'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿ ಪಾತ್ರ ಮಾಡಿ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ನಟಿ ರಮ್ಯಾ ಕೃಷ್ಣನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಹುಬೇಡಿಕೆಯ ನಟಿಗೆ ಚಿತ್ರರಂಗ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿರುವ ನಟಿ ರಮ್ಯಾ ಕೃಷ್ಣನ್ ತಮ್ಮ ಅಭಿನಯ, ಸೌಂದರ್ಯಕ್ಕೆ ಹೆಸರುವಾಸಿ. 1986ರಲ್ಲಿ ನಟನೆಯನ್ನು ಆರಂಭಿಸಿದ ಇವರು ಈಗಲೂ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಟಾಪ್ ಹೀರೋಯಿನ್ ಆಗಿದ್ದ ರಮ್ಯಾ ಅವರು ಈಗ ಪೋಷಕ ನಟಿಯಾಗಿ ಅತ್ಯಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಈವರೆಗೆ 5 ಭಾಷೆಗಳಲ್ಲಿ ಸುಮಾರು 260 ಸಿನಿಮಾಗಳಲ್ಲಿ ನಟಿಸಿದ್ದಾರೆ.

1970ರ ಸೆಪ್ಟೆಂಬರ್ 15ರಂದು ಜನಿಸಿದ ರಮ್ಯಾ ಕೃಷ್ಣನ್ ತಮಿಳಿನ Neram Pularumbol ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 1986ರಲ್ಲಿ ಈ ಸಿನಿಮಾ ತೆರೆ ಕಂಡಿತು. ನಂತರ Kante Koothurne Kanu, Padayappa, Ore Kadal, Konchem Ishtam Konchem Kashtam, Thaanaa Serndha Koottam ಸೇರಿ 260 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಫಿಲ್ಮ್ ಫೇರ್ ಅವಾರ್ಡ್ಸ್, ನಂದಿ ಅವಾರ್ಡ್ಸ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಬಾಹುಬಲಿ ಸಿನಿಮಾಗಳಲ್ಲಿನ ರಮ್ಯಾ ಅವರ ಶಿವಗಾಮಿ ದೇವಿ ಪಾತ್ರವು ಭಾರೀ ಮೆಚ್ಚುಗೆ ಪಡೆದಿದೆ. ಬಾಹುಬಲಿ: ದಿ ಬಿಗಿನಿಂಗ್ (2015) ಮತ್ತು ಅದರ ಸೀಕ್ವೆಲ್ ಬಾಹುಬಲಿ 2: ದಿ ಕನ್‌ಕ್ಲೂಷನ್ (2017) ಎರಡೂ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳು. ಈ ಸಿನಿಮಾ ಮೂಲಕ ರಮ್ಯಾ ಕೃಷ್ಣನ್ ತಮ್ಮ ಹೆಸರು, ಬೇಡಿಕೆ, ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಡುಗಡೆಯಾದ ಮೊದಲ ವಾರದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನಿಮಾ ಯಾವುದು ಗೊತ್ತೇ?
ಕೊನೆಯದಾಗಿ ಜಗನ್ನಾಥ್ ಪುರಿ ಅವರ ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ನಟಿ ಸುಮಾರು 1 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.