ETV Bharat / entertainment

'ಕಾಫಿ ವಿತ್​ ಕರಣ್​' ಎಂಟನೇ ಸಂಚಿಕೆಯಲ್ಲಿ ಆದಿತ್ಯ ರಾಯ್​ ಕಪೂರ್​, ಅರ್ಜುನ್​ ಕಪೂರ್​ - ಈಟಿವಿ ಭಾರತ ಕನ್ನಡ

Koffee With Karan 8: ಬಾಲಿವುಡ್​ ನಟರಾದ ಆದಿತ್ಯ ರಾಯ್​ ಕಪೂರ್​ ಮತ್ತು ಅರ್ಜುನ್​ ಕಪೂರ್​ 'ಕಾಫಿ ವಿತ್ ಕರಣ್ ಸೀಸನ್ 8'ರಲ್ಲಿ ಕಾಣಿಸಿಕೊಂಡರು.

Koffee With Karan 8
ಕಾಫಿ ವಿತ್​ ಕರಣ್​ ಸೀಸನ್​ 8ರ ಎಂಟನೇ ಸಂಚಿಕೆಯಲ್ಲಿ ಆದಿತ್ಯ ರಾಯ್​ ಕಪೂರ್​, ಅರ್ಜುನ್​ ಕಪೂರ್​
author img

By ETV Bharat Karnataka Team

Published : Dec 14, 2023, 5:28 PM IST

ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಅತ್ಯಂತ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 8ರ ಎಂಟನೇ ಸಂಚಿಕೆಯಲ್ಲಿ ಬಾಲಿವುಡ್​ ನಟರಾದ ಆದಿತ್ಯ ರಾಯ್ ಕಪೂರ್ ಮತ್ತು ಅರ್ಜುನ್ ಕಪೂರ್ ಕಾಣಿಸಿಕೊಂಡರು. ಇಬ್ಬರೂ ಚಾಟ್​ ಶೋನಲ್ಲಿ ಗಾಸಿಪ್​ ಆಗುವಂತಹ ಯಾವುದೇ ವಿಚಾರಗಳನ್ನು ಹಂಚಿಕೊಳ್ಳಲಿಲ್ಲ. ಅದಾಗ್ಯೂ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದರು.

ನಟಿ ಅನನ್ಯಾ ಪಾಂಡೆ ಜೊತೆಗಿನ ವದಂತಿ ಬಗ್ಗೆ ಪ್ರಶ್ನಿಸಿದಾಗ ಆದಿತ್ಯ ರಾಯ್​ ಕಪೂರ್​ ನಾಚಿಕೆಯಿಂದ ವರ್ತಿಸಿದರು. ಅವರು ತಮ್ಮಿಬ್ಬರ ಸಂಬಂಧವನ್ನು ದೃಢೀಕರಿಸದೇ ಇದ್ದರೂ, ಅನನ್ಯಾ ಪಾಂಡೆ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಕರಣ್​ ಅವರು ಆದಿತ್ಯ ಜೊತೆ, 'ನೀವು ಅನನ್ಯಾ ಪಾಂಡೆ ಜೊತೆ ಡೇಟಿಂಗ್​ ಮಾಡುತ್ತಿದ್ದೀರಿ ಎಂದು ವದಂತಿಗಳಿವೆ. ಇದು ನಿಜವೇ?' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಟ, 'ಕರಣ್​, ನೀವು ಈ ಶೋನಲ್ಲಿ, ನನ್ನನ್ನು ಯಾವುದೇ ರಹಸ್ಯಗಳನ್ನು ಕೇಳಬೇಡಿ. ನಾನು ನಿಮಗೆ ಸುಳ್ಳು ಹೇಳುವುದಿಲ್ಲ ಎಂದು ಹೇಳಿದ್ದೀರಿ. ನನಗೆ ಅದು ನೆನಪಿದೆ' ಎಂದು ಹೇಳಿದರು.

ಬಳಿಕ ಕರಣ್​ ಅವರು ನಟನಿಗೆ, ತಮ್ಮ ಶೋನಲ್ಲಿ ಅನನ್ಯಾ ಅವರು 'ಅನನ್ಯಾ ಕಾಯ್​ ಕಪೂರ್​' ಎಂದು ಭಾವಿಸಿರುವುದಾಗಿ ವಿವರಿಸಿದರು. ಅದಕ್ಕೆ ಉತ್ತರವಾಗಿ ಆದಿತ್ಯ, 'ನಾನು ಸದ್ಯಕ್ಕೆ ಆದಿತ್ಯ ಜಾಯ್​ ಕಪೂರ್​' ಎಂದು ಹೇಳಿದರು. ನಂತರ ಕರಣ್​, 'ನೀವು ಒಂದು ಸನ್ನಿವೇಶದಲ್ಲಿ ಸಂತೋಷದಿಂದ ಇದ್ದೀರಾ?' ಎಂದು ಪ್ರಶ್ನಿಸಿದರು. ಇದಕ್ಕೆ ಆದಿತ್ಯ, 'ನಾನು ತುಂಬಾ ಸಂತೋಷವಾಗಿದ್ದೇನೆ' ಎಂದು ಉತ್ತರಿಸಿದರು. ನಟ ಅನನ್ಯಾ ಪಾಂಡೆ ಅವರನ್ನು 'ಆನಂದ' ಮತ್ತು 'ಶುದ್ಧ ಸಂತೋಷ' ಎಂದು ಉಲ್ಲೇಖಿಸಿದರು.

ಆದಿತ್ಯ ಜೊತೆಗಿನ ರ್ಯಾಪಿಡ್​-ಫೈರ್​ ರೌಂಡ್​ನಲ್ಲಿ 'ನೀವು ಶ್ರದ್ಧಾ ಕಪೂರ್​ ಮತ್ತು ಅನನ್ಯಾ ಪಾಂಡೆ ಜೊತೆ ಲಿಫ್ಟ್​ನಲ್ಲಿ ಸಿಲುಕಿಕೊಂಡರೆ ಏನು ಮಾಡುತ್ತೀರಿ' ಎಂದು ಕರಣ್​ ಪ್ರಶ್ನಿಸಿದರು. ಇದಕ್ಕೆ ಮಧ್ಯ ಪ್ರವೇಶಿಸಿದ ಅರ್ಜುನ್​ ಕಪೂರ್​, 'ಬಹುಶಃ ಅವನು ಪ್ರೀತಿಯಲ್ಲಿ ಬೀಳಬಹುದು. ಆದರೆ ಅದು ಯಾರೊಂದಿಗೆ ಎಂದು ನನಗೆ ಗೊತ್ತಿಲ್ಲ' ಎಂದು ಉತ್ತರಿಸಿದರು. ಆದಿತ್ಯ ಹಾಸ್ಯಮಯವಾಗಿ ಅರ್ಜುನ್​ನತ್ತ ನೋಡಿದಾಗ 'ನಾನು ತಮಾಷೆ ಮಾಡುತ್ತಿದ್ದೇನೆ' ಎಂದು ಹೇಳಿದರು.

ಮತ್ತೊಂದೆಡೆ, ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ಹಿಂದೆ ನಟ ಅರ್ಬಾಜ್​ ಖಾನ್​ ಅವರನ್ನು ಮದುವೆಯಾಗಿದ್ದ ಮಲೈಕಾ ಅವರೊಂದಿಗೆ ವಿಚ್ಛೇದನ ಪಡೆದುಕೊಂಡ ಬಳಿಕ ಅರ್ಜುನ್​ ಕಪೂರ್​ ಜೊತೆ ಕೆಲಕಾಲ ಡೇಟಿಂಗ್​ನಲ್ಲಿದ್ದರು. ಇವರಿಬ್ಬರು ತಮ್ಮ ಸಂಬಂಧವನ್ನು 2019ರಲ್ಲಿ ಅಧಿಕೃತಗೊಳಿಸಿದರು. ಇತ್ತೀಚೆಗೆ ಮಲೈಕಾ ಅವರು 50ನೇ ವರ್ಷಕ್ಕೆ ಕಾಲಿಟ್ಟಿದ್ದು, ಅರ್ಜುನ್​ಗೆ ಕೇವಲ 38 ವರ್ಷ.

ಈ ವಿಚಾರವಾಗಿಯೇ ಸೋಷಿಯಲ್​ ಮೀಡಿಯಾದಲ್ಲಿ ಅರ್ಜುನ್​ ಕಪೂರ್​ ಟ್ರೋಲ್​ ಆಗಿದ್ದರು. ಟಾಕ್​ ಶೋನಲ್ಲಿ ಈ ಬಗ್ಗೆ ಮಾತನಾಡಿದ ಅರ್ಜುನ್​ ಕಪೂರ್​, ಕೆಲವು ಕಾಮೆಂಟ್​ಗಳು/ಟ್ರೋಲ್​ಗಳು ಒಬ್ಬರ ಭಾವನೆಗಳ ಮೇಲೆ ಬೀರುವ ಪ್ರಭಾವವನ್ನು ಒತ್ತಿ ಹೇಳಿದರು. ಎಲ್ಲ ವ್ಯಕ್ತಿಗಳು ಈ ಒಂದು ವಿಚಾರದಿಂದ ಮುಕ್ತರಾಗಿಲ್ಲ. ಹಾಗಾಗಿ ಅಂತಹ ಸನ್ನಿವೇಶಗಳು ಎದುರಾದಾಗ ಅದನ್ನು ನಿಭಾಯಿಸಲು ಕಂಡುಕೊಳ್ಳುವ ಮಾರ್ಗ ಬಹಳ ಮುಖ್ಯ ಎಂದು ಹೇಳಿದರು. ಇಂತಹ ಕಮೆಂಟ್​ಗಳಿಂದ ದೂರವಿರುವುದು ಅತ್ಯಂತ ಒಳ್ಳೆಯದು ಎಂಬುದು ನಟನ ಅಭಿಪ್ರಾಯ.

ಇದನ್ನೂ ಓದಿ: 'ಕಾಫಿ ವಿತ್ ಕರಣ್'ನಲ್ಲಿ ಕಿಯಾರಾ ಅಡ್ವಾಣಿ, ವಿಕ್ಕಿ ಕೌಶಲ್​; ಆಕರ್ಷಕ ಫೋಟೋಗಳು ಶೇರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.