ಬಹುಭಾಷಾ ನಟ, ಚಂದನವನದ ಎವರ್ಗ್ರೀನ್ ಹೀರೋ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಅಭಿನಯ ಮಾತ್ರವಲ್ಲದೇ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉತ್ತಮ ಅಭಿನಯ, ಸಮಾಜ ಸೇವೆ, ಮೋಟಿವೇಶನಲ್ ಸ್ಪೀಚ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿರುವ ಅವರು ಪ್ರತಿ ಬಾರಿ ಏನಾದರೂ ಹೊಸತನ್ನು ಮಾಡಲು ಪ್ರಯತ್ನಿಸುತ್ತಿರುತ್ತಾರೆ.
![Ramesh Aravind dressed as Yakshagana](https://etvbharatimages.akamaized.net/etvbharat/prod-images/16633164_news.jpg)
ಅದರಂತೆ ಈ ಬಾರಿ ಯಕ್ಷಗಾನದ ವೇಷ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ವೃತ್ತಿಪರ ಯಕ್ಷಗಾನ ಕಲಾವಿದತರಂತೆ ಬಣ್ಣ ಹಚ್ಚಿಕೊಂಡು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಡುಪಿ ಪ್ರವಾಸದ ವೇಳೆ ಈ ಯಕ್ಷಗಾನ ವೇಷಭೂಷಣ ತೊಟ್ಟಿದ್ದಾರೆ.
![Ramesh Aravind dressed as Yakshagana](https://etvbharatimages.akamaized.net/etvbharat/prod-images/16633164_dzsfe.jpg)
ಇದೇ ಮೊದಲ ಬಾರಿಗೆ ಈ ಯಕ್ಷಗಾನ ಕಲಾವಿದನ ಗೆಟಪ್ ಧರಿಸಿದ್ದಾರೆ ನಟ ರಮೇಶ್ ಅರವಿಂದ್. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಯಕ್ಷಗಾನದ ಕಲೆ ಮತ್ತು ಅದರ ಕಲಾವಿದರ ಬಗ್ಗೆ ಇದ್ದ ಗೌರವ ಇನ್ನಷ್ಟು ಜಾಸ್ತಿ ಆಯಿತು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಕ್ಷಗಾನದಲ್ಲಿ ನೀವು ನಟಿಸಬೇಕು, ಸಿನಿಮಾದಲ್ಲಿಯೂ ಇಂಥ ಪಾತ್ರ ಮಾಡಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಭಟ್ಕಳ: ಯಕ್ಷಗಾನದ ವೇಷಭೂಷಣ ತೊಟ್ಟ ಸಚಿವ ಸುಧಾಕರ್
ಆರೋಗ್ಯ ಸಚಿವ ಸುಧಾಕರ್ ಅವರು ಮಂಗಳವಾರ ಭಟ್ಕಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಯಕ್ಷಗಾನ ವೀಕ್ಷಿಸಿ ನಂತರ ಯಕ್ಷ ವೇಷವನ್ನು ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಯಕ್ಷ ಪಾತ್ರಧಾರಿಯಾಗಿ ಫೋಟೋಗಳಿಗೆ ಪೋಸ್ ನೀಡಿ ಸಂತಸಪಟ್ಟರು. ಯಕ್ಷಗಾನದ ವೇಷಭೂಷಣದ ಬಗ್ಗೆ ಗೌರವ ಹಾಗೂ ಯಕ್ಷ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಲಾವಿದರನ್ನು ಸನ್ಮಾನಿಸಿದರು.