ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಮೂರ್ನಾಲ್ಕು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಹೇಳಿಕೊಂಡಿದ್ದರು. 'ನೀವೆ ಗೆಸ್ ಮಾಡಿ' ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಇದಕ್ಕೆ ಫ್ಯಾನ್ಸ್, ನೀವು ತಾಯಿಯಾಗುತ್ತಿದ್ದೀರಾ? ಎಂದೆಲ್ಲಾ ತಮ್ಮ ಅನುಮಾನಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದರು. ಆದರೀಗ ನಿಮ್ಮ ಊಹೆ ತಪ್ಪಾಗಿದೆ.
ಹೌದು. ಹರಿಪ್ರಿಯಾ ಸರ್ಪ್ರೈಸ್ ಆಗಿಟ್ಟಿದ್ದ ಪೋಸ್ಟ್ ತೀವ್ರ ಕುತೂಹಲ ಮೂಡಿಸಿತ್ತು. ಆದಷ್ಟು ಬೇಗ ಹೇಳಿ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಕಾಯುವಿಕೆಗೆ ಕೊನೆ ಎಂಬಂತೆ ಹರಿಪ್ರಿಯಾ ಗುಟ್ಟು ರಿವೀಲ್ ಮಾಡಿದ್ದು, ಹೊಸ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುತ್ತಿರುವುದಾಗಿ ತಿಳಿಸಿದ್ದಾರೆ.
- " class="align-text-top noRightClick twitterSection" data="
">
"ನಿಮ್ಮ ಎಲ್ಲಾ ಊಹೆಗಳಿಗೆ ಧನ್ಯವಾದಗಳು. ಇಲ್ಲಿದೆ ನೋಡಿ ಹೊಸ ಸರ್ಪ್ರೈಸ್. ನಾನು ಯೂಟ್ಯೂಬ್ ಚಾನೆಲ್ ಪ್ರಾರಂಭಿಸುತ್ತಿದ್ದೇನೆ" ಎಂದು ಕ್ಯಾಪ್ಶನ್ ಬರೆದುಕೊಂಡು ಹೊಸ ವಿಡಿಯೋ ಶೇರ್ ಮಾಡಿದ್ದಾರೆ.
ಹರಿಪ್ರಿಯಾ ಇನ್ನು ಮುಂದೆ ಯೂಟ್ಯೂಬ್ನಲ್ಲಿ ಆ್ಯಕ್ಟಿವ್ ಇರಲಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹೊಸ ಹೊಸ ವಿಷಯಗಳನ್ನು ಹೇಳಲಿದ್ದಾರಂತೆ. ಇದನ್ನು ಕೇಳಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ತಮ್ಮ ಸಂತೋಷವನ್ನು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ನೆಚ್ಚಿನ ನಟಿಗೆ 'ಆಲ್ ದಿ ಬೆಸ್ಟ್' ಹೇಳುತ್ತಿದ್ದಾರೆ.
ಇದನ್ನೂ ಓದಿ: ಕಾಶ್ಮೀರದ ಕೊರೆಯುವ ಚಳಿಯಲ್ಲಿ 'ಲಿಯೋ' ಶೂಟಿಂಗ್: ಸಿಬ್ಬಂದಿ ಶ್ರಮಕ್ಕೆ ನಿರ್ಮಾಪಕರಿಂದ ವಿಶೇಷ ಧನ್ಯವಾದ
'ಮರಿ ಸಿಂಹ/ಸಿಂಹಿಣಿ ಬರುತ್ತಿದ್ದಾರಾ?': ಹರಿಪ್ರಿಯಾ ಮೂರ್ನಾಲ್ಕು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಬಿಗ್ ಅಪ್ಡೇಟ್ ನೀಡಿದ್ದರು. ಹೆಸರೇನು ಮೇಡಮ್, ಯಾವಾಗ ಅನೌನ್ಸ್ ಮಾಡ್ತೀರಾ?, ನಿಜಾನಾ, ಗುಡ್ ನ್ಯೂಸ್ ಎಂಬ ಮೆಸೇಜ್ಗಳಿರುವ ಸ್ಕ್ರೀನ್ ಶಾಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ, "ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಅನೌನ್ಸ್ ಮಾಡುವ ಮುನ್ನ ನೀವು ಊಹೆ ಮಾಡಿ" ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದರು.
ಇದನ್ನು ಕಂಡ ಅಭಿಮಾನಿಗಳಂತೂ ಪ್ರಶ್ನೆಗಳ ಸುರಿಮಳೆಗೈದಿದ್ದರು. "ನೀವು ಪ್ರೆಗ್ನೆಂಟಾ?, ಮರಿ ಸಿಂಹ ಅಥವಾ ಸಿಂಹಿಣಿ ಬರುತ್ತಿದ್ದಾರಾ?, ನಿಮ್ಮ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಹೇಳ್ತಿದ್ದೀರಾ?" ಎಂದೆಲ್ಲಾ ಬಗೆಬಗೆಯ ಕಮೆಂಟ್ಗಳನ್ನು ಮಾಡಿದ್ದರು.
ಇದನ್ನೂ ಓದಿ: ಜೂಮೆ ಜೋ ಪಠಾಣ್ ಹಾಡಿಗೆ ಮೈ ಕುಣಿಸಿದ ಇರ್ಫಾನ್ ಪಠಾಣ್ ಪುತ್ರ.. ವಿಡಿಯೋ ಮೆಚ್ಚಿದ ಎಸ್ಆರ್ಕೆ
'ಸಿಂಹಪ್ರಿಯಾ'ರಿಗೆ ಮೊದಲ ಯುಗಾದಿ: ಸ್ಯಾಂಡಲ್ವುಡ್ನಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳ ಸಾಲಿಗೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸೇರಿದ್ದಾರೆ. ಜನವರಿ ತಿಂಗಳಿನಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಈ ಜೋಡಿ ಮೊದಲ ಯುಗಾದಿ ಹಬ್ಬವನ್ನು ಜೊತೆಯಾಗಿ ಆಚರಿಸಿದ್ದಾರೆ. ಮನೆಯಲ್ಲಿ ನವ ವಸಂತವನ್ನು ಸಡಗರದಿಂದ ಆಚರಿಸಿರುವ ದಂಪತಿ ಬೇವು-ಬೆಲ್ಲ ಸವಿದಿದ್ದಾರೆ. ಕುಟುಂಬಸ್ಥರ ಜೊತೆ ಕೂತು ಹಬ್ಬದೂಟ ಮಾಡಿದ್ದಾರೆ. ಮೊದಲ ಯುಗಾದಿ ಆಚರಣೆಯ ಫೋಟೋಗಳನ್ನು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಿಹಿ ಸುದ್ದಿ ನೀಡಿದ ರಿಷಬ್ ಶೆಟ್ಟಿ: 'ಕಾಂತಾರ 2' ಸಿನಿಮಾದ ಬರವಣಿಗೆ ಪ್ರಾರಂಭ