ETV Bharat / entertainment

Swara Bhasker: ಬೇಬಿ ಬಂಪ್​ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್ - ಸ್ವರಾ ಭಾಸ್ಕರ್ ಲೇಟೆಸ್ಟ್ ನ್ಯೂಸ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಬೇಬಿ ಬಂಪ್​ ಫೋಟೋ ಶೇರ್ ಮಾಡಿದ್ದಾರೆ.

Swara Bhasker baby bump Photo
ಸ್ವರಾ ಭಾಸ್ಕರ್ ಬೇಬಿ ಬಂಪ್​ ಫೋಟೋ
author img

By

Published : Jul 22, 2023, 7:50 PM IST

ಜೂನ್ 6 ರಂದು ತಾನು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ಅಭಿಮಾನಿಗಳಿಗೆ ಕೊಟ್ಟಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸ್ವರಾ ಅವರ ಫೋಟೋ ವೈರಲ್​ ಆಗುತ್ತಿದೆ.

ಇಂದು ಇನ್​ಸ್ಟಾಗ್ರಾಮ್​ನಲ್ಲಿ ಬೇಬಿ ಬಂಪ್ ಫೋಟೋ ಶೇರ್​ ಮಾಡಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್, "Feeling like the globe" ಎಂದು ಕ್ಯಾಪ್ಷನ್​​ ಕೊಟ್ಟಿದ್ದಾರೆ. ಸ್ವರಾ ನೇರಳೆ ಮತ್ತು ನೀಲಿ ಬಣ್ಣದ ಡ್ರೆಸ್​ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಬೇಬಿ ಬಂಪ್ ಫೋಟೋದಲ್ಲಿ ನಟಿ ಮುದ್ದಾದ ನಗು ಬೀರಿದ್ದಾರೆ. ಸ್ವರಾ ಬುಕ್​ ಸ್ಟ್ಯಾಂಡ್​​ ಪಕ್ಕದಲ್ಲಿ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಜೂನ್‌ ಮೊದಲ ವಾರದಲ್ಲಿ ನಟಿ ಸ್ವರಾ ಭಾಸ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೆಗ್ನೆನ್ಸಿ ನ್ಯೂಸ್ ಅನೌನ್ಸ್ ಮಾಡಿದ್ದರು. ಅಂದೇ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದ ಸ್ವರಾ, "ಕೆಲವೊಮ್ಮೆ ನಿಮ್ಮ ಎಲ್ಲ ಪ್ರಾರ್ಥನೆಗಳು ಒಟ್ಟಿಗೆ ಉತ್ತರಿಸಲ್ಪಡುತ್ತವೆ. ನಾವು ಸಂಪೂರ್ಣ ಹೊಸ ಜಗತ್ತಿಗೆ ಕಾಲಿಡಲು ಆಶೀರ್ವಾದಿಸಲ್ಪಟ್ಟಿದ್ದೇವೆ, ಕೃತಜ್ಞರಾಗಿದ್ದೇವೆ, ಉತ್ಸುಕಯಾಗಿದ್ದೇವೆ'' ಎಂದು ಬರೆದುಕೊಂಡಿದ್ದರು.

Swara Bhasker baby bump Photo
ಸ್ವರಾ ಭಾಸ್ಕರ್ ಬೇಬಿ ಬಂಪ್​ ಫೋಟೋ

ಇದೇ ಸಾಲಿನ ಫೆಬ್ರವರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ನಟಿ ಸ್ವರಾ ಭಾಸ್ಕರ್​ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಮದುವೆ ಆದರು. ಅಂದಿನ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದವು. ಸ್ವರಾ ಅವರು ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ಜೂನ್​​ನಲ್ಲಿ ಹಂಚಿಕೊಂಡ ಸೋಷಿಯಲ್​ ಮೀಡಿಯಾ ಪೋಸ್ಟ್ ಪ್ರಕಾರ, ಅಕ್ಟೋಬರ್‌ನಲ್ಲಿ ಮಗುವಿನ ಜನನವಾಗಲಿದೆ.

ಇದನ್ನೂ ಓದಿ: Video: ಅಮರನಾಥ್ ಯಾತ್ರೆ ವಿಡಿಯೋ ಹಂಚಿಕೊಂಡ ನಟಿ ಸಾರಾ ಅಲಿ ಖಾನ್

ಫೆಬ್ರವರಿಯಲ್ಲಿ ಈ ಜೋಡಿಯ ರಿಜಿಸ್ಟರ್ ಮ್ಯಾರೇಜ್ ನಡೆದಿತ್ತು.​ ಬಳಿಕ ಮಾರ್ಚ್​ ತಿಂಗಳಿನಲ್ಲಿ ಶಾಸ್ತ್ರಗಳ ಪ್ರಕಾರ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಹಳ್ದಿ ಶಾಸ್ತ್ರ, ಸಂಗೀತ ಸಮಾರಂಭ, ಮೆಹಂದಿ ಶಾಸ್ತ್ರ ಸೇರಿದಂತೆ ಮದುವೆಗೆ ಸಂಬಂಧಿಸಿದ ಎಲ್ಲ ಸಮಾರಂಭಗಳು ಶಾಸ್ತ್ರೋಕ್ತವಾಗಿ ನೆರವೇರಿತು. ಕಾರ್ಯಕ್ರಮಗಳ ಫೋಟೋ, ವಿಡಿಯೋಗಳನ್ನು ಸ್ವತಃ ನಟಿಯೇ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಅಬಿಮಾನಿಗಳ ಖುಷಿಗೆ ಕಾರಣರಾಗಿದ್ದರು. ಬಳಿಕ ಮಾರ್ಚ್ 16ರಂದು ಆರತಕ್ಷತೆ ಸಮಾರಂಭ ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ರಾಜಕೀಯ, ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು.

ಇದನ್ನೂ ಓದಿ: ಮಹೇಶ್​​ ಬಾಬು ಫ್ಯಾಮಿಲಿ ಟೈಮ್​: ಹೆಂಡತಿ, ಮಕ್ಕಳೊಂದಿಗೆ ಪ್ರವಾಸ ಹೊರಟ ಸೂಪರ್​ ಸ್ಟಾರ್

ಸ್ವರಾ ಭಾಸ್ಕರ್​ ಹಿಂದಿ ಸಿನಿಮಾಗಳಲ್ಲಿ ನಟಿಸುವುದಲ್ಲದೇ, ತಮ್ಮ ಹೇಳಿಕೆಗಳಿಂದ ಜನಪ್ರಿಯತೆ ಸಂಪಾದಿಸಿದ್ದಾರೆ. ಇನ್ನೂ ಫಹಾದ್ ಅಹ್ಮದ್ ಅವರು ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಇವರ ವಿವಾಹ ಸಮಾರಂಭಕ್ಕೆ ಗಣ್ಯಾತಿಗಣ್ಯರು ಸಾಕ್ಷಿ ಆಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.