ETV Bharat / entertainment

ತೆರಿಗೆ ವಿಚಾರ: ನ್ಯಾಯಾಲಯದ ಮೆಟ್ಟಿಲೇರಿದ ನಟಿ ಅನುಷ್ಕಾ ಶರ್ಮಾ - Anushka Sharma tax issue

ತೆರಿಗೆ ವಿಚಾರವಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Anushka Sharma tax issue
ನ್ಯಾಯಾಲಯದ ಮೆಟ್ಟಿಲೇರಿದ ನಟಿ ಅನುಷ್ಕಾ ಶರ್ಮಾ
author img

By

Published : Mar 29, 2023, 8:08 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ತಮ್ಮ ವಿರುದ್ಧ ಮಾರಾಟ ತೆರಿಗೆ ಇಲಾಖೆ (Sales Tax department)ಯ ಕ್ರಮಗಳನ್ನು ಪ್ರಶ್ನಿಸಿ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಪುರಸ್ಕರಿಸಿರುವ ಉಚ್ಚ ನ್ಯಾಯಾಲಯವು ಮಾರಾಟ ತೆರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿತ್ತು. ಈಗ, ಆ ನೋಟಿಸ್​ಗೆ ಸೇಲ್ಸ್​ ಟ್ಯಾಕ್ಸ್​ ಡಿಪಾರ್ಟ್​ಮೆಂಟ್​ ಉತ್ತರ ಸಲ್ಲಿಸಿದ್ದು, ಅನುಷ್ಕಾ ಶರ್ಮಾ ಅವರು ತೆರಿಗೆ ಪಾವತಿಸಬೇಕು ಎಂದು ವಾದ ಮಂಡಿಸಿದೆ.

ನಟಿ ಅನುಷ್ಕಾ ಶರ್ಮಾ ಅವರು ಪ್ರಶಸ್ತಿ ಸಮಾರಂಭಗಳು ಅಥವಾ ವೇದಿಕೆ ಕಾರ್ಯಕ್ರಮಗಳಲ್ಲಿ ಆ್ಯಂಕರಿಂಗ್ ಮಾಡಿರುವ ಸಂಬಂಧ "ಕಾಪಿರೈಟ್‌ಗಳ ಮೊದಲ ಮಾಲೀಕರಾಗಿದ್ದಾರೆ" ಮತ್ತು ಅವರಿಂದ ಆದಾಯವನ್ನು ಪಡೆದಾಗ ಮಾರಾಟ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಮಾರಾಟ ತೆರಿಗೆ ಇಲಾಖೆ ಬಾಂಬೆ ಹೈಕೋರ್ಟ್‌ಗೆ ತನ್ನ ಹೇಳಿಕೆ ಸಲ್ಲಿಸಿದೆ.

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರು ಸಲ್ಲಿಸಿದ್ದ ನಾಲ್ಕು ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಇಲಾಖೆ ಬುಧವಾರ ತನ್ನ ಅಫಿಡವಿಟ್‌ಗಳನ್ನು ಸಲ್ಲಿಸಿದೆ. ಮಹಾರಾಷ್ಟ್ರ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿಯಲ್ಲಿ 2012 ರಿಂದ 2016ರ ನಡುವಿನ ಮೌಲ್ಯಮಾಪನ ವರ್ಷಗಳಿಗೆ ತೆರಿಗೆ ಬೇಡಿಕೆಯ ಮಾರಾಟ ತೆರಿಗೆ ಉಪ ಆಯುಕ್ತರು ನೀಡಿದ ನಾಲ್ಕು ಆದೇಶಗಳನ್ನು ಪ್ರಶ್ನಿಸಿ ಬಾಲಿವುಡ್ ನಟಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಚಲನಚಿತ್ರ, ಜಾಹೀರಾತು ಅಥವಾ ವೇದಿಕೆ/ಟಿವಿ ಶೋನಲ್ಲಿ ನಟಿಸುವ ನಟ/ನಟಿಯನ್ನು ಸೃಷ್ಟಿಕರ್ತ ಅಥವಾ ನಿರ್ಮಾಪಕ ಎಂದು ಕರೆಯಲಾಗುವುದಿಲ್ಲ. ಆದ್ದರಿಂದ ಅವರು ಅದರ ಹಕ್ಕುಸ್ವಾಮ್ಯವನ್ನು ಹೊಂದಿರುವುಲ್ಲ ಎಂಬುದು ಶರ್ಮಾ ಅವರ ವಾದವಾಗಿದೆ.

ನ್ಯಾಯಮೂರ್ತಿಗಳಾದ ನಿತಿನ್ ಜಮ್ದಾರ್ ಮತ್ತು ಅಭಯ್ ಅಹುಜಾ ಅವರ ವಿಭಾಗೀಯ ಪೀಠದ ಮುಂದೆ ಬುಧವಾರ ಸಲ್ಲಿಸಿದ ಉತ್ತರದ ಅಫಿಡವಿಟ್‌ನಲ್ಲಿ ತೆರಿಗೆ ಪ್ರಾಧಿಕಾರವು ಈ ದೃಷ್ಟಿಕೋನವನ್ನು ಪ್ರಶ್ನಿಸಿದೆ. ಈ ಕುರಿತು ಗುರುವಾರ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ಏನಿದು ತೆರಿಗೆ ಪ್ರಕರಣ?: ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರಿಗೆ ಮಾರಾಟ ತೆರಿಗೆ ಇಲಾಖೆ ಬಾಕಿ ವಸೂಲಿ ಸಂಬಂಧ ನೋಟಿಸ್ ಜಾರಿ ಮಾಡಿತ್ತು. ಪ್ರಶಸ್ತಿ ಸಮಾರಂಭದಲ್ಲಿ ಅನುಷ್ಕಾ ಮಾಡಿದ ಆ್ಯಂಕರಿಂಗ್​ ಮತ್ತು ಅವರು ನೀಡಿರುವ ಹೇಳಿಕೆಗಳು ಉತ್ಪನ್ನಗಳ ವಾಣಿಜ್ಯ ಜಾಹೀರಾತು ಎಂದು ಮಾರಾಟ ತೆರಿಗೆ ಇಲಾಖೆ ಆರೋಪಿಸಿತ್ತು.

ಇದಕ್ಕಾಗಿ 2012-13ನೇ ಸಾಲಿನ 12.3 ಕೋಟಿ ರೂಪಾಯಿ ಆದಾಯದ ಮೇಲೆ ಬಡ್ಡಿ ಸೇರಿದಂತೆ 1.2 ಕೋಟಿ ಮತ್ತು 2013-14ನೇ ಸಾಲಿನ 17 ಕೋಟಿ ಆದಾಯದ ಮೇಲೆ 1.6 ಕೋಟಿ ರೂಪಾಯಿ ಬಾಕಿ ವಸೂಲಿಗೆ ಮಜಗಾಂವ್ ಮಾರಾಟ ತೆರಿಗೆ ಇಲಾಖೆಯ ಉಪ ಆಯುಕ್ತರು ನೋಟಿಸ್​ ಜಾರಿ ಮಾಡಿದ್ದರು. ಆದರೆ, ಈ ಲೆಕ್ಕಾಚಾರ ತಪ್ಪಾಗಿದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಮತ ಎಣಿಕೆಗೆ ಎರಡು ದಿನ ಬೇಕೆ? ಸಂಚಲನ ಮೂಡಿಸಿದ ಉಪ್ಪಿ ಪ್ರಶ್ನೆ

ನಾನು ಆ್ಯಂಕರಿಂಗ್​ ಮಾಡಿದ್ದ ಪ್ರಶಸ್ತಿ ಸಮಾರಂಭಗಳ ಮೂಲಕ ಹಕ್ಕುಸ್ವಾಮ್ಯ ಪಡೆದುಕೊಂಡಿದ್ದೇನೆ. ಅವುಗಳನ್ನು ಮಾರಾಟ ಮಾಡಿದ್ದೇನೆ ಅಥವಾ ವರ್ಗಾಯಿಸಿದ್ದೇನೆ ಎಂದು ಮೌಲ್ಯಮಾಪನ ಅಧಿಕಾರಿ (ಎಒ) ತಪ್ಪಾಗಿ ಭಾವಿಸಿದ್ದಾರೆ. ವಿಡಿಯೋಗಳ ಹಕ್ಕುಸ್ವಾಮ್ಯವನ್ನು ಯಾವಾಗಲೂ ನಿರ್ಮಾಪಕರೇ ಉಳಿಸಿಕೊಳ್ಳುತ್ತಾರೆ. ನಿರ್ಮಾಪಕರೇ ಇಂತಹ ವಿಡಿಯೋಗಳು ಮತ್ತು ಪ್ರದರ್ಶಕರ ಹಕ್ಕುಗಳನ್ನು ಹೊಂದಿದ್ದಾರೆ. ಅವುಗಳನ್ನು ವರ್ಗಾಯಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗಲ್ಲ ಎಂದು ಅನುಷ್ಕಾ ಶರ್ಮಾ ಪರ ವಕೀಲ ದೀಪಕ್ ಬಾಪಟ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಾಡದ ಅಪರಾಧಕ್ಕೆ ನಾನೇಕೆ ನರಳಬೇಕು?: ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ

ಈ ಹಿಂದೆಯೂ ಅರ್ಜಿಗಳು ತಿರಸ್ಕರಿಸಿದ್ದ ಹೈಕೋರ್ಟ್​: ಇದೇ ಮಾರಾಟ ತೆರಿಗೆ ವಿವಾದ ಪ್ರಕರಣದಲ್ಲಿ ಡಿಸೆಂಬರ್​ನಲ್ಲಿ ಅನುಷ್ಕಾ ಶರ್ಮಾ ಹೈಕೋರ್ಟ್​ಗೆ ಅರ್ಜಿ ಗಳನ್ನು ಸಲ್ಲಿಸಿದ್ದರು. ಆದರೆ, ಆಗ ಮಾರಾಟ ತೆರಿಗೆ ಇಲಾಖೆ ವಿರುದ್ಧ ನೇರವಾಗಿ ಅನುಷ್ಕಾ ತಮ್ಮ ಹೆಸರಲ್ಲಿ ಅರ್ಜಿಗಳನ್ನು ಸಲ್ಲಿಸಿರಲಿಲ್ಲ. ತಮ್ಮ ಸಲಹೆಗಾರರ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಉಚ್ಚ ನ್ಯಾಯಾಲಯವು ಈ ಅರ್ಜಿಗಳನ್ನು ವಜಾಗೊಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.