ETV Bharat / entertainment

Alia Bhatt: 'ತುಮ್​ ಕ್ಯಾ ಮಿಲೇ' ಹಾಡಿನ ಚಿತ್ರೀಕರಣದ ವಿಡಿಯೋ ಹಂಚಿಕೊಂಡ ಆಲಿಯಾ ಭಟ್​ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಟ್ರೇಲರ್

'ತುಮ್​ ಕ್ಯಾ ಮಿಲೇ' ಹಾಡಿನ ಚಿತ್ರೀಕರಣದ ವಿಡಿಯೋವನ್ನು ನಟಿ ಆಲಿಯಾ ಭಟ್​ ಹಂಚಿಕೊಂಡಿದ್ದಾರೆ.

Alia Bhatt
ಆಲಿಯಾ ಭಟ್​
author img

By

Published : Jul 11, 2023, 7:01 PM IST

Updated : Jul 11, 2023, 7:11 PM IST

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದ 'ತುಮ್​ ಕ್ಯಾ ಮಿಲೇ' ಹಾಡಿನ ಚಿತ್ರೀಕರಣದ ತೆರೆಮರೆಯ ವಿಡಿಯೋವನ್ನು ಆಲಿಯಾ ಭಟ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಹಾಡಿನ ಚಿತ್ರೀಕರಣದ ಸಮಯದಲ್ಲಿ ನಡೆದ ಎಲ್ಲಾ ಮೋಜಿನ ಒಂದು ನೋಟವನ್ನು ವಿಡಿಯೋ ಮೂಲಕ ಅಭಿಮಾನಿಗಳಿಗಾಗಿ ಇನ್​ಸ್ಟಾದಲ್ಲಿ ಕೈ ಬಿಟ್ಟಿದ್ದಾರೆ. ಕಾಶ್ಮೀರದ ಸುಂದರ ಗಿರಿಶಿಖರದ ಸುತ್ತಮುತ್ತಲಿನಲ್ಲಿ ಹಾಡನ್ನು ಚಿತ್ರೀಕರಿಸಲಾಗಿದ್ದು, ಕಣ್ಮನ ಸೆಳೆಯುವಂತಿದೆ. ಆಲಿಯಾ ತಮ್ಮ ಪ್ರಸವದ ನಂತರ ಭಾಗಿಯಾದ ಮೊದಲ ಶೂಟಿಂಗ್​ ಇದಾಗಿದೆ.

ಆಲಿಯಾ ಹಂಚಿಕೊಂಡ ವಿಡಿಯೋದಲ್ಲಿ 'ತುಮ್​ ಕ್ಯಾ ಮಿಲೇ' ಹಾಡಿನ ಶೂಟಿಂಗ್​ ಮಾಡುತ್ತಿರುವುದನ್ನು ಕಾಣಬಹುದು. ಕಾಶ್ಮೀರದ ಮಂಜಿನ ವಾತಾವರಣದಲ್ಲಿ ಚಿತ್ರತಂಡ ಚಿತ್ರೀಕರಣ ನಡೆಸಿದ್ದಾರೆ. ಬೇರೆ ಬೇರೆ ದಿರಿಸಿನಲ್ಲಿ ಆಲಿಯಾ ದೃಶ್ಯದಲ್ಲಿ ಸೆರೆಯಾಗಿದ್ದಾರೆ. ಇದು ನಿಜಕ್ಕೂ ನೋಡಲು ಆನಂದದಾಯಕವಾಗಿದೆ. ಈ ವಿಡಿಯೋ ಆಲಿಯಾ ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸಿದೆ.

ಇದನ್ನೂ ಓದಿ: ತ್ರಿಕೋನ ಪ್ರೇಮಕಥೆಯ ಓ ಮನಸೇ ಚಿತ್ರದಲ್ಲಿ ವಿಜಯ ರಾಘವೇಂದ್ರ - ಧರ್ಮ ಕೀರ್ತಿ ಆ್ಯಕ್ಟಿಂಗ್​

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಟ್ರೇಲರ್ ಜುಲೈ 4 ರಂದು ಬಿಡುಗಡೆಯಾಯಿತು. ರಣ್​ವೀರ್​, ಆಲಿಯಾ ಹೊರತಾಗಿ, ಹಿರಿಯ ಕಲಾವಿದರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರು ಈ ಚಲನಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹು ತಾರಾಗಣ ಹೊಂದಿರುವ ಬಿಗ್​ ಬಜೆಟ್​ ಸಿನಿಮಾ ಜುಲೈ 28 ರಂದು ಬಿಡುಗಡೆ ಆಗಲಿದೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ನಿರ್ದೇಶಕ ಕರಣ್ ಜೋಹರ್ ಅವರು ಕಥೆ ಹೇಳುವ ಶೈಲಿ, ಬಿಗ್​ ಸ್ಟಾರ್ ಕಾಸ್ಟ್, ಅದ್ಧೂರಿ ಸೆಟ್‌, ಭಾವಪೂರ್ಣ ಸಂಗೀತದೊಂದಿಗೆ ಬರಲಿರುವ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾದಂತೆ ತೋರುತ್ತಿದೆ. ಸದ್ಯ ಅನಾವರಣಗೊಂಡಿರುವ ಟ್ರೇಲರ್​, ಟೀಸರ್​, ಹಾಡುಗಳಲ್ಲಿ ಚಿತ್ರದ ಪ್ರಮುಖ ನಟರಾದ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿಯ ಜಗಳ, ಪ್ರೇಮ, ಹಬ್ಬದ ವಾತಾವರಣ ಮತ್ತು ಮದುವೆಯ ಸಮಯದಲ್ಲಿ ಕುಟುಂಬದ ಆಚರಣೆಗಳುಳ್ಳ ಹಲವಾರು ದೃಶ್ಯಗಳಿವೆ. ಕರಣ್ ಜೋಹರ್ ಆರು ವರ್ಷಗಳ ಬಳಿಕ ಸಿನಿಮಾವೊಂದನ್ನು ನಿರ್ದೇಶಿಸಿದ್ದು, ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಪ್ರಸವದ ನಂತರ ಆಲಿಯಾ ಮೊದಲ ಶೂಟಿಂಗ್​: ಆಲಿಯಾ ಭಟ್​ 2022ರ ಏಪ್ರಿಲ್​ 14 ರಂದು ನಟ ರಣಬೀರ್ ಕಪೂರ್ ಜೊತೆ ಮದುವೆಯಾದರು. 2022ರ ಜೂನ್​ ತಿಂಗಳಲ್ಲಿ ತಮ್ಮ ಗರ್ಭಧಾರಣೆ ಘೋಷಿಸಿದರು. ಕಳೆದ ವರ್ಷ ನವೆಂಬರ್​ 6 ರಂದು ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮಗುವಿಗೆ ರಾಹಾ ಎಂದು ಹೆಸರಿಡಲಾಗಿದೆ. ಆಲಿಯಾ, ಪ್ರಸವದ ನಂತರ ಕೆಲವೇ ದಿನಗಳಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ 'ತುಮ್ ಕ್ಯಾ ಮಿಲೇ' ರೊಮ್ಯಾಂಟಿಕ್​ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: 50 ದಿನ ಪೂರೈಸಿದ 'ಡೇರ್​ ಡೆವಿಲ್​ ಮುಸ್ತಫಾ': ಚಿತ್ರ ತಂಡದಿಂದ ಬಿರಿಯಾನಿ, ಪುಳಿಯೋಗರೆ ಪಾರ್ಟಿ

Last Updated : Jul 11, 2023, 7:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.