ಹೈದರಾಬಾದ್: ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಲು ನಟಿ ಐಶ್ವರ್ಯಾ ಫ್ರಾನ್ಸ್ಗೆ ಹಾರಿದ್ದಾರೆ. ತನ್ನ ಕಾಲದಲ್ಲಿ ಈ ಫಿಲ್ಮ್ ಫೆಸ್ಟಿವಲ್ಗೆ ಭಾಗಿಯಾದ ಮೊದಲ ನಟಿಯರಲ್ಲಿ ಐಶ್ವರ್ಯಾ ಮೊದಲ ಸ್ಥಾನ ಪಡೆದಿದ್ದಾರೆ. ಇಲ್ಲಿಯವರೆಗೂ ಅವರು ಪ್ರತಿ ವರ್ಷ ಈ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿ ಕೂಡ ಅವರು, ಈ ಬಾರಿಯ 76ನೇ ಕೇನ್ಸ್ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದು, ಮಗಳು ಆರಾಧ್ಯ ಬಚ್ಚನ್ ಜೊತೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ಅವರನ್ನು ಕಂಡ ಅಭಿಮಾನಿಗಳನ್ನು ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಕೆಲವರು ಐಶ್ವರ್ಯಾ ಅವರ ಜೊತೆಗೆ ಸೆಲ್ಫಿ ತೆಗಿಸಿಕೊಳ್ಳುವ ಭರದಲ್ಲಿ ಆರಾಧ್ಯ ಅವರನ್ನು ತಳ್ಳಿದ್ದಾರೆ. ಈ ತಕ್ಷಣಕ್ಕೆ ಐಶ್ವರ್ಯಾ ಮಗಳ ರಕ್ಷಣೆಗೆ ಆಗಮಿಸಿದ್ದಾರೆ. ಜೊತೆಗೆ ಮಗಳೊಂದಿಗೆ ಹೋಗಲು ಅನುಮತಿ ನೀಡುವಂತೆ ಶಾಂತಿಯುತವಾಗಿ ಜನರನ್ನು ಕೋರಿದ್ದಾರೆ.
- " class="align-text-top noRightClick twitterSection" data="
">
ಈ ವಿಡಿಯೋವನ್ನು ಪ್ಯಾಪಾರಾಜಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಕ್ಷಣಕ್ಕೆ ಈ ವಿಡಿಯೋವನ್ನು ತೆಗೆದು ಹಾಕಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ನೆಟಿಜನ್ಗಳು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಹಿಂದೆ ಬಿದ್ದಿಲ್ಲ. ಒಬ್ಬ ಬಳಕೆದಾರರು, ಈ ರೀತಿಯ ರಕ್ಷಣಾತ್ಮಕ ತಾಯಿಯನ್ನು ಎಲ್ಲಿಯೂ ಕಂಡಿಲ್ಲ ಎಂದಿದ್ದಾರೆ. ಮತ್ತೊಬ್ಬರು ಒಜಿ ಕೇನ್ಸ್ ರಾಣಿ ಬಂದಿದ್ದಾರೆ ಎಂದಿದ್ದಾರೆ.
ಐಶ್ವರ್ಯಾ ತಮ್ಮ ಮಗಳ ವಿಚಾರದಲ್ಲಿ ಸದಾ ರಕ್ಷಣೆಗೆ ಸದಾ ಧಾವಿಸುವುದು. ಮಾಧ್ಯಮ, ಜನರು, ಪ್ಯಾಪಾರಾಜಿಗಳಿಂದ ರಕ್ಷಿಸಿಕೊಳ್ಳುವ ಐಶ್ವರ್ಯಾ ಅವರ ನಡೆಗೆ ಸದಾ ಮೆಚ್ಚುಗೆ ವ್ಯಕ್ತವಾಗುತ್ತದೆ. ಈ ಬಾರಿ ಕೂಡ ಫೋಟೋಗ್ರಾಫರ್ಗಳ ಅವರ ಮಗಳ ಬಗ್ಗೆ ತೋರಿದ ನಿಲುವಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಕೇನ್ಸ್ಗೆ ತೆರಳಿರುವ ನಟಿ ಐಶ್ವರ್ಯಾ ವಿಮಾನ ನಿಲ್ದಾಣದಲ್ಲಿ ಕಪ್ಪು ಬಣ್ಣದ ಓವರ್ ಕೋಟ್ನಲ್ಲಿ ಕಂಡು ಬಂದರೆ, ಆರಾಧ್ಯ ನೀಲಿ ಬಣ್ಣದ ಡೆನಿಮ್ ಜೀನ್ಸ್ ಮತ್ತು ಜಾಕೆಟ್ನಲ್ಲಿ ಪಿಂಕ್ ಟೀ ಶರ್ಟ್ನಲ್ಲಿ ಕಂಡು ಬಂದಿದ್ದಾರೆ.
ಹಲವು ವರ್ಷಗಳ ಹಿಂದೆ ಕೂಡ ಅಮ್ಮ ಐಶ್ವರ್ಯಾ ಜೊತೆಗೆ ಮಗಳು ಆರಾಧ್ಯ ಕೂಡ ಕೇನ್ಸ್ ಸಮಾರಂಭದಲ್ಲಿ ಕಂಡಿದ್ದರು. ಕಳೆದ ವರ್ಷ ಕೂಡ ಆರಾಧ್ಯ ಅಮ್ಮನ ಜೊತೆಗೆ ಕಾರ್ಯಕ್ರಮ ಮತ್ತು ನಂತರ ನಡೆದ ಪಾರ್ಟಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಳು. ಈ ಬಾರಿ 76ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಮೇ 16ರಿಂದ ಆರಂಭವಾಗಿದ್ದು, ಮೇ 27ರವರೆಗೆ ನಡೆಯಲಿದೆ. ಪ್ಯಾರಿಸ್ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಭಾರತದ ಅನೇಕ ಬಾಲಿವುಡ್ ತಾರೆಯರು ಮಿಂಚು ಹರಿಸಲಿದ್ದಾರೆ.
ಈ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮೊದಲ ಬಾರಿಗೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಮತ್ತು ನಟಿ ಅನುಷ್ಕಾ ಶರ್ಮಾ, ಸಾರಾ ಆಲಿ ಖಾನ್ ಕೂಡ ಹೆಜ್ಜೆ ಹಾಕಲಿದ್ದಾರೆ. ಇನ್ನು ಈ ಫಿಲ್ಮ್ ಫೆಸ್ಟಿವಲ್ ಜ್ಯೂರಿಯಲ್ಲಿ ನಟಿ ದಿಪೀಕಾ ಪಡುಕೋಣೆ ಕೂಡ ಇದ್ದಾರೆ.
ಇದನ್ನೂ ಓದಿ: ಕೇನ್ಸ್ ಫಿಲ್ಮ್ ಫೆಸ್ಟಿವಲ್ ಆರಂಭ: ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿರುವ ಭಾರತೀಯ ಸೆಲೆಬ್ರಿಟಿಗಳಿವರು