ETV Bharat / entertainment

1.75 ಕೋಟಿ ರೂ. ಕಲೆಕ್ಷನ್​​: ಅತಿ ಕಡಿಮೆ ಸಂಪಾದನೆ ಮಾಡಿದ 'ಆದಿಪುರುಷ್​'! - ಪ್ರಭಾಸ್​​

'ಆದಿಪುರುಷ್​' ಸಿನಿಮಾ ಸತತ ಸೋಲು ಅನುಭವಿಸುತ್ತಿದ್ದು, ಇನ್ನು ಚಿತ್ರಮಂದಿರಗಳಲ್ಲಿ ಓಡುವುದು ಡೌಟ್.

Adipurush collection
ಆದಿಪುರುಷ್ ಕಲೆಕ್ಷನ್​
author img

By

Published : Jun 27, 2023, 10:23 AM IST

ಪ್ರಭಾಸ್​, ಕೃತಿ ಸನೋನ್ ಮುಖ್ಯಭೂಮಿಕೆಯ ಆದಿಪುರುಷ್​ ಸಿನಿಮಾದ ಬಾಕ್ಸ್ ಆಫೀಸ್‌ ಕಲೆಕ್ಷನ್​​ ವಿಚಾರದಲ್ಲಿ ಚೇತರಿಕೆಯ ಲಕ್ಷಣ ಕಾಣತ್ತಿಲ್ಲ. ಕಳಪೆ ವಿಮರ್ಶೆಗಳು ಮತ್ತು ಋಣಾತ್ಮಕ ಬಾಯಿಮಾತುಗಳು ಕಾಳ್ಗಿಚ್ಚಿನಂತೆ ಹಬ್ಬಿ ಚಿತ್ರದ ಸೋಲಿಗೆ ಕಾರಣವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕುಸಿತದ ಪ್ರವೃತ್ತಿ ಮುಂದುವರಿದಿದೆ. ಸೋಮವಾರದಂದು, ದೇಶೀಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಕಲೆಕ್ಷನ್​ ಮಾಡಿದೆ. ಇದುವರೆಗಿನ ಅತಿ ಕಡಿಮೆ ಕಲೆಕ್ಷನ್​ ಸಂಖ್ಯೆ ಇದಾಗಿದೆ.

ನೆಗೆಟಿವ್​ ವಿಮರ್ಷೆ: ಚಿತ್ರದ ಟೀಸರ್ ಬಿಡುಗಡೆ ಆಗೋವರೆಗೂ 'ಆದಿಪುರುಷ್​' ಹಿಂದಿ ಚಿತ್ರರಂಗಕ್ಕೆ ಗೇಮ್ ಚೇಂಜರ್ ಚಲನಚಿತ್ರ ಎಂದು ಗ್ರಹಿಸಲಾಗಿತ್ತು. ಆದ್ರೆ ಟೀಸರ್ ಕಳಪೆಯಾಗಿದೆ ಎಂಬ ಪ್ರತಿಕ್ರಿಯೆಯನ್ನು ಗಳಿಸಿತು. ಬಳಿಕ ಟ್ರೇಲರ್ ಕೂಡ ಟೀಕೆಗೊಳಗಾಯಿತು. ಪುರಾತನ ಸಂಸ್ಕೃತ ಮಹಾಕಾವ್ಯ 'ರಾಮಾಯಣ'ದ ರೂಪಾಂತರವಾದ ಚಲನಚಿತ್ರವು ಗ್ರಾಫಿಕ್​​ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಯಿತು. ಶ್ರೀರಾಮನ ಯುಗವನ್ನು ತಪ್ಪಾಗಿ ಚಿತ್ರಿಸಿರುವುದಾಗಿ ಮತ್ತು ದೇವರ ಬಾಯಿಂದ ಆಡುಮಾತಿನ ಭಾಷೆಯಲ್ಲಿ ಮಾತನಾಡಿಸಿರುವುದಕ್ಕಾಗಿ ಪ್ರೇಕ್ಷಕರ ಟೀಕೆ ಎದುರಿಸಿತು. ಇದು ಸಿನಿಮಾ ಕಲೆಕ್ಷನ್​ ಸಂಖ್ಯೆ ಮೇಲೆ ಪರಿಣಾಮ ಬೀರಿತು.

11 ದಿನಗಳಲ್ಲಿ ಮೊದಲ ಬಾರಿ ಅತಿ ಕಡಿಮೆ ಸಂಗ್ರಹ: ಮೊದಲ ವಾರಾಂತ್ಯದಲ್ಲಿ ಚಿತ್ರವು ಯಶಸ್ವಿ ಆರಂಭಿಕ ದಿನಗಳನ್ನು ಹೊಂದುವಲ್ಲಿ ಯಶಸ್ವಿಯಾಯಿತು. ಮೂರು ದಿನಗಳಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಕಲೆಕ್ಷನ್​ ಮಾಡಿತು. ಆದರೆ ನಾಲ್ಕನೇ ದಿನದ ಕಲೆಕ್ಷನ್ ಸಿನಿಮಾ ಸೋಲಿನ ಸೂಚನೆ ನೀಡಿತು. ಒಂದಂಕಿಯ ಕಲೆಕ್ಷನ್​​ 11ನೇ ದಿನವೂ ಮುಂದುವರೆಯಿತು.

1.75 ಕೋಟಿ ರೂ. ಸಂಪಾದನೆ: Sacnilk ಪ್ರಕಾರ, ಆದಿಪುರುಷ್​​ ಸಿನಿಮಾ 11ನೇ ದಿನ (ಸೋಮವಾರ) ದೇಶೀಯ ಮಾರುಕಟ್ಟೆಯಲ್ಲಿ ಎಲ್ಲ ಭಾಷೆಗಳನ್ನು ಒಳಗೊಂಡಂತೆ 1.75 ಕೋಟಿ ರೂ. ಸಂಪಾದಿಸಿದೆ. ಭಾರತದಲ್ಲಿ ಈವರೆಗೆ ಒಟ್ಟು 277.50 ಕೋಟಿ ರೂ. ಗಳಿಸಿದೆ.

ಟಿಕೆಟ್ ದರ ಇಳಿಸಿದರೂ ಪ್ರಯೋಜನವಿಲ್ಲ: 11ನೇ ದಿನದಂದು ಹಿಂದಿ ಮಾರುಕಟ್ಟೆಯಲ್ಲಿ ಶೇ. 8.06ರಷ್ಟು ಆಕ್ಯುಪೆನ್ಸಿಯನ್ನು (ಪ್ರೇಕ್ಷಕರ ಸಂಖ್ಯೆ) ಹೊಂದಿತ್ತು. ವರದಿಗಳ ಪ್ರಕಾರ, ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗದಿದ್ದರೂ, ಆದಿಪುರುಷ್​ ಕಳಪೆ ಪ್ರದರ್ಶನ ಕಾಣುತ್ತಿದೆ. ಆಕ್ಯುಪೆನ್ಸಿ ದರ ಇಳಿಮುಖವಾದ ಹಿನ್ನೆಲೆ ಪ್ರೇಕ್ಷಕರನ್ನು ಸಿನಿಮಾ ಹಾಲ್‌ಗಳಿಗೆ ಸೆಳೆಯುವ ಪ್ರಯತ್ನವಾಗಿ, ಚಿತ್ರ ನಿರ್ಮಾಪಕರು ಟಿಕೆಟ್ ದರವನ್ನು 112 ರೂ.ಗೆ ಇಳಿಸಿದರು. ಆದರೂ ಯಾವುದೇ ಪ್ರಯೋಜನ ಆಗುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ: ಮತ್ತೊಂದು ನೈಜ ಘಟನಾಧಾರಿತ ಸಿನಿಮಾ ಮಾಡಲು ಮುಂದಾದ 'ದಿ ಕೇರಳ ಸ್ಟೋರಿ' ನಿರ್ದೇಶಕ ಸುದೀಪ್ತೋ ಸೇನ್

ಟಿ-ಸೀರೀಸ್‌ನಿಂದ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಆದಿಪುರುಷ್​ ಜೂನ್ 16 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ವಿಡುಗಡೆ ಆಗಿದೆ.​​ ಶ್ರೀರಾಮನ ಪಾತ್ರದಲ್ಲಿ ಸೌತ್ ನಟ ಪ್ರಭಾಸ್, ಸೀತೆ ಪಾತ್ರದಲ್ಲಿ ನಾರ್ತ್​​ ನಟಿ ಕೃತಿ ಸನೋನ್ ಅಭಿನಯಿಸಿದ್ದಾರೆ. ಉಳಿದ ಪ್ರಮುಖ ಪಾತ್ರಗಳಾದ ಲಕ್ಷ್ಮಣನಾಗಿ ನಟ ಸನ್ನಿ ಸಿಂಗ್, ಹನುಮಂತನಾಗಿ ನಟ ದೇವದತ್ತ, ಲಂಕೇಶ್ ಆಗಿ ಸೈಫ್ ಅಲಿ ಖಾನ್ ನಟಿಸಿರುವ ಈ ಚಿತ್ರವನ್ನು ಓಂ ರಾವುತ್​ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: Sudeep nephew Sanchith: ಸ್ಯಾಂಡಲ್​ವುಡ್​ಗೆ 'ಜೂನಿಯರ್​ ಕಿಚ್ಚ' ಎಂಟ್ರಿ; ಸಂಚಿತ್​ ಚೊಚ್ಚಲ ಸಿನಿಮಾಗೆ ಸ್ಟಾರ್​ ನಟರ ಬೆಂಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.