ETV Bharat / entertainment

ಚೆಕ್ ಬೌನ್ಸ್ ಪ್ರಕರಣ: ರಾಂಚಿ ನ್ಯಾಯಾಲಯಕ್ಕೆ ಹಾಜರಾಗಲಿರುವ ನಟಿ ಅಮೀಶಾ ಪಟೇಲ್ - ಅಮೀಶಾ ಪಟೇಲ್ ಚೆಕ್ ಬೌನ್ಸ್

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅಮೀಶಾ ಪಟೇಲ್ ರಾಂಚಿಯ ಕೆಳ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

Ameesha Patel to appear in Ranchi court
ನ್ಯಾಯಾಲಯಕ್ಕೆ ಹಾಜರಾಗಲಿರುವ ಅಮೀಶಾ ಪಟೇಲ್
author img

By

Published : Jun 21, 2023, 12:00 PM IST

Updated : Jun 21, 2023, 12:16 PM IST

ಚೆಕ್ ಬೌನ್ಸ್ ಮತ್ತು ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ನಟಿ ಅಮೀಶಾ ಪಟೇಲ್ (Ameesha Patel) ಮತ್ತೆ ರಾಂಚಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಸದ್ಯ ಬಾಲಿವುಡ್​ ನಟಿ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಕಳೆದ ವಿಚಾರಣೆಯ ಸಮಯದಲ್ಲಿ, ಜೂನ್ 21 ರಂದು (ಇಂದು) ರಾಂಚಿಯ ಕೆಳ ನ್ಯಾಯಾಲಯದಲ್ಲಿ ಹಾಜರಾಗುವಂತೆ ಆದೇಶಿಸಲಾಗಿತ್ತು.

ಸೂಪರ್​ ಹಿಟ್​​ ಸಿನಿಮಾ 'ಗದರ್' ನಟಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 17 ರಂದು ರಾಂಚಿ ನ್ಯಾಯಾಲಯದಲ್ಲಿ ಶರಣಾಗಿದ್ದರು. ನಂತರ ನ್ಯಾಯಾಲಯ ಅವರಿಗೆ ಜಾಮೀನು ನೀಡಿ ಆದೇಶಿಸಿತ್ತು. ಅಮೀಶಾ ಪಟೇಲ್ ಅವರು ಹಿರಿಯ ವಿಭಾಗದ ನ್ಯಾಯಾಧೀಶ ಡಿ. ಎನ್. ಶುಕ್ಲಾ ಅವರ ಎದುರು ವಿಚಾರಣೆಗೆ ಹಾಜರಾಗಿದ್ದರು. ತಲಾ 10,000 ರೂ.ಗಳ ಎರಡು ಬಾಂಡ್​ಗಳನ್ನು ಸಲ್ಲಿಸಿದ ನಂತರ ಜಾಮೀನು ನೀಡಲಾಗಿತ್ತು. ಜೂನ್ 21 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅಂದು ಆದೇಶಿಸಲಾಗಿತ್ತು.

ರಾಂಚಿ ಮೂಲದ ಚಲನ ಚಿತ್ರ ನಿರ್ಮಾಪಕ ಅಜಯ್ ಕುಮಾರ್ ಅವರು ನಟಿ ಅಮೀಶಾ ಪಟೇಲ್​​ ವಿರುದ್ಧ ಚೆಕ್ ಬೌನ್ಸ್ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೇ ನಟಿ ತಮಗೆ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಿದ್ದಾರೆ. ಈ ದೂರಿನ ಸಂಬಂಧ ನ್ಯಾಯಾಲಯವು ನಟಿಗೆ ಹಲವು ಬಾರಿ ನೋಟಿಸ್ ಕಳುಹಿಸಿತ್ತು. ಆದರೆ ಅಮೀಶಾ ಪಟೇಲ್ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದರು. ಈ ಹಿನ್ನೆಲೆ ನ್ಯಾಯಾಲಯವು ಬಾಲಿವುಡ್​ ನಟಿಯ ವಿರುದ್ಧ ವಾರೆಂಟ್ ಹೊರಡಿಸಿತ್ತು. ಜೂನ್ 17ರಂದು ನಟಿ ಸ್ವತಃ ನ್ಯಾಯಾಲಯಕ್ಕೆ ಬಂದು ಶರಣಾದರು.

2018 ರಲ್ಲಿ, ನಟಿ ಅಮೀಶಾ ಪಟೇಲ್ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಅವರೊಂದಿಗೆ ಚಲನ ಚಿತ್ರವೊಂದರಲ್ಲಿ ಕೆಲಸ ಮಾಡಬೇಕಿತ್ತು. ಸಂಭಾವನೆ ಪಡೆದ ನಂತರವೂ ನಟಿ ತನ್ನ ಸಿನಿಮಾದಲ್ಲಿ ಕೆಲಸ ಮಾಡಲಿಲ್ಲ ಎಂದು ಅಜಯ್ ಕುಮಾರ್ ಆರೋಪಿಸಿದ್ದಾರೆ. ತಮ್ಮ ಹಣವನ್ನು ವಾಪಸ್ ಕೇಳಿದಾಗ ಅದನ್ನು ಮರುಪಾವತಿಸಲು ನಟಿ ಹಿಂದೇಟು ಹಾಕಿದರು. ನಿರಂತರವಾಗಿ ಹಣ ವಾಪಸ್​ ಕೊಡುವಂತೆ ಕೇಳಿದಾಗ ನಟಿ 2.5 ಕೋಟಿ ರೂಪಾಯಿಗಳ ಚೆಕ್ ನೀಡಿದರು, ಅದು ಬೌನ್ಸ್ ಆಯಿತು. ಈ ಕುರಿತು ನಟಿ ನಿರ್ಮಾಪಕರ ನಡುವೆ ಜಗಳ ನಡೆದು ಕೊನೆಗೆ ನಿರ್ಮಾಪಕ ಅಜಯ್ ಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದರು. ವಂಚನೆ, ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಸಿನಿಮಾ ನಿರ್ಮಾಪಕರು ನಟಿ ಅಮೀಶಾ ಪಟೇಲ್​​ ವಿರುದ್ಧ ದೂರು ದಾಖಲಿಸಿದರು.

ಇದನ್ನೂ ಓದಿ: "ಪ್ರೇಕ್ಷಕರು ಇಷ್ಟಪಡಲಿ, ಇಲ್ಲದಿರಲಿ ಕಥೆ ಇರುವುದೇ ಹಾಗೆ": ಹಸಿಬಿಸಿ ದೃಶ್ಯಗಳ ಬಗ್ಗೆ ತಮನ್ನಾ ಭಾಟಿಯಾ ಸ್ಪಷ್ಟನೆ ಹೀಗಿದೆ..

ಈ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅಮೀಶಾ ಪಟೇಲ್ ಕಳೆದ ಶನಿವಾರದಂದು ರಾಂಚಿ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿದ್ದರು. ನ್ಯಾಯಾಧೀಶ ಡಿ. ಎನ್. ಶುಕ್ಲಾ ವಿಚಾರಣೆ ನಡೆಸಿ ನಟಿಗೆ ಜಾಮೀನು ಮಂಜೂರು ಮಾಡಿದ್ದರು. ಮತ್ತೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆ ನಟಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ: Adipurush: ಆದಿಪುರುಷ ಕಲೆಕ್ಷನ್​​​ನಲ್ಲಿ ಇಳಿಕೆ.. ಐದನೇ ದಿನ ಪ್ರಭಾಸ್​​​​​ ಸಿನಿಮಾ ಗಳಿಸಿದ್ದೆಷ್ಟು?

Last Updated : Jun 21, 2023, 12:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.