ETV Bharat / entertainment

ಕೀರ್ತಿ ಸುರೇಶ್​ ಬಳಿಕ VD18 ಚಿತ್ರತಂಡಕ್ಕೆ ವಾಮಿಕಾ ಗಬ್ಬಿ ಸೇರ್ಪಡೆ - ವರುಣ್​ ಧವನ್​ ಸಿನಿಮಾ

ಪೂರ್ಣ ಕಮರ್ಷಿಯಲ್​ ಸಿನಿಮಾಗಾಗಿ ಎದುರು ನೋಡುತ್ತಿದ್ದ ನಟಿ ವಾಮಿಕಾ ಗಬ್ಬಿ..

After Keerthy Suresh, Vamika Gabbi joins the cast of VD18
ಕೀರ್ತಿ ಸುರೇಶ್​ ಬಳಿಕ VD18 ಚಿತ್ರತಂಡಕ್ಕೆ ವಾಮಿಕಾ ಗಬ್ಬಿ ಸೇರ್ಪಡೆ
author img

By

Published : Aug 7, 2023, 6:23 PM IST

ಬಾಲಿವುಡ್​ ಬಾದ್​ಶಾ​ ಶಾರುಖ್​ ಖಾನ್​ ಬಳಿಕ ನಟ ವರುಣ್​ ಧವನ್​ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಜವಾನ್​ ನಿರ್ದೇಶಕರ ಜೊತೆ ಕೈಜೋಡಿಸಿರುವುದು ಗೊತ್ತಿರುವ ವಿಷಯ. ವರುಣ್​ ಧವನ್​ ಅವರು ಮುಂದಿನ ಆ್ಯಕ್ಷನ್​ ಸಿನಿಮಾಗೆ ನಿರ್ದೇಶಕ ಅಟ್ಲೀ ಹಾಗೂ ಅವರ ಪತ್ನಿ ಪ್ರಿಯಾ ಮೋಹನ್​ ಅವರ ಎ ಫಾರ್​ ಆ್ಯಪಲ್​ ಸ್ಟುಡಿಯೋಸ್​ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಮುರಾದ್​ ಖೇತಾನಿಯ ಸಿನಿ1 ಸ್ಟುಡಿಯೋಸ್​ ಸಹಯೋಗವೂ ಇದೆ. ಇನ್ನೂ ಹೆಸರಿಡದ VD18 ಕ್ಕೆ 2019ರ ಕೀ ಸಿನಿಮಾ ಖ್ಯಾತಿಯ ಕಲೀಸ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ತಮಿಳಿನಲ್ಲಿ ಅಟ್ಲೀ ಆ್ಯಕ್ಷನ್​ ಕಟ್​ ಹೇಳಿದ್ದ ವಿಜಯ್​, ಸಮಂತಾ ಹಾಗೂ ಆ್ಯಮಿ ಜಾಕ್ಸನ್​ ಅಭಿನಯಿಸಿದ್ದ ತೆರಿ ಸಿನಿಮಾದ ರಿಮೇಕ್​ ಇದು ಎಂದು ಹೇಳಲಾಗುತ್ತಿದ್ದು, ಈಗಾಗಲೇ ವರುಣ್​ ಧವನ್​ಗೆ ಜೋಡಿಯಾಗಿ ಕೀರ್ತಿ ಸುರೇಶ್​ ಅಭಿನಯಿಸಲಿದ್ದಾರೆ. ಈ ಮೂಲಕ ಮಹಾನಟಿ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಇದೀಗ ಕೀರ್ತಿ ಸುರೇಶ್​ ನಂತರ ಎರಡನೇ ನಾಯಕಿಯಾಗಿ ಜುಬಿಲಿ ನಟಿ ವಾಮಿಕಾ ಗಬ್ಬಿ ಆಯ್ಕೆಯಾಗಿದ್ದಾರೆ. 2024ರ ಮೇ 31 ರಂದು ಸಿನಿಮಾ ಬಿಡುಗಡೆ ಮಾಡಲು ತಂಡ ನಿರ್ಧಾರ ಮಾಡಿದೆ.

ನಟಿ ವಾಮಿಕಾ ಅವರು ಸದ್ಯ ಉತ್ತಮ ಕಮರ್ಷಿಯಲ್​ ಸಿನಿಮಾಗಾಗಿ ಎದುರು ನೋಡುತ್ತಿದ್ದು, ಅದೇ ಸಮಯಕ್ಕೆ ವರುಣ್​ ಧವನ್​ ಸಿನಿಮಾದಲ್ಲಿ ಅಭಿನಯಿಸಲು ಆಫರ್​ ಬಂದಿರುವುದರಿಂದ ಥ್ರಿಲ್​ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು 'ಈ ಪ್ರಾಜೆಕ್ಟ್​ನ ಭಾಗವಾಗಲು ನಾನು ಥ್ರಿಲ್​ ಆಗಿದ್ದೇನೆ. ನಾನು ಎದುರು ನೋಡುತ್ತಿದ್ದ ಹಾಗೆ ವರುಣ್​ ಧವನ್​ ಹಾಗೂ ಕೀರ್ತಿ ಸುರೇಶ್​ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಪೂರ್ಣ ಕಮರ್ಷಿಯಲ್​ ಸಿನಿಮಾ ಮಾಡಲು ಎದುರು ನೋಡುತ್ತಿದ್ದೆ. ಈಗ ಅಂತಹದೇ ಸಿನಿಮಾ ಸಿಕ್ಕಿದೆ. ಮುರಾದ್​ ಸರ್​ ಹಾಗೂ ಅಟ್ಲೀ ಅವರ ಜೊತೆಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ' ಎಂದು ಹೇಳಿದ್ದಾರೆ.

ಗ್ರಹಣ್​, ಮಾಯ್​ ಹಾಗೂ ಜುಬಿಲಿ ವೆಬ್​ಸಿರೀಸ್​ಗಳಿಂದ ಹೆಚ್ಚು ಗುರುತಿಸಿಕೊಂಡಿರುವ ನಟಿ ವಾಮಿಕಾ ಗಬ್ಬಿ ಪ್ರಸ್ತುತ ತಮ್ಮ ಮುಂದಿನ ಪ್ರಾಜೆಕ್ಟ್ ಶೂಟಿಂಗ್​ಗಾಗಿ ಹಂಗೇರಿಯಾ ಬಡಾಪೆಸ್ಟ್​ನಲ್ಲಿದ್ದಾರೆ. ನಿರ್ದೇಶಕ ವಿಶಾಲ್​ ಭಾರದ್ವಾಜ್​ ಅವರ ಚೊಚ್ಚಲ ವೆಬ್​ ಸಿರೀಸ್​ ಚಾರ್ಲಿ ಚೋಪ್ರಾ ಹಾಗೂ ದ ಮಿಸ್ಟ್ರಿ ಆಫ್​ ಸೋಲಾಂಗ್​ ವ್ಯಾಲಿ ಹಾಗೂ ಅವರು ನೆಟ್​ಫ್ಲಿಕ್ಸ್​ ಜೊತೆಗೆ ಮಾಡುತ್ತಿರುವ ಸಿನಿಮಾ ಖುಫಿಯಾದಲ್ಲೂ ನಟಿ ತಬು ಜೊತೆಗೆ ಅಭಿನಯಿಸಿದ್ದಾರೆ.

VD18 ಸಿನಿಮಾದ ಕಥಾವಸ್ತುವಿನ ಬಗ್ಗೆ ಇನ್ನೂ ರಿವೀಲ್​ ಆಗಿಲ್ಲ. ಮಹಾನಟಿ ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್​ ಅವರು ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಸಿದ್ಧ ತಾರಾಗಣ ಹಾಗೂ ನಿರ್ದೇಶಕ, ನಿರ್ಮಾಪಕರ ಸಮಾಗಮದಲ್ಲಿ ಮೂಡಿ ಬರಲಿರುವ #VD18 2024ರ ಬಹುನಿರೀಕ್ಷಿತ ಸಿನಿಮಾವಾಗಲಿದೆ.

ಇದನ್ನೂ ಓದಿ: Mahesh Babu: ಈ ಸಲ ಮಹೇಶ್​ ಬಾಬು ಬರ್ತ್‌ಡೇ ಎಲ್ಲಿ ಗೊತ್ತೇ? ಈ ದೇಶದಲ್ಲಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.