ETV Bharat / entertainment

'ಕೆ ಡಿ' ರವಿಚಂದ್ರನ್ ಫಸ್ಟ್ ಲುಕ್ ರಿವೀಲ್​.. ಭರ್ಜರಿಯಾಗಿದೆ ಕ್ರೇಜಿಸ್ಟಾರ್​ ಡಿಫರೆಂಟ್​ ಲುಕ್​ - ಕೆ ಡಿ ಸಿನಿಮಾ

ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಶನ್​ನಲ್ಲಿ ಸಿನಿಮಾ - ಭರದಿಂದ ಸಾಗುತ್ತಿದೆ ಕೆ ಡಿ ಶೂಟಿಂಗ್-ರವಿಚಂದ್ರನ್ ಫಸ್ಟ್ ಲುಕ್ ರಿವೀಲ್

Ravichandran first look from KD
ರವಿಚಂದ್ರನ್ ಫಸ್ಟ್ ಲುಕ್ ರಿವೀಲ್​
author img

By

Published : Jan 1, 2023, 5:50 PM IST

ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಶನ್​ನಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕೆ.ಡಿ. ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮಾಡುವ ಮೂಲಕ ಭಾರತೀಯ ಸಿನಿಮಾ ರಂಗದ ಬಾಕ್ಸ್ ಆಫೀಸ್​ನಲ್ಲಿ ಸುನಾಮಿ ಎಬ್ಬಿಸೋ ಮುನ್ಸೂಚನೆ ನೀಡಿತ್ತು ಚಿತ್ರತಂಡ. ಕೆ ಡಿ ಶೂಟಿಂಗ್​​ ಭರದಿಂದ ಸಾಗುತ್ತಿದ್ದು, ಚಿತ್ರತಂಡಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದಾರೆ. ಹೌದು, ನಟ ರವಿಚಂದ್ರನ್ ಅವರ ಫಸ್ಟ್ ಲುಕ್ ರಿವೀಲ್ ಆಗಿದೆ.

ರವಿಚಂದ್ರನ್ ಫಸ್ಟ್ ಲುಕ್: ಕಪ್ಪು ಶರ್ಟ್, ಹಣೆಯಲ್ಲಿ ವಿಭೂತಿ ಹಾಕಿ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದಾರೆ. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಅಭಿನಯದ 'ಕ್ರಾಂತಿ' ಟ್ರೈಲರ್ ಬಿಡುಗಡೆ ದಿನ ಫಿಕ್ಸ್‌ ​

ಜೋಗಿ ಪ್ರೇಮ್‌ ಸೂಪರ್​ ಸ್ಟಾರ್​ಗಳನ್ನು ಕರೆತಂದು ಸಿನಿಮಾ ಮಾಡುವ ಕುರಿತು ಈ ಹಿಂದೆ ಹೇಳಿದ್ದರು. ಅದರಂತೆ ಟೈಟಲ್​ ಲಾಂಚ್​ ಕಾರ್ಯಕ್ರಮವೇ ಬಹಳ ಅದ್ಧೂರಿಯಾಗಿ ನಡೆಯಿತು. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಮತ್ತೊಂದು ವಿಶೇಷವೆಂದ್ರೆ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವರಲ್ಲದೇ ಕೆಲ ಸ್ಟಾರ್ ನಟ ನಟಿಯರ ಎಂಟ್ರಿ ಆಗಲಿದೆಯಂತೆ. ಈ ಬಿಗ್ ಬಜೆಟ್ ಸಿನಿಮಾ ಕೆವಿಎನ್‌ ಪ್ರೊಡಕ್ಷನ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. 70ರ ದಶಕದ ಕಥೆಯುಳ್ಳ ಚಿತ್ರವೇ ಕೆ.ಡಿ.

ಇದನ್ನೂ ಓದಿ: ಶಿವಣ್ಣನ ಘೋಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.