಅಜ್ಜ, ನನ್ನ ಹೀರೋ. 93 ವಯಸ್ಸಿನವರೆಗೂ ಗಾಲ್ಫ್​ ಆಡಿದ್ದಾರೆ. 93 ವಯಸ್ಸಿನವರೆಗೂ ದುಡಿದಿದ್ದಾರೆ. ಅತ್ಯುತ್ತಮ ಕಥೆಗಳನ್ನು ಹೇಳಿದ್ದಾರೆ. ಚೆನ್ನಾಗಿ ವಯೋಲಿನ್ ನುಡಿಸಿದ್ದಾರೆ. ಮೊಮ್ಮಗಳ ಜೊತೆಯಲ್ಲಿ ಆಟವಾಡಿದ್ದಾರೆ. ಅವರು ಸಾಯುವ ಕೊನೆಯವರೆಗೂ ತಮ್ಮ ಕುಟುಂಬವನ್ನು ಪ್ರೀತಿಸಿದರು. ಅವರ ಜೀವನವನ್ನು ಪ್ರೀತಿಸಿದರು. ನನ್ನ ಹೃದಯವು ದುಃಖದಿಂದ ಕೂಡಿದೆ. ಆದರೂ ಸಂತೋಷದಿಂದ ತುಂಬಿದೆ. ಏಕೆಂದರೆ ನನ್ನ ಅಜ್ಜ ಮಾಡಿದ್ದೆಲ್ಲವೂ ನಮಗೆ ಸಂತೋಷವನ್ನು ನೀಡುತ್ತದೆ. ಅದಕ್ಕಾಗಿ ನಾವು ಮತ್ತೊಮ್ಮೆ ಸಿಗುವವರೆಗೂ ಕೃತಜ್ಞರಾಗಿರಬೇಕು" ಎಂದು ಬರೆದಿದ್ದಾರೆ.

ಇದನ್ನೂ ಓದಿ: ದೇಗುಲ ದರ್ಶನ ಪಡೆದ ಸಾರಾ ಅಲಿ ಖಾನ್ ಟ್ರೋಲ್​: ನನ್ನ ನಂಬಿಕೆ, ಭೇಟಿ ಮುಂದುವರಿಸುವೆ ಎಂದ ನಟಿ

ಆಲಿಯಾ ಭಟ್​ ತಾತ ನರೇಂದ್ರನಾಥ್ ನಿಧನದ ಸುದ್ದಿ ತಿಳಿದು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟಿಯ ಪೋಸ್ಟ್​ಗೆ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, "ನಿಮಗೆ ಭಾರಿ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, "ನಿಮಗೆ ಮತ್ತು ಇಡೀ ಕುಟುಂಬಕ್ಕೆ ಬೃಹತ್ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ" ಎಂದು ಕಾಮೆಂಟ್​ ಮಾಡಿದ್ದಾರೆ. ಆಲಿಯಾ ಅವರ ತಾಯಿ ಮತ್ತು ಹಿರಿಯ ನಟಿ ಸೋನಿ ರಜ್ದಾನ್ ಕೂಡ ಅವರ ತಂದೆಗೆ ಸ್ಪರ್ಶದ ಗೌರವವನ್ನು ಸಲ್ಲಿಸಿದರು.

"ಅಪ್ಪ.. ನಿಮ್ಮ ಪ್ರಕಾಶಮಾನ ಗ್ಲೋನಲ್ಲಿ ಜೀವನ ನಡೆಸಿದ್ದಕ್ಕಾಗಿ ತುಂಬಾ ಕೃತಜ್ಞರಾಗಿರುತ್ತೇನೆ. ನಿಮ್ಮ ಪ್ರೀತಿ, ಸೌಮ್ಯ ಸ್ವಭಾವದಿಂದ ನಾವು ಆಶೀರ್ವದಿಸಲ್ಪಟ್ಟಿದ್ದೇವೆ. ನೀವು ನಮ್ಮನ್ನು ಬಿಟ್ಟು ಇಂದು ಅಗಲಿರಬಹುದು. ಆದರೆ, ನಾವು ಎಂದಿಗೂ ನಿಮ್ಮ ಆತ್ಮದಿಂದ ಬೇರ್ಪಡುವುದಿಲ್ಲ. ಇದು ನೀವು ನಮ್ಮೊಂದಿಗೆ ಸದಾ ಇದ್ದೀರಿ ಎಂಬುದನ್ನು ನೆನಪಿಸುತ್ತದೆ. ನೀವು ಎಲ್ಲಿದ್ದರೂ ಸಹ ನಿಮ್ಮ ಆ ಸುಂದರವಾದ ನಗುವಿನಿಂದಾಗಿ ಅದು ಈಗ ಸಂತೋಷದ ಸ್ಥಳವಾಗಿದೆ. ನಾವು ನಿನ್ನನ್ನು ಎಂದಿಗೂ ಪ್ರೀತಿಸುತ್ತೇವೆ" ಎಂದು ಸೋನಿ ರಜ್ದಾನ್​ ಬರೆದಿದ್ದಾರೆ.

ನಟಿ ಆಲಿಯಾ ಭಟ್​ ಅವರ ಅಜ್ಜ ನರೇಂದ್ರನಾಥ್​ ರಜ್ದಾನ್​ ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಕೆಲವು ದಿನಗಳ ಹಿಂದೆ ಮುಂಬೈನ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮತ್ತು ವಯೋಸಹಜತೆಯಿಂದಾಗಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಆಲಿಯಾ ಭಟ್​ ಮುಂದೆ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣ್​​ವೀರ್ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಜುಲೈ 28ರಂದು ಥಿಯೇಟರ್‌ಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಜೋನಾಸ್ ಜೊತೆಗೆ ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾದಲ್ಲಿ ಜಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 10 ವರ್ಷ ಪೂರೈಸಿದ YJHD: ಕಲಾವಿದರ ಸಮಾಗಮ, ಸೆಲ್ಫಿಗೆ ಪೋಸ್​ ಕೊಟ್ಟ​ ಮಾಜಿ ಲವರ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.