ETV Bharat / entertainment

'Ronny' ಟೀಸರ್​ ಬಿಡುಗಡೆ: ಮಾಸ್​ ಅವತಾರದಲ್ಲಿ ಬಂದ್ರು 'ಕನ್ನಡತಿ' ಹರ್ಷ - ಈಟಿವಿ ಭಾರತ ಕನ್ನಡ

Ronny teaser: 'ಕನ್ನಡತಿ' ಧಾರಾವಾಹಿ ಖ್ಯಾತಿಯ ಕಿರಣ್​ ರಾಜ್​ ನಟನೆಯ 'ರಾನಿ' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

ronny
'ರಾನಿ' ಚಿತ್ರತಂಡ
author img

By

Published : Jul 6, 2023, 6:04 PM IST

'ಕನ್ನಡತಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಕಿರಣ್​ ರಾಜ್​. ಸದ್ಯ ಕಿರುತೆರೆ ಬಿಟ್ಟು ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. 'ರಾನಿ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟೈಟಲ್ ಹಾಗೂ ಪೋಸ್ಟರ್​ನಿಂದ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಮುಕ್ಕಾಲು ಭಾಗದಷ್ಟು ಸಿನಿಮಾದ ಶೂಟಿಂಗ್​ ಮುಗಿಸಿರುವ ಚಿತ್ರತಂಡ ಇದೀಗ ಟೀಸರ್​ ಬಿಡುಗಡೆಗೊಳಿಸಿದೆ.

  • " class="align-text-top noRightClick twitterSection" data="">

ನಟ ಕಿರಣ್​ ರಾಜ್​ ಹುಟ್ಟುಹಬ್ಬದಂದೇ ಟೀಸರ್​ ರಿಲೀಸ್​ ಆಗಿದ್ದು, ನೋಡುಗರ ಮೆಚ್ಚುಗೆ ಪಡೆದಿದೆ. ಬೆಂಗಳೂರಿನ ಮಾಗಡಿ ರಸ್ತೆಯ ವಿಕ್ಟರಿ ಸಿನಿಮಾಸ್​ನಲ್ಲಿ ಅದ್ದೂರಿ ಟೀಸರ್​ ಬಿಡುಗಡೆ ಸಮಾರಂಭ ನಡೆಯಿತು. ಈ ವೇಳೆ, ಕಿರಣ್​ ರಾಜ್​ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹರ್ಷನ ಅಭಿಮಾನಿಗಳು ಉಪಸ್ಥಿತರಿದ್ದರು.

ಮೊದಲಿಗೆ, ಅಭಿಮಾನಿಗಳ ಪ್ರೀತಿಗೆ ಮನ ತುಂಬಿ ಬಂದಿದೆ ಎಂದು ಮಾತು ಪ್ರಾರಂಭಿಸಿದ ಕಿರಣ್​ ರಾಜ್​, "ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರಋಣಿ. 'ರಾನಿ' ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಗುರುತೇಜ್ ಶೆಟ್ಟಿ ವಿಭಿನ್ನ ಕಥೆ ಮಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದೇ ನಿರ್ಮಾಣ ಮಾಡಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ತುಂಬಾ ಚೆನ್ನಾಗಿದೆ" ಎಂದರು.

ಇದನ್ನೂ ಓದಿ: Salaar: 400 ಕೋಟಿ ರೂಪಾಯಿ ವೆಚ್ಚ, 14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್​! ಸಲಾರ್‌ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ

ಬಳಿಕ ನಿರ್ದೇಶಕ ಗುರುತೇಜ್ ಶೆಟ್ಟಿ ಮಾತನಾಡಿ, "ನಾನು ಚಿತ್ರರಂಗದಿಂದ ದೂರ ಉಳಿದಿದ್ದ ಸಮಯದಲ್ಲಿ ಮಿತ್ರ ಗಿರೀಶ್ ಹೆಗಡೆಯವರು, ನಿರ್ಮಾಪಕ ಉಮೇಶ್ ಹೆಗಡೆ ಅವರನ್ನು ಪರಿಚಯಿಸಿದರು. ಉಮೇಶ್ ಹೆಗಡೆ ಹಾಗೂ ಚಂದ್ರಕಾಂತ್ ಪೂಜಾರಿ ಅವರು ಈ ಚಿತ್ರದ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ನಾಯಕ ಕಿರಣ್ ರಾಜ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಕೇವಲ ನಟನೆಗಷ್ಟೇ ಸೀಮಿತವಾಗದೇ, ನನ್ನ ಜೊತೆ ಪ್ರತಿಯೊಂದು ಕೆಲಸದಲ್ಲೂ ಭಾಗಿಯಾಗಿದ್ದಾರೆ‌" ಎಂದು ನುಡಿದರು.

'ರಾನಿ' ಚಿತ್ರತಂಡ ಹೀಗಿದೆ.. ರವಿಶಂಕರ್ ಮೈಕೋ ನಾಗರಾಜ್ , ಉಗ್ರಂ ರವಿ, ಉಗ್ರಂ ಮಂಜು, ಬಿ. ಸುರೇಶ್, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಮುಂತಾದವರನ್ನು ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ಚಿತ್ರದ ನಾಯಕಿಯರಾಗಿದ್ದಾರೆ. ಮೂವರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಘವೇಂದ್ರ ಬಿ. ಕೋಲಾರ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ​ವಿರುವ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತವಿದೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವ​ ಯೋಜನೆಯಲ್ಲಿದ್ದಾರೆ ನಿರ್ಮಾಪಕರು. ಟೀಸರ್​ನಿಂದ ಗಮನ ಸೆಳೆಯುತ್ತಿರುವ 'ರಾನಿ‌' ಕಿರಣ್​ ರಾಜ್​ ಅವರಿಗೆ ಫೇಮ್​ ತಂದುಕೊಡುತ್ತಾ? ಅನ್ನೋದು ಕಾದುನೋಡಬೇಕಿದೆ.

ಇದನ್ನೂ ಓದಿ: ರಾಮ್ ದೀಪ್ ನಿರ್ದೇಶನದ 'ಡೈಮಂಡ್ ಕ್ರಾಸ್' ಚಿತ್ರಕ್ಕೆ ಜೇಡರಹಳ್ಳಿ ಕೃಷ್ಣಪ್ಪ ಸಾಥ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.