ETV Bharat / entertainment

ನಟ ನಿಶ್ ತೇಜಶ್ವರ್​ಗೆ 'ಆರಾಮ್ ಅರವಿಂದ ಸ್ವಾಮಿ' ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್ - Actor Anish Tejeshwar

ಆರಾಮ್ ಅರವಿಂದ ಸ್ವಾಮಿ ಚಿತ್ರತಂಡದಿಂದ ಯುವ ನಟ ಅನಿಶ್ ತೇಜಶ್ವರ್​ಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.

ಯುವ ನಟ ಅನಿಶ್ ತೇಜಶ್ವರ್
ಯುವ ನಟ ಅನಿಶ್ ತೇಜಶ್ವರ್
author img

By ETV Bharat Karnataka Team

Published : Jan 12, 2024, 5:45 PM IST

ಸ್ಯಾಂಡ್​ವುಡ್​ನ ಯುವ ನಟ ಅನೀಶ್ ತೇಜೇಶ್ವರ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅನೀಶ್​ಗೆ 'ಆರಾಮ್ ಅರವಿಂದ ಸ್ವಾಮಿ' ಚಿತ್ರ ತಂಡ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಸ್ಪೆಷಲ್ ಗಿಫ್ಟ್​ ನೀಡಿದೆ. ಸಿನಿಮಾದ ಮೊದಲ ಹಾಡನ್ನು ವಿಂಕ್ ವಿಶಲ್ ಪ್ರೊಡಕ್ಷನ್ ಯೂಟ್ಯೂಬ್​​ನಲ್ಲಿ ಅನಾವರಣ ಮಾಡಲಾಗಿದೆ.

  • " class="align-text-top noRightClick twitterSection" data="">

ಕನ್ನಡ ಚಿತ್ರರಂಗದಲ್ಲಿ ‘ನಮ್‌ ಏರಿಯಾಲಿ ಒಂದ್ ದಿನ’, ‘ಪೊಲೀಸ್‌ ಕ್ವಾಟ್ರಸ್‌’, ‘ಅಕಿರ’, ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ರಾಮಾರ್ಜುನ’ ಹೀಗೆ.. ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ‌ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಅನೀಶ್ ತೇಜೇಶ್ವರ್. ಸದ್ಯ 'ಆರಾಮ್ ಅರವಿಂದ ಸ್ವಾಮಿ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಅವರ ಬರ್ತಡೇ ಸ್ಪೆಷಲ್ ಆಗಿ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ.

'ಆರಾಮ್ ಅರವಿಂದ ಸ್ವಾಮಿ' ಟೈಟಲ್ ಟ್ರ್ಯಾಕ್​​ಗೆ ನಾಗಾರ್ಜುನ್ ಶರ್ಮಾ ಪದಪುಂಜ ಪೊಣಿಸಿದ್ದು, ನಿಶಾನ್ ರೈ ಕಂಠ ದಾನ ನೀಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಹಾಡಿನ ಕಿಕ್ ಏರಿಸಿದೆ. ನಾಯಕನ ಗುಣವನ್ನು ವರ್ಣಿಸುವ ಈ ಟೈಟಲ್ ಟ್ರ್ಯಾಕ್​ಗೆ ಅನೀಶ್ ಜಬರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಹಾಡು ಮೂಡಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್​ಗಳ ಗಮನ ಸೆಳೆಯುತ್ತಿದೆ.

ಚಿತ್ರದ ಪೋಸ್ಟರ್​
ಚಿತ್ರದ ಪೋಸ್ಟರ್​

ತನ್ನ ಪ್ರಮೋಷನ್ ಕಂಟೆಂಟ್​​ನಿಂದಲೇ ಈಗಾಗಲೇ ಸಖತ್​ ಸದ್ದು ಮಾಡುತ್ತಿರುವ 'ಆರಾಮ್ ಅರವಿಂದ ಸ್ವಾಮಿ' ಸಿನಿಮಾಗೆ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ನಮ್ ಗಣಿ ಬಿಕಾಂ ಪಾಸ್', 'ಗಜಾನನ ಆ್ಯಂಡ್​ ಗ್ಯಾಂಗ್' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ರೊಮ್ಯಾಂಟಿಕ್ ಕಾಮಿಡಿ ಕಥೆ ಒಳಗೊಂಡ 'ಆರಾಮ್ ಅರವಿಂದ ಸ್ವಾಮಿ' ಶೂಟಿಂಗ್ ಮುಗಿಸಿದ್ದು ಬಿಡುಗಡೆಗೂ ಸಜ್ಜಾಗಿದ್ದಾನೆ.

ನಾಯಕ ನಟ ಅನೀಶ್ ತೇಜೇಶ್ವರ್​ಗೆ ಜೋಡಿಯಾಗಿ ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಾಯಕಿ ನಟಿಯರಾಗಿ ಕಾಣಿಕೊಳ್ಳಲಿದ್ದಾರೆ. 'ಅಕಿರ' ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ. ಸಿನಿ ಪ್ರೇಮಿಗಳು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

ಇದನ್ನೂ ಓದಿ: 'ಗುಂಟೂರು ಕಾರಂ' ಮೊದಲ ದಿನ ಬಾಕ್ಸ್ ಆಫೀಸ್ ಕಲೆಕ್ಷನ್: ನಟ ಮಹೇಶ್ ಬಾಬು ಅಭಿನಯದ ಚಿತ್ರಕ್ಕೆ ಲಭಿಸಿದ ಬಿಗ್​ ಓಪನಿಂಗ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.