ನವದೆಹಲಿ: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಗಣ್ಯರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಹಿರಿಯ ನಟಿ ತಬಸ್ಸುಮ್ ಗೋವಿಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, ನವೆಂಬರ್ 21 ರಂದು ಸಾಂತಾಕ್ರೂಜ್‌ನ ಲಿಂಕಿಂಗ್ ರಸ್ತೆಯಲ್ಲಿರುವ ಆರ್ಯ ಸಮಾಜದಲ್ಲಿ ಪ್ರಾರ್ಥನಾ ಸಭೆ ನಡೆಯಲಿದೆ. ದೆಹಲಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ತಬಸ್ಸುಮ್ ಶುಕ್ರವಾರ ರಾತ್ರಿ 8.40 ರ ಸುಮಾರಿಗೆ 78 ವರ್ಷದ ನಟಿ ನಿಧನರಾಗಿರುವ ಬಗ್ಗೆ ಎಂದು ಅವರ ಮಗ ಖಚಿತಪಡಿಸಿದ್ದಾರೆ.
1947ರಲ್ಲಿ ಬಾಲನಟಿ ಬೇಬಿ ತಬಸ್ಸುಮ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ತಬಸ್ಸುಮ್ ತನ್ನ ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿದ್ದರು. ಅವರ ದೂರದರ್ಶನ್ ಸೆಲೆಬ್ರಿಟಿ ಟಾಕ್ ಶೋ 1972 ರಿಂದ 1993 ರವರೆಗೆ ನಡೆಯಿತು.
ಇದನ್ನೂ ಓದಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ: ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್