ETV Bharat / entertainment

ರಕ್ಷಿತ್​ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರೀಕರಣ ಮುಕ್ತಾಯ

ನಟ ರಕ್ಷಿತ್​ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.

rakshit
ಸಪ್ತ ಸಾಗರದಾಚೆ ಎಲ್ಲೋ
author img

By

Published : Mar 20, 2023, 3:04 PM IST

ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟರಾದರು. ಅದಾದ ಬಳಿಕ ಚಾರ್ಲಿ 777 ಸಿನಿಮಾ ಅವರನ್ನು ಸೂಪರ್ ಸ್ಟಾರ್​ ಆಗಿ ಮಾಡಿತು. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ' ಇದೀಗ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಕುರಿತು ಸ್ವತಃ ರಕ್ಷಿತ್​ ಶೆಟ್ಟಿ ಅವರೇ ಅಭಿಮಾನಿಗಳಿಗೆ ಅಪ್​ಡೇಟ್​ ನೀಡಿದ್ದಾರೆ.

'137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ' ಎಂದು ಚಿತ್ರೀಕರಣದ ವಿಡಿಯೋವನ್ನು ಹಂಚಿಕೊಂಡಿರುವ ನಟ ಶೂಟಿಂಗ್​ ಮುಗಿದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಚಿತ್ರ ಮಂದಿರದಲ್ಲಿ ಸಪ್ತ ಸಾಗರದ ಅಲೆ ಪ್ರಾರಂಭವಾದಾಗ ನೀವು ನಿಮ್ಮ ಪಾತ್ರರೊಂದಿಗೆ ಚಿತ್ರ ವೀಕ್ಷಿಸುವಿರಿ ಎಂಬ ಭರವಸೆ ಇದೆ' ಎಂದು ಬರೆದುಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಈಗಾಗಲೇ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಂತರ ನಟ ರಕ್ಷಿತ್​ ಶೆಟ್ಟಿ, ನಿರ್ದೇಶಕ ಹೇಮಂತ್​ ರಾವ್​ ಮತ್ತು ಸಂಗೀತ ನಿರ್ದೇಶಕ ಚರಣ್​ ರಾಜ್​ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಮತ್ತೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಚಿತ್ರ ಮೊದಲ ಟೀಸರ್​ನಿಂದಲೇ ಹೆಚ್ಚು ಪ್ರೇಕ್ಷಕರನ್ನು ಸೆಳೆದಿದೆ. ರಕ್ಷಿತ್​ ಜೊತೆ ನಾಯಕಿಯಾಗಿ ರುಕ್ಮಿಣಿ ವಸಂತ ನಟಿಸುತ್ತಿದ್ದು, ಚಿತ್ರದಲ್ಲಿ ಸುಂದರ ಪ್ರೇಮ ಕಥೆ ಇರುವುದು ಪೋಸ್ಟರ್​ಗಳಿಂದಲೇ ತಿಳಿಯುತ್ತಿದೆ. ರಕ್ಷಿತ್​ ಶೆಟ್ಟಿ ತಮ್ಮದೇ ಪರಂವ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  • 137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ..

    When the waves of #SSE is ready to hit the theatrical shores, we hope you’ll be there with your loved ones to watch it ☺️

    For now, its a wrap to the 137 days of shoot ♥️pic.twitter.com/vHKsvB9BLQ

    — Rakshit Shetty (@rakshitshetty) March 20, 2023 " class="align-text-top noRightClick twitterSection" data=" ">

ನಟನಿಗಿಂತ ನಿರ್ದೇಶಕನೇ ಇಷ್ಟ: ನಟ ರಕ್ಷಿತ್​ ಶೆಟ್ಟಿ ಸ್ಯಾಂಡಲ್​ವುಡ್​ಗೆ ಕಾಲಿರಿಸಿ ಸುಮಾರು ಹತ್ತು ವರ್ಷಗಳಾಗಿವೆ. ತುಘ್ಲಕ್​, ಸಿಂಪಲ್ಲಾಗ್​ ಒಂದು ಲವ್​ ಸ್ಟೋರಿ ಚಿತ್ರದಲ್ಲಿ ಕೇವಲ ನಾಯಕನಾಗಿ ನಟಿಸಿದ್ದ ರಕ್ಷಿತ್​ ಬಳಿಕ ಬರಹಗಾರ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಈ ಹತ್ತು ವರ್ಷಗಳಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ ಮಾಡಬೇಕೆಂಬ ರಕ್ಷಿತ್​ ಕನಸು ಕೂಡ ನೆರವೇರಿದೆ. ಅವನೇ ಶ್ರೀಮನ್ನಾರಾಯಣ ಚಿತ್ರ ಸೋಲಿನ ಕಹಿ ಅನುಭವ ನೀಡಿದ್ದರೂ, ಚಾರ್ಲಿ 777 ಸಿನಿಮಾ ಯಶಸ್ಸನ್ನು ತಂದುಕೊಟ್ಟಿದೆ.

ಇದನ್ನೂ ಓದಿ: 50 ದೇಶ, 5 ಭಾಷೆ: ಎರಡೇ ದಿನಕ್ಕೆ 100‌ ಕೋಟಿ ರೂಪಾಯಿ ಕ್ಲಬ್ ಸೇರಿದ‌ 'ಕಬ್ಜ'

ಉಳಿದವರು ಕಂಡಂತೆ ಸಿನಿಮಾವನ್ನು ಪ್ಯಾನ್​ ಇಂಡಿಯಾ ರೀತಿಯಲ್ಲಿ ಮಾಡಬೇಕೆಂದು ರಕ್ಷಿತ್​ ಕನಸು ಕಂಡಿದ್ದರು. ಆದರೆ ಆ ಕ್ಷಣಕ್ಕೆ ಅದು ನನಸಾಗಿರಲಿಲ್ಲ. ಅಲ್ಲದೇ ರಕ್ಷಿತ್​ ಅವರನ್ನು ಅನೇಕರು ನಿರ್ದೇಶಕರಾಗಿಯೇ ಇಷ್ಟ ಪಡುತ್ತಾರೆ. ವಿಶೇಷ ಅಂದ್ರೆ ರಕ್ಷಿತ್ ಶೆಟ್ಟಿ ಅವರಿಗೂ ತನ್ನಲ್ಲಿರುವ ನಟನಿಗಿಂತ ನಿರ್ದೇಶಕನೇ ಬಹಳ ಇಷ್ಟವಂತೆ. ತನ್ನ ಆಲೋಚನೆಯನ್ನು ಬೆಳ್ಳಿ ತೆರೆಯ ಮೂಲಕ ಜಗತ್ತಿಗೆ ಹೇಳುವುದು ಕೂಡ ಅವರಿಗೆ ಇಷ್ಟವಂತೆ.

ಇದನ್ನೂ ಓದಿ: ಸೆಲೀನ ಗೊಮೆಜ್‌ಗೆ 400 ಮಿಲಿಯನ್‌ ಇನ್‌ಸ್ಟಾಗ್ರಾಮ್ ಫಾಲೋವರ್ಸ್! ಈ ಸಾಧನೆ ಮಾಡಿದ ಮೊದಲ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.