ಮನುಷ್ಯ ತಮ್ಮವರೊಂದಿಗೆ ಸದಾ ನಗು ನಗುತ್ತಾ ಸಂತೋಷಕರ ಜೀವನ ಸಾಗಿಸಬೇಕೆಂದು ಸಹಜವಾಗಿ ಹೆಚ್ಚಿನವರು ಹೇಳುತ್ತಾರೆ. ಯಾರೊಬ್ಬರ ಮೊಗದಲ್ಲಿ ನಗು ಮೂಡಿಸುವ ವಿಚಾರದಲ್ಲಿ ಏಪ್ರಿಲ್ ಫೂಲ್ ದಿನವನ್ನು ಹೇಗೆ ತಾನೆ ನಿರ್ಲಕ್ಷಿಸಲು ಸಾಧ್ಯ ಹೇಳಿ. ವಾಸ್ತವವಾಗಿ, ಈ ದಿನದಂದು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ತಮಾಷೆ ಮಾಡುವ ಮೂಲಕ ಆನಂದಿಸುತ್ತಾರೆ. ಹೀಗಿರುವಾಗ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಿಂದೆ ಸರಿಯುತ್ತಾರಾ?, ಕಂಡಿತ ಇಲ್ಲ. ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ತಂಡದೊಂದಿಗೆ ತಮಾಷೆ ಮಾಡೋದನ್ನು ನೀವು ನೋಡಬಹುದು
- " class="align-text-top noRightClick twitterSection" data="
">
ಇಂದು ನಟ ಅಕ್ಷಯ್ ಕುಮಾರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೆಲ ತಮಾಷೆಗಳು ಇಲ್ಲಿವೆ, ಹೇಗನಿಸಿತು ಹೇಳಿ ಎಂದು ಏಪ್ರಿಲ್ ಫೂಲ್ ಡೇ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಬರೆದುಕೊಂಡಿದ್ದಾರೆ. ತಮ್ಮ ಬಟ್ಟೆ ಬ್ರಾಂಡ್ Force IXನ ಸಹ ಸಂಸ್ಥಾಪಕ ಮನೀಶ್ ಮಂಧಾನ ಅವರೊಂದಿಗೆ ತಮಾಷೆ ಮಾಡಿದ್ದಾರೆ. ನಟನ ಪಾದಗಳು ನೆಲದ ಮೇಲೆ ದೃಢವಾಗಿದ್ದವು. ಮನೀಶ್ ಮಂಧಾನ ಅವರಿಗೆ ನಟನನ್ನು ಎತ್ತುವುದು ಅತ್ಯಂತ ಕಷ್ಟಕರವಾಗಿತ್ತು. ಆದಾಗ್ಯೂ, ಅಕ್ಷಯ್ ಕುಮಾರ್ ಮನೀಷ್ ಅವರನ್ನು ಸುಲಭವಾಗಿ ಎತ್ತಿದರು. ಮನೀಶ್ ಮಂಧಾನ ಬೆನ್ನ ಹಿಂದೆ ಮತ್ತೋರ್ವರು ನಿಂತು ಅಕ್ಷಯ್ ಅವರಿಗೆ ಸಹಾಯ ಮಾಡಿದ ಹಿನ್ನೆಲೆ ಮನೀಷ್ ಅವರನ್ನು ಸುಲಭವಾಗಿ ಎತ್ತಲು ಸಾಧ್ಯವಾಯಿತು. ಕೆಲ ಸಮಯದ ಬಳಿಕ ಈ ವಿಚಾರ ಮನೀಷ್ ಅವರಿಗೆ ತಿಳಿದು, ಎಲ್ಲರೂ ನಗೆಗಡಲಲ್ಲಿ ತೇಲಿದರು.
ನಟ ಅಕ್ಷಯ್ ಕುಮಾರ್ ಶೇರ್ ಮಾಡಿರುವ ಈ ವಿಡಿಯೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೆ, ನಟಿ ನೂಪುರ್ ಸನೋನ್ ಕೂಡ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಬಹಳ ಚೆನ್ನಾಗಿದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ರಾಜಕೀಯ ಎಂಟ್ರಿ ಬಗ್ಗೆ ವದಂತಿ... April 1st ಹೀಗೆ ಹೇಳಿ ಎಂದ ರಿಷಬ್ ಶೆಟ್ಟಿ
ಕೆಲಸದ ವಿಚಾರ ಗಮನಿಸುವುದಾದರೆ, ರಾಜ್ ಮೆಹ್ತಾ ನಿರ್ದೇಶನದ 'ಸೆಲ್ಫಿ' ಚಿತ್ರ ಇತ್ತೀಚೆಗೆ ಬಿಡುಗಡೆ ಆಯಿತು. ಅಕ್ಷಯ್ ಕುಮಾರ್ ಕೊನೆಯದಾಗಿ ಕಾಣಿಸಿಕೊಂಡಿರುವ ಚಿತ್ರವಿದು. ಸೆಲ್ಫಿ 2019ರ ಮಲಯಾಳಂ ಚಲನಚಿತ್ರ ಡ್ರೈವಿಂಗ್ ಲೈಸೆಲ್ಸ್ನ ರೀಮೇಕ್. ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಇಮ್ರಾನ್ ಹಶ್ಮಿ, ನುಸ್ರತ್ ಭರುಚಾ ಮತ್ತು ಡಯಾನಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನಟಿ ಮೃಣಾಲ್ ಠಾಕೂರ್ ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ನಿರೀಕ್ಷೆ ತಲುಪಲಿಲ್ಲ.
ಇದನ್ನೂ ಓದಿ: ಬ್ಯುಸಿ ಶೆಡ್ಯೂಲ್: ನಟಿ ಸಮಂತಾ ಕಾರಲ್ಲೇ ಮೇಕಪ್, ಕಾರಲ್ಲೇ ಧ್ಯಾನ!
ಒಂದು ಕಾಲದಲ್ಲಿ ಬಾಲಿವುಡ್ ಬಹುಬೇಡಿಕೆ ನಟರ ಪೈಕಿ ಗುರುತಿಸಿಕೊಂಡಿದ್ದ ಅಕ್ಷಯ್ ಕುಮಾರ್ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿತ್ತು. ಉತ್ತಮ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಭಾರಿ ಹಿನ್ನಡೆ ಕಂಡಿದ್ದಾರೆ. ಸತತ ಸೋಲನ್ನು ಅನುಭವಿಸಿದ್ದಾರೆ. ಸಂದರ್ಶನವೊಂದರಲ್ಲಿ ಒಂದರ ನಂತರ ಒಂದರಂತೆ ಸಿನಿಮಾಗಳು ಸೋತ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, "ಯೋಚಿಸುವ ಮತ್ತು ಬದಲಾವಣೆಯ ಸಮಯ ಇದು" ಎಂದು ಹೇಳಿಕೊಂಡಿದ್ದರು. ತಮ್ಮ ಸಿನಿಮಾಗಳ ಸೋಲಿನ ಹೊಣೆಯನ್ನೂ ಕೂಡ ಅವರೇ ಹೊತ್ತುಕೊಂಡಿದ್ದರು. ಪ್ರೇಕ್ಷಕರ ಅಭಿರುಚಿ ಬದಲಾಗಿದ್ದು, ಅದಕ್ಕೆ ತಕ್ಕ ಹಾಗೆ ಕೆಲಸ ಮಾಡಬೇಕೆಂದು ತಿಳಿಸಿದ್ದರು.