ETV Bharat / entertainment

ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಿಲ್ಲ; ತನ್ನ ಮೇಲೆ ಹೇರಿದ ನಿಷೇಧದ ಬಗ್ಗೆ ರಶ್ಮಿಕಾ ಕ್ಲಾರಿಟಿ! - ಸಿನಿಮಾ ನೋಡಿ ಕೆಲವರು ಹೊಟ್ಟೆಕಿಚ್ಚು ಪಟ್ಟಿದ್ದು ನಿಜ

ಹೈದರಾಬಾದ್​​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂತಾರ ಚಿತ್ರದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಚಿತ್ರರಂಗ ತನ್ನ ಮೇಲೆ ನಿಷೇಧ ಹೇರಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಕಾಂತಾರ ಚಿತ್ರ ಬಿಡುಗಡೆಯಾದ ಮೂರು ದಿನಗಳ ನಂತರ ನೋಡಿದ್ದೇನೆ. ನೋಡಿದ ಬಳಿಕ ಚಿತ್ರತಂಡವನ್ನು ಅಭಿನಂದಿಸಿ ಸಂದೇಶವನ್ನು ಸಹ ಕಳುಹಿಸಿರುವುದಾಗಿ ಹೇಳಿದ್ದಾರೆ.

Actress Rashmika Mandanna on Kantara Controversy
ನಟಿ ರಶ್ಮಿಕಾ ಮಂದಣ್ಣ
author img

By

Published : Dec 9, 2022, 10:33 AM IST

ಹೈದರಾಬಾದ್​: ಕನ್ನಡ ಚಿತ್ರರಂಗ ತನ್ನನ್ನು ಬ್ಯಾನ್ ಮಾಡಿದೆ ಎಂಬ ಸುದ್ದಿಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಗಾಳಿ ಸುದ್ದಿಯನ್ನು ಅಲ್ಲಗಳೆದಿರುವ ಅವರು, ತಮ್ಮ ಮೇಲೆ ಯಾವುದೇ ನಿಷೇಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Actress Rashmika Mandanna on Kantara Controversy
ನಟಿ ರಶ್ಮಿಕಾ ಮಂದಣ್ಣ

ಕಾಂತಾರ ಸಿನಿಮಾ ನೋಡಿ ಕೆಲವರು ಹೊಟ್ಟೆಕಿಚ್ಚು ಪಟ್ಟಿದ್ದು ನಿಜ. ಆದರೆ, ನಾನು ಸಿನಿಮಾ ನೋಡಿದ ಬಳಿಕ ತಂಡಕ್ಕೆ ಸಂದೇಶ ಕಳುಹಿಸಿದ್ದೆ. ಈತರಹದ ಮಾತುಕತೆ ಆಗಲಿ ಅಥವಾ ನಟರ ನಡುವೆ ಏನಾಗುತ್ತಿದೆ ಎಂಬುದಾಗಲಿ ಹೊರಗಿನವರಿಗೆ ಗೊತ್ತಾಗುವುದಿಲ್ಲ. ನನ್ನ ಖಾಸಗಿ ವಿಷಯಗಳನ್ನು ಕ್ಯಾಮರಾದಲ್ಲಿ ಇಟ್ಟುಕೊಂಡು ಜಗತ್ತಿಗೆ ತೋರಿಸಲು ಸಾಧ್ಯವಿಲ್ಲ.

ಆ ಸಂದೇಶಗಳನ್ನು ಸಹ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಅದು ನನ್ನ ವೈಯಕ್ತಿಕ ಜೀವನ. ಸಾರ್ವಜನಿಕರ ಮುಂದೆ ಅದನ್ನು ಹೇಳಬೇಕಾಗಿಲ್ಲ. ನಾನು ನಟಿಯಾಗಿ ಯಾವ ಚಿತ್ರ ಮಾಡುತ್ತಿದ್ದೇನೆ, ಯಾವ ಪಾತ್ರ ಮಾಡುತ್ತಿದ್ದೇನೆ, ಯಾವ ಚಿತ್ರ ಹೇಗಿದೆ ಅನ್ನೋದನ್ನು ಮಾತ್ರ ಬಹಿರಂಗಪಡಿಸಬಹುದು. ವೃತ್ತಿ ಬಗ್ಗೆ ಏನು ಮಾಡುತ್ತಿದ್ದೇನೆ ಎಂಬುದನ್ನು ಪ್ರೇಕ್ಷಕರಿಗೆ ಹೇಳುವುದು ನನ್ನ ಜವಾಬ್ದಾರಿ. ಅದನ್ನಷ್ಟೇ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳುವ ಮೂಲಕ ಗುಪ್ತ ವಿಚಾರಗಳನ್ನು ಗುಪ್ತವಾಗಿಯೇ ಇಟ್ಟರು.

ಇದನ್ನೂ ಓದಿ: ಸಿನಿಮಾ ನಟ ನಟಿಗೆ ಕಿರುಕುಳ ಆರೋಪ: ಫೇಸ್‌ಬುಕ್​ನಲ್ಲಿ ಅಳಲು ತೋಡಿಕೊಂಡ ನವನಿತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.